ಮೈಸೂರಲ್ಲಿ ಕೊರೊನಾ ಆರ್ಭಟ: ಶನಿವಾರ  ಬರೋಬ್ಬರಿ 811 ಮಂದಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಕೊರೊನಾ ಆರ್ಭಟ: ಶನಿವಾರ ಬರೋಬ್ಬರಿ 811 ಮಂದಿಗೆ ಸೋಂಕು

April 18, 2021

ಮೈಸೂರು,ಏ.17(ಎಸ್‍ಬಿಡಿ)-ಕೊರೊನಾ ಸೋಂಕು ತೀವ್ರಗತಿ ಯಲ್ಲಿ ಹರಡುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ 811 ಪ್ರಕರಣ ಸೇರಿ ರಾಜ್ಯದಲ್ಲಿ ಶನಿವಾರ 17,489 ಜನರಿಗೆ ಕೊರೊನಾ ದೃಢಪಟ್ಟಿದೆ.

ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಶನಿವಾರ ವರದಿಯಾದ 811 ಪ್ರಕರಣಗಳೊಂದಿಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ 60,974ಕ್ಕೆ ಹೆಚ್ಚಿದೆ. ಏ.15ರಂದು 48 ಹಾಗೂ 50 ವರ್ಷದ ವ್ಯಕ್ತಿಗಳು, ನಿನ್ನೆ (ಏ.16) 55 ಹಾಗೂ 76 ವರ್ಷದ ವೃದ್ಧರು, 65, 73, 74 ಹಾಗೂ 85 ವರ್ಷದ ವೃದ್ಧೆಯರು ಸೇರಿ ಎಂಟು ಮಂದಿ ಸಾವನ್ನಪ್ಪಿದ್ದಾ ರೆಂದು ವರದಿಯಾಗಿದೆ. ಇವರೆಲ್ಲರೂ ಉಸಿರಾಟ ಸಮಸ್ಯೆ ಯಿಂದ ಮೃತಪಟ್ಟಿರುವುದು ಗಮನಾರ್ಹ ಸಂಗತಿ. ಇದರೊಂ ದಿಗೆ ಒಟ್ಟು ಸಾವಿನ ಸಂಖ್ಯೆ 1,111ಕ್ಕೆ ಹೆಚ್ಚಿದಂತಾಗಿದೆ.

ಶನಿವಾರ 387 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 56,782 ಮಂದಿ ಸೋಂಕುಮುಕ್ತರಾದಂತಾಗಿದೆ. ಗುಣಮುಖವಾದವರು ಹಾಗೂ ಸಾವಿನ ಸಂಖ್ಯೆ ಹೊರತುಪಡಿಸಿ ಜಿಲ್ಲೆಯಲ್ಲಿನ್ನು 3,081 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಇವರಲ್ಲಿ 696 ಸೋಂಕಿತರು ತಮ್ಮ ಮನೆಯಲ್ಲೇ ಪ್ರತ್ಯೇಕ ವಾಗಿದ್ದುಕೊಂಡು ಶುಶ್ರೂಷೆ ಪಡೆಯುತ್ತಿದ್ದಾರೆ.

ಕೋವಿಡ್ ಕೇರ್ ಸೆಂಟರ್‍ನಲ್ಲಿರುವ 200 ಮಂದಿ ಹೊರತು ಪಡಿಸಿದರೆ ಚಿಕಿತ್ಸೆ ಅಗತ್ಯವಿರುವ ಸೋಂಕಿತರಲ್ಲಿ ಹೆಚ್ಚಿನವರು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡಿದ್ದಾರೆ. ಶನಿವಾರದ ಬುಲೆ ಟಿನ್ ಪ್ರಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ 291 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1,107 ಸೋಂಕಿತರಿದ್ದಾರೆ. ಸರ್ಕಾರಿ ಹೆಲ್ತ್‍ಕೇರ್ ಗಳಲ್ಲಿ 44 ಮಂದಿ ಇದ್ದರೆ, ಖಾಸಗಿ ಹೆಲ್ತ್ ಕೇರ್‍ಗಳಲ್ಲಿ 743 ಸೋಂಕಿತರು ದಾಖಲಾಗಿದ್ದಾರೆ.

ಜಿಲ್ಲಾವಾರು ಪ್ರಕರಣ: ಬಾಗಲಕೋಟೆ 50, ಬಳ್ಳಾರಿ 355, ಬೆಳಗಾವಿ 188, ಬೆಂಗಳೂರು ಗ್ರಾಮಾಂತರ 262, ಬೆಂಗಳೂರು ನಗರ 11,404, ಬೀದರ್ 359, ಚಾಮರಾಜನಗರ 136, ಚಿಕ್ಕಬಳ್ಳಾಪುರ 179, ಚಿಕ್ಕಮಗಳೂರು 68, ಚಿತ್ರದುರ್ಗ 80, ದಕ್ಷಿಣಕನ್ನಡ 309, ದಾವಣಗೆರೆ 122, ಧಾರವಾಡ 272, ಗದಗ 37, ಹಾಸನ 224, ಹಾವೇರಿ 48, ಕಲಬುರಗಿ 560, ಕೊಡಗು 58, ಕೋಲಾರ 144, ಕೊಪ್ಪಳ 121, ಮಂಡ್ಯ 223, ಮೈಸೂರು 811, ರಾಯಚೂರು 91, ರಾಮನಗರ 102, ಶಿವಮೊಗ್ಗ 125, ತುಮಕೂರು 507, ಉಡುಪಿ 118, ಉತ್ತರಕನ್ನಡ 102, ವಿಜಯಪುರ 281 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 153 ಸೇರಿ ರಾಜ್ಯದಲ್ಲಿ ಶನಿವಾರ 17,489 ಹೊಸ ಪ್ರಕರಣ ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ 11,41,998ಕ್ಕೆ ಏರಿಕೆಯಾಗಿದೆ. ಈ ದಿನ ಗುಣಮುಖರಾಗಿ ಡಿಸ್ಚಾರ್ಜ್ ಆದ 5,565 ಮಂದಿ ಸೇರಿ ಈವರೆಗೆ ಒಟ್ಟು 10,09,549 ಸೋಂಕಿತರು ಗುಣಮುಖ ರಾದಂತಾಗಿದೆ. ಮತ್ತೆ 80 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 13,270ಕ್ಕೆ ಹೆಚ್ಚಿದೆ. ರಾಜ್ಯದಲ್ಲಿನ್ನು 1,19,160 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಮೈಸೂರಿನಲ್ಲಿ 40 ಮಂದಿ ಸೇರಿ ರಾಜ್ಯಾದ್ಯಂತ 589 ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Translate »