ಮರ ಹನನ ವಿರೋಧಿಸಿ ಪರಿಸರ  ಸಂರಕ್ಷಣಾ ಸಮಿತಿಯಿಂದ ಸಹಿ ಸಂಗ್ರಹ
ಮೈಸೂರು

ಮರ ಹನನ ವಿರೋಧಿಸಿ ಪರಿಸರ ಸಂರಕ್ಷಣಾ ಸಮಿತಿಯಿಂದ ಸಹಿ ಸಂಗ್ರಹ

April 18, 2021

ಮೈಸೂರು,ಏ.17(ಎಸ್‍ಪಿಎನ್)- ಮೈಸೂರು ಲಲಿತ ಮಹಲ್ ಹೋಟೆಲ್ ಬಳಿ `ಹೆಲಿ ಟೂರಿಸಂ’ ನಿರ್ಮಾಣ ವಿರೋ ಧಿಸಿ ಪರಿಸರ ಸಂರಕ್ಷಣಾ ಸಮಿತಿ ಪದಾಧಿ ಕಾರಿಗಳು ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಶನಿವಾರ ಸಹಿ ಸಂಗ್ರಹ ಚಳವಳಿ ನಡೆಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ನಂಜರಾಜೇ ಅರಸ್ ಮೊದಲಿಗೆ ಸಹಿ ಹಾಕುವ ಮೂಲಕ ಚಳವಳಿಗೆ ಚಾಲನೆ ನೀಡಿದರು. ನಂತರ ಪರಿಸರ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು, 500ಕ್ಕೂ ಹೆಚ್ಚು ವಾಯುವಿಹಾರಿಗಳಿಗೆ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರು.

ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ರಾಜ್ಯ ಸರ್ಕಾರ ಹೆಲಿಟೂರಿಸಂ ಆರಂಭಿ ಸಲು ಮುಂದಾಗಿದೆ. ಇದರಿಂದ ಚಾಮುಂಡಿ ಬೆಟ್ಟದ ಸುತ್ತಲಿನ ಪರಿಸರಕ್ಕೆ ಹಾನಿ ಯಾಗಲಿದೆ. ಲಲಿತಮಹಲ್ ಹೋಟೆಲ್ ಬಳಿಯ ಮರಗಳನ್ನು ತೆರವುಗೊಳಿಸ ಬೇಕೆ? ಬೇಡವೇ? ಎಂಬ ಬಗ್ಗೆ ಸಾರ್ವ ಜನಿಕರ ಅಭಿಪ್ರಾಯ ಸಂಗ್ರಹಿಸಲು ಮೈಸೂರು ಅರಣ್ಯ ಇಲಾಖೆ ಅಧಿಕಾರಿ ಗಳು ಏ.23ರಂದು ಸಭೆ ಕರೆದಿದ್ದಾರೆ. ಸಭೆಯಲ್ಲಿ ಹೆಲಿಟೂರಿಸಂ ವಿರುದ್ಧ ಅಧಿಕಾರಿ ಗಳ ಗಮನ ಸೆಳೆಯಲು ಸಹಿ ಸಂಗ್ರಹ ಚಳವಳಿ ಆರಂಭಿಸಲಾಗಿದೆ ಎಂದು ಪರಿ ಸರ ಹೋರಾಟಗಾರ್ತಿ ಭಾನುಮೋಹನ್ ತಿಳಿಸಿದರು. ಈ ವೇಳೆ ವಕೀಲ ಪುನೀತ್, ಸುರೇಶ್ ಮೌರಿ, ಪರಂಜ್ಯೋತಿ, ಸಪ್ನ, ಕಿರಣ್, ಗಣೇಶ್ ಇತರರಿದ್ದರು.

Translate »