ಮೈಸೂರಲ್ಲಿ ಸೋಮವಾರ 165 ಮಂದಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಸೋಮವಾರ 165 ಮಂದಿಗೆ ಸೋಂಕು

April 6, 2021

ಮೈಸೂರು, ಏ.5(ಎಸ್‍ಬಿಡಿ)- ಎಲ್ಲೆಡೆ ಕೊರೊನಾ 2ನೇ ಅಲೆ ಅಬ್ಬರಿಸುತ್ತಿದ್ದು, ಮೈಸೂರು ಜಿಲ್ಲೆಯಲ್ಲೂ ಸೋಮವಾರ 165 ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಮತ್ತೆ ಮೂವರು ಕೊರೊನಾದಿಂದ ಮೃತಪಟ್ಟಿದ್ದಾರೆ.

ಹೊಸ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 56,689 ಜನರಿಗೆ ಕೊರೊನಾ ಬಾಧಿಸಿ ದಂತಾಗಿದೆ. ಭಾನುವಾರ ಖಾಸಗಿ ಆಸ್ಪತ್ರೆಗೆ ದಾಖ ಲಾಗಿದ್ದ 33 ವರ್ಷದ ಸೋಂಕಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಅಂದೇ ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 63 ಹಾಗೂ 69 ವರ್ಷದ ವ್ಯಕ್ತಿಗಳಿಬ್ಬರು ಭಾನುವಾರ ಮೃತಪಟ್ಟಿದ್ದಾರೆ. ಈ ಮೂವರಿಗೂ ತೀವ್ರ ಉಸಿರಾಟದ ಸಮಸ್ಯೆ ಇತ್ತು ಎಂದು ಆರೋಗ್ಯ ಇಲಾಖೆ ಸೋಮವಾರ ಬಿಡುಗಡೆ ಮಾಡಿರುವ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವರ ಸಂಖ್ಯೆ 1,064ಕ್ಕೆ ಏರಿಕೆಯಾಗಿದೆ. ಭಾನುವಾರ 30 ಸೋಂಕಿ ತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 54,458 ಮಂದಿ ಸೋಂಕು ಮುಕ್ತರಾಗಿದ್ದಾರೆ. ಗುಣಮುಖರಾದವರು ಹಾಗೂ ಸಾವಿನ ಸಂಖ್ಯೆ ಹೊರತುಪಡಿಸಿ ಇನ್ನು 1,167 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಇವರಲ್ಲಿ 422 ಸೋಂಕಿತರು ಹೋಂ ಐಸೊ ಲೇಷನ್‍ನಲ್ಲಿದ್ದು, ಇನ್ನುಳಿದವರು ಸರ್ಕಾರಿ ಹಾಗೂ ಖಾಸಗಿ ನಿಗಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

5 ಸಾವಿರ ಮೀರಿದ ಪ್ರಕರಣ: ಬೆಂಗಳೂರು ನಗರ, ಮೈಸೂರು, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೊನಾ ಅಬ್ಬರ ತೀವ್ರವಾಗಿದ್ದು, ಸೋಮವಾರ 5 ಸಾವಿರಕ್ಕೂ ಅಧಿಕ ಪಾಸಿಟಿವ್, 30ಕ್ಕೂ ಹೆಚ್ಚು ಸಾವು ಪ್ರಕರಣ ವರದಿಯಾಗಿರುವುದು ಆತಂಕ ಸೃಷ್ಟಿಸಿದೆ. ಬಾಗಲಕೋಟೆ 22, ಬಳ್ಳಾರಿ 40, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 34, ಬೆಂಗಳೂರು ನಗರ 3,728, ಬೀದರ್ 264, ಚಾಮರಾಜನಗರ 30, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 32, ಚಿತ್ರದುರ್ಗ 27, ದಕ್ಷಿಣಕನ್ನಡ 56, ದಾವಣಗೆರೆ 9, ಧಾರವಾಡ 55, ಗದಗ 13, ಹಾಸನ 72, ಹಾವೇರಿ 04, ಕಲಬುರಗಿ 181, ಕೊಡಗು 15, ಕೋಲಾರ 82, ಕೊಪ್ಪಳ 20, ಮಂಡ್ಯ 48, ಮೈಸೂರು 165, ರಾಯಚೂರು 17, ರಾಮನಗರ 16, ಶಿವಮೊಗ್ಗ 24, ತುಮಕೂರು 139, ಉಡುಪಿ 59, ಉತ್ತರಕನ್ನಡ 51, ವಿಜಯಪುರ 27 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 17 ಪ್ರಕರಣ ಸೇರಿ ರಾಜ್ಯದಲ್ಲಿ ಸೋಮ ವಾರ 5,279 ಜನರಿಗೆ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ರಾಜ್ಯದ ಸೋಂಕು ಬಾಧಿತರ ಒಟ್ಟು ಸಂಖ್ಯೆ 10,20,434ಕ್ಕೆ ಏರಿಕೆಯಾಗಿದ್ದು, ಸೋಮವಾರ ಗುಣಮುಖ ರಾದ 1,856 ಮಂದಿ ಸೇರಿ ಈವರೆಗೆ 9,65,275 ಜನ ಜನ ಸೋಂಕಿನಿಂದ ಮುಕ್ತರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಜ್ವರದಿಂದ ಮೃತಪಟ್ಟಿರುವ 24 ವರ್ಷದ ಯುವತಿ ಸೇರಿ, ಮೂರ್ನಾಲ್ಕು ದಿನಗಳಲ್ಲಿ 32 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಸೋಮವಾರದ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. ಈ ಪ್ರಕರಣ ಗಳು ಸೇರಿ ಇಲ್ಲಿಯವರೆಗೆ ರಾಜ್ಯದಲ್ಲಿ 12,657 ಜನ ಸೋಂಕಿ ನಿಂದ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆಯ ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ದಿನೇದಿನೆ ಏರಿಕೆ ಕಾಣುತ್ತಿದ್ದು, ಇನ್ನು 42,483 ಜನರಲ್ಲಿ ಸೋಂಕು ಸಕ್ರಿಯವಾಗಿದೆ.

Translate »