ಕೊರೊನಾ ಎರಡನೇ ಅಲೆ ಆತಂಕ:  ಸ್ವಯಂಪ್ರೇರಣೆಯಿಂದ ಪರೀಕ್ಷೆಗೆ ಮುಗಿಬಿದ್ದ ಜನ
ಮೈಸೂರು

ಕೊರೊನಾ ಎರಡನೇ ಅಲೆ ಆತಂಕ: ಸ್ವಯಂಪ್ರೇರಣೆಯಿಂದ ಪರೀಕ್ಷೆಗೆ ಮುಗಿಬಿದ್ದ ಜನ

April 20, 2021

ಮೈಸೂರು,ಏ.19(ಎಂಟಿವೈ)- ಮುಂಜಾ ಗ್ರತಾ ಕ್ರಮವಾಗಿ ಪರೀಕ್ಷೆ ಮಾಡಿಸಿ, ಸುರ ಕ್ಷತೆ ಖಾತರಿಪಡಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ ಕಿವಿಗೊಡದ ಜನತೆ ಈಗ ಅವರಾಗಿಯೇ ಪರೀಕ್ಷೆ ಮಾಡಿಸಿಕೊಳ್ಳಲು ತವಕಿಸುತ್ತಿದ್ದಾರೆ. ಕೊರೊನಾ ಎರಡನೇ ಅಲೆಯ ಅಬ್ಬರದಿಂದ ಮೈಸೂರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಜನತೆ ಸ್ವಯಂಪ್ರೇರಣೆಯಿಂದ ಕೋವಿಡ್ ಪರೀಕ್ಷೆಗೆ ಮುಗಿಬೀಳುತ್ತಿದ್ದಾರೆ.

ಈ ಹಿಂದೆ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಎಷ್ಟೇ ಮನವಿ ಮಾಡಿದರೂ ಹಿಂದೇಟು ಹಾಕು ತ್ತಿದ್ದರು. ಆದರೆ, ಎರಡನೇ ಅಲೆ ತೀವ್ರತೆಗೆ ಬೆಚ್ಚಿ ಸ್ವಯಂಪರೀಕ್ಷೆಗೆ ಮುಂದೆ ಬರುತ್ತಿ ದ್ದಾರೆ. ಅದರಲ್ಲೂ ಕೆ.ಆರ್.ಆಸ್ಪತ್ರೆ, ಪುರ ಭವನ ಹಾಗೂ ಚಿಕ್ಕಗಡಿಯಾರ ಬಳಿ ತೆರೆದಿ ರುವ ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಪ್ರತಿನಿತ್ಯ ನೂರಾರು ಮಂದಿ ಪರೀಕ್ಷೆ ಮಾಡಿಸಿ ಕೊಳ್ಳಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಕೆ.ಆರ್.ಆಸ್ಪತ್ರೆ: ಮೈಸೂರಿನ ಕೆ.ಆರ್. ಆಸ್ಪತ್ರೆ ಆವರಣದ ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಕಳೆದ ಒಂದು ವಾರದಿಂದ ಪರೀಕ್ಷೆ ಮಾಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆ ಯಲ್ಲಿ ಜನ ಆಗಮಿಸುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗುವವರು, ಗ್ರಾಮೀಣ ಪ್ರದೇಶ ದಿಂದ ಬಂದವರು ನಿತ್ಯವೂ ಸಾವಿರಾರು ಮಂದಿ ಕೆ.ಆರ್.ಆಸ್ಪತ್ರೆ ಆವರಣದ ತಪಾಸಣಾ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.

23 ಕೇಂದ್ರ: ಮೈಸೂರು ನಗರದಲ್ಲಿ ಕೆ.ಆರ್.ಆಸ್ಪತ್ರೆ. ಜಿಲ್ಲಾಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಪುರಭವನ, ಚಿಕ್ಕಗಡಿಯಾರ ವೃತ್ತ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ದಂತೆ 23 ಸ್ಥಳಗಳಲ್ಲಿ ಸರ್ಕಾರದ ವತಿ ಯಿಂದ ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆದರೆÀ ಕೆ.ಆರ್.ಆಸ್ಪತ್ರೆ, ಪುರಭವನ ಹಾಗೂ ಚಿಕ್ಕಗಡಿಯಾರ ಆವ ರಣದ ಕೇಂದ್ರಗಳು ಎಲ್ಲಾ ರೀತಿಯಲ್ಲೂ ಅನುಕೂಲವಾದ್ದರಿಂದ ಜನ ಮುಗಿಬೀಳು ತ್ತಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿ ಭಾರೀ ಜನಜಂಗುಳಿಯೇ ಕಂಡು ಬರುತ್ತಿದೆ.

ಪೊಲೀಸರಿಗೂ ಪರೀಕ್ಷೆ : ಬೆಳಗಾವಿ ಉಪಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಮೈಸೂರಿನ ಮೀಸಲು ಪಡೆಯ 75 ಸಿಬ್ಬಂದಿ ಇಂದು ಮುಂಜಾನೆಯಷ್ಟೇ ಮೈಸೂರಿಗೆ ವಾಪಸ್ಸಾಗಿದ್ದರು. ಮನೆಗೆ ಮರಳುವ ಮುನ್ನ ಇಂದು ಬೆಳಗ್ಗೆ ಕೆ.ಆರ್. ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು.
ತಡವಾಗುತ್ತಿದೆ ಪ್ರಕ್ರಿಯೆ: ಕೋವಿಡ್ ಪರೀಕ್ಷೆಗೆ ಬರುವವರಿಂದ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಗೆ ಹೆಚ್ಚು ಸಮಯ ಹಿಡಿಯುತ್ತಿದೆ. ಈ ಹಿಂದೆ ಮೊಬೈಲ್ ನಂಬರ್ ನೀಡಿ, ಅದಕ್ಕೆ ಬರುವ ಓಟಿಪಿ ನಂಬರ್ ನಮೂದಿಸಿದರೆ ಪರೀಕ್ಷೆಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ ಹೆಸರು, ಆಧಾರ್, ಮೊಬೈಲ್, ಓಟಿಪಿ ನಂಬರ್‍ನೊಂದಿಗೆ ಸಂಪೂರ್ಣ ವಿಳಾಸ ನೀಡಬೇಕು. ಸಾಲದೆಂಬಂತೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಬಂದ ವಾಹನ, ಲಸಿಕೆ (ಮೊದಲ, ಎರಡನೇ), ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಲಾಗು ತ್ತಿದೆ. ಇಷ್ಟೆಲ್ಲಾ ಮಾಹಿತಿ ಪಡೆದ ನಂತರ ಪರೀಕ್ಷೆ ನಡೆಸುವುದರಿಂದ ಒಬ್ಬರಿಗೆ ಕನಿಷ್ಠ ನಾಲ್ಕೈದು ನಿಮಿಷ ಬೇಕಾಗುತ್ತದೆ. ಕೆಲ ವೊಮ್ಮೆ ಸರ್ವರ್ ಡೌನ್ ಆಗುವುದರಿಂ ದಲೂ ನೋಂದಣಿ ಪ್ರಕ್ರಿಯೆ ತಡವಾಗುತ್ತಿದೆ.
ಸಿಬ್ಬಂದಿ ಹೈರಾಣ: ಕೋವಿಡ್ ಪರೀಕ್ಷೆಗೆ ಬರುವವರಿಂದ ಮಾಹಿತಿ ಸಂಗ್ರಹಿಸಿ, ಪರೀಕ್ಷೆ ಮಾಡಿ ಮುಗಿಸುವುದರೊಳಗೆ ಇಲ್ಲಿನ ಸಿಬ್ಬಂದಿ ಸುಸ್ತೋಸುಸ್ತು. ಪಿಪಿಇ ಕಿಟ್ ಧರಿಸಿ ಇಡೀ ದಿನ ಪರೀಕ್ಷೆ ನಡೆಸುವ ಲ್ಯಾಬ್ ಟೆಕ್ನಿಷಿಯನ್‍ಗಳು ಆಗಾಗ ಬಳಲಿ ಬೆಂಡಾಗುತ್ತಿದ್ದಾರೆ. ಆದರೂ ಸುಧಾ ರಿಸಿಕೊಂಡು ಸೇವಾಪರತೆ ಮೆರೆದು, ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.

Translate »