ಮೈಸೂರಲ್ಲಿ ಆತಂಕ ಹೆಚ್ಚಿಸುತ್ತಿರುವ ಕೊರೊನಾ ಕ್ರೌರ್ಯ
ಮೈಸೂರು

ಮೈಸೂರಲ್ಲಿ ಆತಂಕ ಹೆಚ್ಚಿಸುತ್ತಿರುವ ಕೊರೊನಾ ಕ್ರೌರ್ಯ

April 6, 2021

ಮೈಸೂರು, ಏ.5(ಎಸ್‍ಬಿಡಿ)- ಸಾರ್ವ ಜನಿಕರ ನಿರ್ಲಕ್ಷ್ಯದಿಂದ ಮೈಸೂರಲ್ಲಿ ಕೊರೊನಾ ಸೋಂಕು ತೀವ್ರವಾಗಿ ಆವರಿಸುವ ಭೀತಿ ಎದುರಾಗಿದೆ.
ದೇಶದೆಲ್ಲೆಡೆ ಕೊರೊನಾದ 2ನೇ ಅಲೆ ಎದ್ದಿದೆ. ಮೈಸೂರು ಜಿಲ್ಲೆಯಲ್ಲೂ ಏಳೆಂಟು ದಿನಗಳಿಂದ ನಿರಂತರವಾಗಿ ನೂರಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಮತ್ತೆ ಸಾವಿನ ಸರಣಿಯೂ ಆರಂಭವಾಗಿದೆ. ಅದರಲ್ಲೂ ಯುವ ಸಮುದಾಯದಲ್ಲಿ ಸೋಂಕು ಹೆಚ್ಚು ಹರಡುತ್ತಿರುವ ಬಗ್ಗೆ ಜಿಲ್ಲಾಧಿ ಕಾರಿಗಳೇ ಕಳವಳ ವ್ಯಕ್ತಪಡಿಸಿದ್ದಾರೆ. ಆದರೂ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಗಳನ್ನು ಮರೆತು, ನಿರ್ಲಕ್ಷ್ಯ ತೋರುತ್ತಿರು ವುದು ಆತಂಕಕಾರಿ ಸಂಗತಿಯಾಗಿದೆ.

ನೆಪಕ್ಕಷ್ಟೇ ಮಾಸ್ಕ್: ಮೂಗು-ಬಾಯಿ ಮುಚ್ಚುವಂತೆ ಸಮರ್ಪಕ ರೀತಿಯಲ್ಲಿ ಮಾಸ್ಕ್ ಧರಿಸುವವರ ಸಂಖ್ಯೆ ಮೈಸೂರಲ್ಲಿ ತೀರಾ ಕಡಿಮೆ. ಬಹುತೇಕ ಮಂದಿ ಗದ್ದಕ್ಕೆ ಮಾಸ್ಕ್ ಹಾಕಿರುತ್ತಾರೆ. ಪೊಲೀಸರನ್ನು ಕಂಡಾಗ ದಂಡ ಹಾಕಬಹುದು ಎಂಬ ಕಾರಣಕ್ಕೆ ಮಾಸ್ಕ್ ಅನ್ನು ಮೂಗಿನ ಮೇಲೆ ಏರಿಸು ತ್ತಾರೆ. ಮತ್ತಷ್ಟು ಜನ ಮಾಸ್ಕ್ ಅನ್ನು ಮರೆತೇ ಬಿಟ್ಟಿದ್ದಾರೆ. ಮಾರುಕಟ್ಟೆಗಳು, ಬಸ್ ನಿಲ್ದಾಣ, ವಾಣಿಜ್ಯ ಕೇಂದ್ರಗಳು, ಹೋಟೆಲ್, ದೇವಾ ಲಯ ಹೀಗೆ ಎಲ್ಲಿ ನೋಡಿದರೂ ಸರಿ ಯಾಗಿ ಮಾಸ್ಕ್ ಹಾಕಿರುವವರನ್ನು ಹುಡು ಕುವ ಸ್ಥಿತಿ ನಿರ್ಮಾಣವಾಗಿದೆ.

ಎಲ್ಲಿದೆ ಅಂತರ?: ವ್ಯಕ್ತಿಗತ ಅಂತರ ಕಾಯ್ದು ಕೊಳ್ಳುವುದು ಕೊರೊನಾ ಹರಡುವಿಕೆ ತಡೆ ಗಟ್ಟಲು ಇರುವ ಪರಿಣಾಮಕಾರಿ ಕ್ರಮ. ಆದರೆ ವ್ಯಕ್ತಿಗತ ಅಂತರದ ಬಗ್ಗೆ ಯಾರಿಗೂ ಗಮನವಿದ್ದಂತಿಲ್ಲ. ಇನ್ನು ವಿವಾಹ ಮತ್ತಿತರ ಸಮಾರಂಭಗಳಲ್ಲೂ ಜನರಿಗೆ ಮಿತಿಯಿಲ್ಲ. ಕೊರೊನಾ ಹೊಡೆತದ ನಡುವೆಯೂ ಅದ್ಧೂರಿ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿಲ್ಲ. ಪೊಲೀಸರು ಜಾಗೃತಿ ಮೂಡಿಸುತ್ತಿರುವುದು ಹಾಗೂ `ದಂಡ’ ವಿಧಿಸುತ್ತಿರುವುದು ದಂಡ ಎಂಬಂತಾಗಿದೆ. ಜಿಲ್ಲಾಡಳಿತ ಸೂಚನೆ, ಎಚ್ಚರಿಕೆಗಳಿಂದಲೂ ಯಾವುದೇ ಬದಲಾವಣೆ ಯಾಗುತ್ತಿಲ್ಲ. ಈ ನಿರ್ಲಕ್ಷ್ಯ ಮುಂದುವರೆದರೆ ಮತ್ತೊಮ್ಮೆ ಜನಜೀವನದಲ್ಲಿ ತಲ್ಲಣ ಸೃಷ್ಟಿ ಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Translate »