Tag: COVID-19

ಕೊರೊನಾ ಕಫ್ರ್ಯೂ ನಿಯಮ  ಉಲ್ಲಂಘನೆ: 3 ಪ್ರಕರಣ ದಾಖಲು
ಮೈಸೂರು

ಕೊರೊನಾ ಕಫ್ರ್ಯೂ ನಿಯಮ ಉಲ್ಲಂಘನೆ: 3 ಪ್ರಕರಣ ದಾಖಲು

April 12, 2021

ಮೈಸೂರು, ಏ.11(ಎಂಟಿವೈ)-2ನೇ ಹಂತದ ಕೊರೊನಾ ಅಲೆ ಮೈಸೂರಲ್ಲಿ ತೀವ್ರ ಸ್ವರೂಪ ಪಡೆಯುತ್ತಿದ್ದು, ಸೋಂಕು ಹರಡುವಿಕೆ ತಡೆಗಟ್ಟಲು ಕೊರೊನಾ ಕಫ್ರ್ಯೂ ಜಾರಿ ಗೊಳಿಸಿರುವ ನಿಯಮ ಉಲ್ಲಂಘಿಸಿದ 3 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಸಾಲು ಸಾಲು ರಜೆ ಹಾಗೂ ಯುಗಾದಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ಜನಸಂದಣಿ ಉಂಟಾಗಿ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುವುದನ್ನು ಮನಗಂಡು ರಾಜ್ಯ ಸರ್ಕಾರ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಕಫ್ರ್ಯೂ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ವಿವಿಧೆಡೆ ಕೊರೊನಾ…

ಮೈಸೂರಲ್ಲಿ ಸೋಮವಾರ 165 ಮಂದಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಸೋಮವಾರ 165 ಮಂದಿಗೆ ಸೋಂಕು

April 6, 2021

ಮೈಸೂರು, ಏ.5(ಎಸ್‍ಬಿಡಿ)- ಎಲ್ಲೆಡೆ ಕೊರೊನಾ 2ನೇ ಅಲೆ ಅಬ್ಬರಿಸುತ್ತಿದ್ದು, ಮೈಸೂರು ಜಿಲ್ಲೆಯಲ್ಲೂ ಸೋಮವಾರ 165 ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಮತ್ತೆ ಮೂವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಹೊಸ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 56,689 ಜನರಿಗೆ ಕೊರೊನಾ ಬಾಧಿಸಿ ದಂತಾಗಿದೆ. ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖ ಲಾಗಿದ್ದ 33 ವರ್ಷದ ಸೋಂಕಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಅಂದೇ ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 63 ಹಾಗೂ 69 ವರ್ಷದ ವ್ಯಕ್ತಿಗಳಿಬ್ಬರು ಭಾನುವಾರ ಮೃತಪಟ್ಟಿದ್ದಾರೆ. ಈ…

ಮೈಸೂರಲ್ಲಿ ಆತಂಕ ಹೆಚ್ಚಿಸುತ್ತಿರುವ ಕೊರೊನಾ ಕ್ರೌರ್ಯ
ಮೈಸೂರು

ಮೈಸೂರಲ್ಲಿ ಆತಂಕ ಹೆಚ್ಚಿಸುತ್ತಿರುವ ಕೊರೊನಾ ಕ್ರೌರ್ಯ

April 6, 2021

ಮೈಸೂರು, ಏ.5(ಎಸ್‍ಬಿಡಿ)- ಸಾರ್ವ ಜನಿಕರ ನಿರ್ಲಕ್ಷ್ಯದಿಂದ ಮೈಸೂರಲ್ಲಿ ಕೊರೊನಾ ಸೋಂಕು ತೀವ್ರವಾಗಿ ಆವರಿಸುವ ಭೀತಿ ಎದುರಾಗಿದೆ. ದೇಶದೆಲ್ಲೆಡೆ ಕೊರೊನಾದ 2ನೇ ಅಲೆ ಎದ್ದಿದೆ. ಮೈಸೂರು ಜಿಲ್ಲೆಯಲ್ಲೂ ಏಳೆಂಟು ದಿನಗಳಿಂದ ನಿರಂತರವಾಗಿ ನೂರಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಮತ್ತೆ ಸಾವಿನ ಸರಣಿಯೂ ಆರಂಭವಾಗಿದೆ. ಅದರಲ್ಲೂ ಯುವ ಸಮುದಾಯದಲ್ಲಿ ಸೋಂಕು ಹೆಚ್ಚು ಹರಡುತ್ತಿರುವ ಬಗ್ಗೆ ಜಿಲ್ಲಾಧಿ ಕಾರಿಗಳೇ ಕಳವಳ ವ್ಯಕ್ತಪಡಿಸಿದ್ದಾರೆ. ಆದರೂ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಗಳನ್ನು ಮರೆತು, ನಿರ್ಲಕ್ಷ್ಯ ತೋರುತ್ತಿರು ವುದು ಆತಂಕಕಾರಿ ಸಂಗತಿಯಾಗಿದೆ. ನೆಪಕ್ಕಷ್ಟೇ ಮಾಸ್ಕ್: ಮೂಗು-ಬಾಯಿ…

ಕೊರೊನಾ ಎರಡನೇ ಅಲೆ ಆರ್ಭಟ ಜಾತ್ರೆ, ಮೆರವಣಿಗೆ, ಧರಣಿ, ಹಬ್ಬಕ್ಕೆ ಬ್ರೇಕ್
ಮೈಸೂರು

ಕೊರೊನಾ ಎರಡನೇ ಅಲೆ ಆರ್ಭಟ ಜಾತ್ರೆ, ಮೆರವಣಿಗೆ, ಧರಣಿ, ಹಬ್ಬಕ್ಕೆ ಬ್ರೇಕ್

April 6, 2021

ಮೈಸೂರು, ಏ.5(ಎಂಕೆ)- ರಾಜ್ಯದಲ್ಲಿ ಕೋವಿಡ್-19 2ನೇ ಅಲೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆ ಈಗಾಗಲೇ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಜಾತ್ರೆ, ಮೆರವಣಿಗೆ, ಧರಣಿ, ಹಬ್ಬಗಳ ಆಚರಣೆ ಮಾಡದಂತೆ ಆದೇಶ ಹೊರಡಿಸಿದೆ. ಈ ಕುರಿತು ಮೈಸೂರು ನಗರದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಲವು ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಡಿಸಿಪಿ ಪ್ರಕಾಶ್‍ಗೌಡ ತಿಳಿಸಿದ್ದಾರೆ. ನಗರದ ಎಲ್ಲಾ ಪೊಲೀಸ್ ಠಾಣೆಗಳ ವತಿಯಿಂದ ನಿರಂತರ ವಾಗಿ ಕೊರೊನಾ ಜಾಗೃತಿ ಜಾಥಾ, ಉಚಿತ ಮಾಸ್ಕ್ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜೊತೆಗೆ…

ಮೈಸೂರಲ್ಲಿ ಹೆಚ್ಚಿದ ಕೊರೊನಾ ಸೋಂಕು ಒಂದೇ ದಿನ 260 ಪ್ರಕರಣ ದೃಢ
ಮೈಸೂರು

ಮೈಸೂರಲ್ಲಿ ಹೆಚ್ಚಿದ ಕೊರೊನಾ ಸೋಂಕು ಒಂದೇ ದಿನ 260 ಪ್ರಕರಣ ದೃಢ

April 5, 2021

ಮೈಸೂರು, ಏ.4(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಭಾನುವಾರ 260 ಜನರಿಗೆ ಸೋಂಕು ದೃಢಪಟ್ಟಿದೆ. ಕಳೆದ ಐದಾರು ತಿಂಗಳಲ್ಲಿ ಇದು ದಾಖಲೆ ಪ್ರಮಾಣದ ಏರಿಕೆಯಾಗಿದೆ. 2020ರ ಮಾರ್ಚ್ ಅಂತ್ಯದಲ್ಲಿ ವಕ್ಕರಿಸಿದ ಕೊರೊನಾ, ದಿನಕಳೆ ದಂತೆ ಎಲ್ಲೆಡೆ ಆವರಿಸಿಬಿಟ್ಟಿತು. ನಂತರ ಸೆಪ್ಟೆಂಬರ್ ಮಾಹೆ ಯಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿ, ಇತ್ತೀಚೆಗೆ ಎರಡಂಕಿಗೆ ಇಳಿದಿತ್ತು. ಆದರೆ ಕೊರೊನಾ ದಾಳಿಯಿಂದ ಚೇತರಿಸಿಕೊಳ್ಳುವ ಹೊತ್ತಿಗೆ ಇದೀಗ 2ನೇ ಅಲೆ ಅಬ್ಬರಿಸುತ್ತಿದೆ. ಅಂತೆಯೇ ಮೈಸೂರಿನಲ್ಲೂ ಸೋಂಕಿ ತರ ಸಂಖ್ಯೆ…

ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಸೋಂಕು ಹಿನ್ನೆಲೆ ತರಗತಿಯಿಂದ ಹೊರಬಂದ ನಂತರ  ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಿ
ಮೈಸೂರು

ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಸೋಂಕು ಹಿನ್ನೆಲೆ ತರಗತಿಯಿಂದ ಹೊರಬಂದ ನಂತರ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಿ

April 1, 2021

ಮೈಸೂರು, ಮಾ.31(ಎಂಟಿವೈ)- ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡು ಬರು ತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ತರಗತಿ ಮುಗಿದ ಬಳಿಕ ಕಡ್ಡಾಯ ವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ. ಅಮರನಾಥ್ ಸಲಹೆ ನೀಡಿದ್ದಾರೆ. ಮೈಸೂರಲ್ಲಿ ಬುಧವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಮೈಸೂರಿನ ಎರಡು ಶಾಲೆ, ಬನ್ನೂರು, ಕೆ.ಆರ್.ನಗರಗಳ ಶಾಲೆಯ ವಿದ್ಯಾರ್ಥಿ ಗಳಿಗೆ ಸೋಂಕು ದೃಢಪಟ್ಟಿದೆ. ಬನ್ನೂರಲ್ಲಿ 23, ಕೆ.ಆರ್.ನಗರದಲ್ಲಿ 13, ಮೈಸೂರು ನಗರದಲ್ಲಿ 4-5 ವಿದ್ಯಾರ್ಥಿಗಳಲ್ಲಿ ಸೋಂಕು…

ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ  ಕೊರೊನಾ ಮಾರ್ಗಸೂಚಿ ಪಾಲನೆಗೆ ಜನಜಾಗೃತಿ
ಮೈಸೂರು

ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಗೆ ಜನಜಾಗೃತಿ

March 31, 2021

ಮೈಸೂರು,ಮಾ.30(ಎಸ್‍ಪಿಎನ್)-ಕೋವಿಡ್-19 ಸೋಂಕಿನ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಕೆ.ಆರ್.ವಿಭಾಗದ ಎಸಿಪಿ ಎಂ.ಎಸ್.ಪೂರ್ಣಚಂದ್ರ ತೇಜಸ್ವಿ ನೇತೃತ್ವದಲ್ಲಿ(ಕುವೆಂಪುನಗರ ವ್ಯಾಪ್ತಿ) ಹಾಗೂ ಎನ್.ಆರ್.ವಿಭಾಗದ ಎಸಿಪಿ ಎಂ.ಶಿವಶಂಕರ್ ನೇತೃತ್ವದಲ್ಲಿ(ಹೆಬ್ಬಾಳ ವ್ಯಾಪ್ತಿ) ಪ್ರತ್ಯೇಕವಾಗಿ ಕೋವಿಡ್-19 ಮಾರ್ಗಸೂಚಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಮೈಸೂರು ಕುವೆಂಪುನಗರ ಕಾಂಪೆÉ್ಲಕ್ಸ್ ಬಳಿ ರೋಟರಿ ಶ್ರೀಗಂಧ ಮೈಸೂರು, ಶ್ರೀರಾಂಪುರ ವಿಪ್ರ ಬಳಗ, ಸುಯೋಗ ಆಸ್ಪತ್ರೆ ಹಾಗೂ ಕುವೆಂಪುನಗರ ಪೊಲೀಸರ ಸಹಯೋಗದಲ್ಲಿ ಏರ್ಪಡಿಸಿದ್ದ ಕೋವಿಡ್-19 ಮಾರ್ಗಸೂಚಿ ಜಾಗೃತಿ ಕಾರ್ಯಕ್ರಮದಲ್ಲಿ ಎಸಿಪಿ ಪೂರ್ಣಚಂದ್ರ ತೇಜಸ್ವಿ ಭಾಗವಹಿಸಿ ಮಾತನಾಡಿದರು. ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ…

ಕೊರೊನಾ 2ನೇ ಅಲೆಯನ್ನು ಲೆಕ್ಕಿಸದ ಮಹಾಜನ!
ಮೈಸೂರು

ಕೊರೊನಾ 2ನೇ ಅಲೆಯನ್ನು ಲೆಕ್ಕಿಸದ ಮಹಾಜನ!

March 31, 2021

ಮೈಸೂರು,ಮಾ.30(ಪಿಎಂ)-ಕೋವಿಡ್-19 2ನೇ ಅಲೆ ಆತಂಕದ ನಡುವೆಯೂ ಜನದಟ್ಟಣೆ ನಿಯಂ ತ್ರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಗೆ ನಿರ್ಬಂಧ ಇದ್ದಂತೆ ಕಾಣುತ್ತಿಲ್ಲ. ಅದೆಕೋ ಬಹುತೇಕರು ಕೋವಿಡ್‍ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ! ಮೈಸೂರಿನ ಪೂರ್ವ ಉಪ ನೋಂದಣಾ ಧಿಕಾರಿ ಕಚೇರಿಯಲ್ಲಿ ಮಂಗಳವಾರ ನೆರೆದಿದ್ದ ಜನದಟ್ಟಣೆ ಕಂಡು ಪ್ರಜ್ಞಾವಂತ ನಾಗರಿಕರು ಕೊರೊನಾ ಎರಡನೇ ಅಲೆಯ ಆತಂಕದ ಸ್ಥಿತಿಯಲ್ಲಿ ಈ ಪರಿ ಜನ ಸೇರುವುದು ಸೂಕ್ತವೇ? ಎಂದು ಬೇಸರ ವ್ಯಕ್ತಪಡಿಸಿದರು. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಅತ್ಯಂತ ಮುಖ್ಯವಾದ ಕ್ರಮ ದೈಹಿಕ…

ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮವಿಲ್ಲ; ಎಲ್ಲರೂ ಪಡೆಯಿರಿ
ಮೈಸೂರು

ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮವಿಲ್ಲ; ಎಲ್ಲರೂ ಪಡೆಯಿರಿ

March 24, 2021

ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ ಎಂಪವರ್ಮೆಂಟ್ ಸಲಹೆ ಮೈಸೂರು,ಮಾ.23(ಆರ್‍ಕೆಬಿ)- ಕೊರೊನಾ ಸೋಂಕು ಇರಲಿ, ಇಲ್ಲದಿರಲಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಕೋವಿ ಶೀಲ್ಡ್ ಲಸಿಕೆಯನ್ನು ಎಲ್ಲರೂ ಪಡೆಯ ಬಹುದು. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಮೈಸೂರಿನ ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ ಎಂಪವರ್ಮೆಂಟ್ (ಪೇಜ್) ಮೈಸೂರು ಶಾಖೆ ಸಲಹೆ ನೀಡಿದೆ. ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳ ವಾರ ಕೋವಿಡ್ ಲಸಿಕೆಯ ಬಗ್ಗೆ ಇರುವ ಅಪನಂಬಿಕೆ ಮತ್ತು ನಿಜ ಚಿತ್ರಣ’ ಕುರಿತ `ಸಂವಾದ’ ಕಾರ್ಯಕ್ರಮದಲ್ಲಿ ಪೇಜ್…

ಕೋವಿಡ್ ಲಸಿಕೆ ಹಾಕಿಸಲು ವೃದ್ಧಾಶ್ರಮ  ಆಶ್ರಿತರಿಗೆ ಸರ್ಕಾರಿ ವಾಹನಗಳ ವ್ಯವಸ್ಥೆ
ಮೈಸೂರು

ಕೋವಿಡ್ ಲಸಿಕೆ ಹಾಕಿಸಲು ವೃದ್ಧಾಶ್ರಮ ಆಶ್ರಿತರಿಗೆ ಸರ್ಕಾರಿ ವಾಹನಗಳ ವ್ಯವಸ್ಥೆ

March 19, 2021

ಮೈಸೂರು, ಮಾ.18(ಆರ್‍ಕೆ)-ವೃದ್ಧಾಶ್ರಮಗಳಲ್ಲಿ ವಾಸಿಸುತ್ತಿರುವ ಹಿರಿಯರನ್ನು ಕರೆತಂದು ಕೋವಿಡ್ ಲಸಿಕೆ ಹಾಕಿಸಿ, ಅವರನ್ನು ಮತ್ತೆ ಅವರ ಸ್ಥಾನಕ್ಕೆ ಬಿಡಲು ಸರ್ಕಾರಿ ಇಲಾಖೆಗಳ ವಾಹನಗಳನ್ನು ಬಳಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಧೀನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದೇ ರೀತಿ ರೋಟರಿ, ಲಯನ್ಸ್‍ನಂತಹ ಸಂಸ್ಥೆಗಳ ಸದಸ್ಯರ ಕುಟುಂಬದ ಹಿರಿಯರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಶಿಬಿರ ಏರ್ಪಡಿಸಿ ಕೊರೊನಾ ಲಸಿಕೆ ನೀಡುವಂತೆಯೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಕೋವಿಡ್ ಲಸಿಕೆ ಪ್ರಮಾಣವನ್ನು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಬೆನ್ನಲ್ಲೇ…

1 2 3 6