ಸರಿಯಾಗಿ ಅಧ್ಯಯನ ಮಾಡದವರಿಂದ ಜ್ಯೋತಿಷ್ಯಶಾಸ್ತ್ರಕ್ಕೆ ಮೂಢನಂಬಿಕೆ ಪಟ್ಟ
ಮೈಸೂರು

ಸರಿಯಾಗಿ ಅಧ್ಯಯನ ಮಾಡದವರಿಂದ ಜ್ಯೋತಿಷ್ಯಶಾಸ್ತ್ರಕ್ಕೆ ಮೂಢನಂಬಿಕೆ ಪಟ್ಟ

April 18, 2021

ಮೈಸೂರು,ಏ.17(ಪಿಎಂ)- ಜ್ಯೋತಿಷ್ಯ ಶಾಸ್ತ್ರದಲ್ಲಿ ಗಣಿತ ಮಹತ್ವದ ಪಾತ್ರ ವಹಿಸ ಲಿದೆ. ಈ ಶಾಸ್ತ್ರವನ್ನು ಸರಿಯಾಗಿ ಅಧ್ಯ ಯನ ಮಾಡದ ಕೆಲವರ ಹಣದ ಆಸೆಯಿಂದ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಕೆಲವೊಮ್ಮೆ ಮೂಢ ನಂಬಿಕೆ ಎಂಬ ಅಭಿಪ್ರಾಯ ವ್ಯಕ್ತವಾಗು ತ್ತಿದ್ದು, ಇದನ್ನು ಕಳಚುವ ನಿಟ್ಟಿನಲ್ಲಿ ಜ್ಯೋತಿಷ್ಯ ವಲಯ ಕಾರ್ಯಪ್ರವೃತ್ತವಾಗಬೇಕಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು.

ಮೈಸೂರಿನ ಮುಕ್ತ ಗಂಗೋತ್ರಿ ಆವ ರಣದ ಕಾವೇರಿ ಸಭಾಂಗಣದಲ್ಲಿ ಶ್ರೀ ಮಾಯ ಕಾರ ಗುರುಕುಲ, ಕರ್ನಾಟಕ ಸಂಸ್ಕøತ ವಿಶ್ವವಿದ್ಯಾನಿಲಯ ಬೆಂಗಳೂರು, ಕರ್ನಾಟಕ ರಾಜ್ಯ ಜ್ಯೋತಿಷ್ಯ ಹಾಗೂ ಜ್ಯೋತಿಷ್ಯ ಬೋಧನಾ ಸಂಸ್ಥೆಗಳ ಒಕ್ಕೂಟದ ಸಂಯು ಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 4ನೇ ರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನ-2021 ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

`ಜ್ಯೋತಿಷ್ಯ’ ತಾತ್ವಿಕ ನೆಲೆಗಟ್ಟಿನ ಮೇಲೆ ನಿಂತಿರುವ ಶಾಸ್ತ್ರ. ಆದರೆ ಈ ಶಾಸ್ತ್ರವನ್ನು ಸರಿಯಾಗಿ ಅಧ್ಯಯನ ಮಾಡದೇ ಹಣದ ಆಸೆಗೆ ದುರುಪಯೋಗ ಮಾಡಿದ ಕೆಲವ ರಿಂದ ಈ ಶಾಸ್ತ್ರದ ಬಗ್ಗೆ ಕೆಲವೊಮ್ಮೆ ಮೂಢ ನಂಬಿಕೆ ಅಭಿಪ್ರಾಯ ವ್ಯಕ್ತವಾಗುವಂತೆ ಆಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಬರುವಂತೆ ಜ್ಯೋತಿಷಿಗಳು ನಡೆದುಕೊಳ್ಳಬೇಕಿದೆ. ಅದ ಕ್ಕಾಗಿ ಸೂಕ್ತ ಹಾಗೂ ವೈಜ್ಞಾನಿಕ ನೆಲೆಗಟ್ಟಿನ ಅಧ್ಯಯನಕ್ಕೆ ಒತ್ತು ನೀಡಬೇಕಿದೆ. ಆ ಮೂಲಕ ಮೂಢನಂಬಿಕೆ ಎಂಬ ಪಟ್ಟ ಕಳಚಬೇಕಿದೆ ಎಂದು ತಿಳಿಸಿದರು.

ಜ್ಯೋತಿಷ್ಯಶಾಸ್ತ್ರದಲ್ಲಿ ಗಣಿತ ಮಹತ್ವದ ಪಾತ್ರ ವಹಿಸಲಿದೆ. ಈ ಮೂಲಕವೇ ಘಟಿಸ ಬಹುದಾದ ಮತ್ತು ಘಟಿಸಿದ ಘಟನೆಗಳ ಪರಿ ಣಾಮಗಳನ್ನು ಅಂದಾಜಿಸಬಹುದಾಗಿದೆ. ಸಾವಿರಾರು ವರ್ಷಗಳಿಂದ ಅಮಾವಾಸೆ, ಹುಣ್ಣಿಮೆ, ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣ ಸಂಭವಿಸುವುದು ಸೇರಿದಂತೆ ಇತ್ಯಾದಿಗಳನ್ನು ಜ್ಯೋತಿಷ್ಯಶಾಸ್ತ್ರದ ಮೂಲಕ ನಿಖರವಾಗಿ ಗುರುತಿಸಲಾಗುತ್ತಿದೆ ಎಂದರು.

ನಾಗರಿಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯ ತಿಳಿದುಕೊಳ್ಳುವ ಕುತೂಹಲ ಮನುಷ್ಯ ನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನು ವುದು ಸದಾ ರಹಸ್ಯ. ಇದನ್ನು ತಿಳಿಯಲು ಮನುಷ್ಯನ ಪ್ರಯತ್ನ ನಿರಂತರವಾಗಿ ಸಾಗಿದೆ. ಮಾನವ ಸಮಾಜದ ಇತಿಹಾಸ ಅವಲೋಕಿಸಿದರೆ ವರಶಾಸ್ತ್ರ ಬಂದಿದ್ದನ್ನು ಕಾಣಬಹುದು. ಈ ವರಶಾಸ್ತ್ರವೇ ಜ್ಯೋತಿಷ್ಯ ಶಾಸ್ತ್ರವಾಗಿ ಉದಯಿಸಿದೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶ್ವದಾದ್ಯಂತ ಗೌರವ ಮತ್ತು ಮಾನ್ಯತೆ ದೊರಕಿದೆ. ಖಗೋಳ ಶಾಸ್ತ್ರವನ್ನು ಜಗತ್ತಿಗೆ ಕೊಟ್ಟ ಹಿರಿಮೆ ಭಾರ ತೀಯರಿಗೆ ಸಲ್ಲುತ್ತದೆ ಎಂದು ಹೇಳಿದರು.

ಜ್ಯೋತಿಷ್ಯ ಶಾಸ್ತ್ರದ ಪ್ರಯೋಜನ ಕೆಲವರಿಗೇ ಮಾತ್ರ ಸೀಮಿತವಾಗದೇ ಕೃಷಿ ಕರು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಜನಸಾಮಾನ್ಯರಿಗೂ ದೊರೆಯ ಬೇಕು. ಆ ಮೂಲಕ ಸರ್ವರಲ್ಲಿ ಆತ್ಮಸ್ಥೈರ್ಯ ತುಂಬುವ ಮಾರ್ಗದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡುವಂತಾಗಬೇಕು ಎಂದರು.

1971ರಲ್ಲಿ ಜೀವನದಲ್ಲಿ ಒಂದು ನೆಲೆ ಕಾಣುವ ಸಲುವಾಗಿ ಬೆಂಗಳೂರಿಗೆ ಹೋದೆ. ಸಂಜೆ ಕಾಲೇಜಿನಲ್ಲಿ ಓದುತ್ತಿದ್ದ ನಾನು ಒಮ್ಮೆ ಅಲ್ಲಿನ ಗವಿಗಂಗಾಧರಯ್ಯನ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ಈ ವೇಳೆ ದೇವಾಲಯದ ದೀಕ್ಷಿತರು ನನ್ನನ್ನು ಕಂಡು ನಿನಗೆ ಉಜ್ವಲ ಭವಿಷ್ಯವಿದೆ ಎಂದು ನುಡಿದಿದ್ದರು. ನಾನು ಅವರ ಮಾತಿನಲ್ಲಿ ನಂಬಿಕೆ ಇಟ್ಟು ಮುನ್ನಡೆದೆ. ಜೀವನದಲ್ಲಿ ನಂಬಿಕೆ ಎಂಬುದು ದೊಡ್ಡದು. ಅದನ್ನು ಹೊಂದಿ, ಶ್ರಮ ವಹಿಸಿದರೆ ಏನಾ ದರೂ ಸಾಧಿಸಲು ಸಾಧ್ಯವಿದೆ. ಸಣ್ಣ ಗ್ರಾಮ ದಿಂದ ಬೆಂಗಳೂರಿನಲ್ಲಿ ನೆಲೆ ಕಂಡ ನಾನು, 2 ಬಾರಿ ಪಾಲಿಕೆ ಸದಸ್ಯನಾದೆ. 5 ಬಾರಿ ಶಾಸಕ, 2 ಬಾರಿ ವಿಧಾನ ಪರಿಷತ್ ಸದಸ್ಯ ನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ತಾವು ನಡೆದು ಬಂದ ದಾರಿಯನ್ನು ಸ್ಮರಿಸಿದರು.

ಬಸವ ಕಲ್ಯಾಣ ಭಾಗದಲ್ಲಿ ಬಸವಣ್ಣ ನವರು 12ನೇ ಶತಮಾನದಲ್ಲಿ ಸಮಾಜ ಸುಧಾರಣೆಯ ಕ್ರಾಂತಿ ಮಾಡಿದರು. ಅಂತಹ ಸ್ಥಳದಲ್ಲಿ ಇಂದು ಜನಜೀವನ ಸಾಕಷ್ಟು ಹಿಂದುಳಿದಿದೆ. ಬಡ ಕುಟುಂಬಗಳ ಸಂಖ್ಯೆಯೂ ಹೆಚ್ಚಿದೆ. ಇದರ ನಡುವೆಯೂ ಅಲ್ಲಿನ ಜನ ಬಸವಣ್ಣನವರ ಆಚಾರ-ವಿಚಾರ ಪಾಲನೆ ಯಲ್ಲಿ ಹಿಂದುಳಿದಿಲ್ಲ. ಆ ಭಾಗದ ಮಠ ಮಾನ್ಯ ಗಳು ಸಾಕಷ್ಟು ಸುಧಾರಣೆ ತಂದಿದ್ದರೂ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಸರ್ಕಾರ ಹಾಗೂ ರಾಜ್ಯದ ಜನತೆ ಆ ಭಾಗದ ಜನತೆಗೆ ನೆರವಾಗಬೇಕಿದೆ ಎಂದರು. ಇದೇ ವೇಳೆ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಕರ್ನಾಟಕ ಸಂಸ್ಕøತ ವಿವಿ ಉಪ ಕುಲಸಚಿವ ಡಾ.ಪ್ರಕಾಶ್ ಆರ್.ಪಾಗೋಜಿ ಬಿಡುಗಡೆ ಮಾಡಿದರು. ಅಲ್ಲದೆ, ಜ್ಯೋತಿಷಿ ಸೌಭಾಗ್ಯ ಅವರ `ಸರಳ ಜ್ಯೋತಿಷ್ಯ’ ಕೃತಿಯನ್ನು ವಿ. ಸೋಮಣ್ಣ ಬಿಡುಗಡೆಗೊಳಿಸಿದರು. ಇದೇ ವೇಳೆ ಸಚಿವ ವಿ.ಸೋಮಣ್ಣ ಮತ್ತು ಶೈಲಜಾ ದಂಪತಿಯನ್ನು ಸನ್ಮಾನಿಸಲಾಯಿತು. 2 ದಿನ ಗಳ ಸಮ್ಮೇಳನದಲ್ಲಿ ಭಾಗವಹಿಸಲು ತಲಾ 2 ಸಾವಿರ ರೂ. ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ. ಸುತ್ತೂರು ಶ್ರೀಶಿವರಾತ್ರೀ ಶ್ವರ ಪಂಚಾಂಗ ಕರ್ತ ಡಾ.ಕೆ.ಜಿ.ಪುಟ್ಟ ಹೊನ್ನಯ್ಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹೆಚ್.ಎಸ್.ರಮೇಶ್ ಹಂದನಹಳ್ಳಿ, ರಿಷಬ್ ವೆಂಚರ್ಸ್‍ನ ವ್ಯವಸ್ಥಾಪಕ ಪಾಲುದಾರ ಎಸ್.ಪಿ. ಮಧು, ಶ್ರೀ ಮಾಯಕಾರ ಗುರುಕುಲದ ಸಂಸ್ಥಾಪಕ ಡಾ.ಮೂಗೂರು ಮಧು ದೀಕ್ಷಿತ್ ಮತ್ತಿತರರು ಹಾಜರಿದ್ದರು.

Translate »