ಗುಂಗ್ರಾಲ್ ಛತ್ರದಲ್ಲಿ ಐಪಿಎಲ್ ಮಾದರಿ ಜಿಪಿಎಲ್ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ
ಮೈಸೂರು

ಗುಂಗ್ರಾಲ್ ಛತ್ರದಲ್ಲಿ ಐಪಿಎಲ್ ಮಾದರಿ ಜಿಪಿಎಲ್ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ

April 21, 2021

ಮೈಸೂರು,ಏ.20(ವೈಡಿಎಸ್)-ಮೈಸೂರು ತಾಲೂಕಿನ ಗುಂಗ್ರಾಲ್‍ಛತ್ರದಲ್ಲಿ ಐಪಿಎಲ್ ಮಾದರಿಯಲ್ಲಿ ಜಿಪಿಎಲ್(ಗುಂಗ್ರಾಲ್‍ಛತ್ರ ಪ್ರೀಮಿಯರ್ ಲೀಗ್) ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಗುಂಗ್ರಾಲ್ ಛತ್ರ ಸ್ಪೋಟ್ರ್ಸ್ ಕ್ಲಬ್, ಗ್ರಾಮದ ಎಲ್ಲಾ ಆಟ ಗಾರರು ಮತ್ತು ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಬಿಡ್ಡಿಂಗ್ ಮೂಲಕ ಛತ್ರ ಟೈಗರ್ಸ್, ಛತ್ರ ಬುಲ್ಸ್, ಸರ್ಜಿಕಲ್ ಸ್ಟ್ರೈಕರ್, ರೆಡ್‍ವಿಂಗ್, ಪವರ್ ಸ್ಟ್ರೈಕರ್ ಎಂಬ 5 ತಂಡಗಳನ್ನು ಆಯ್ಕೆಮಾಡಲಾಗಿತ್ತು.

ಸರ್ಜಿಕಲ್ ಸ್ಟ್ರೈಕರ್ ನಾಯಕನಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್‍ನ ಉಪಾಧ್ಯಕ್ಷ ಜಿ.ಡಿ. ಹರೀಶ್‍ಗೌಡ, ಛತ್ರ ಟೈಗರ್ಸ್‍ನ ನಾಯಕ ತಿಲಕ್, ಛತ್ರ ಬುಲ್ಸ್ ನಾಯಕ ದಿನೇಶ್, ರೆಡ್‍ವಿಂಗ್‍ನ ನಾಯಕನಾಗಿ ವೆಂಕಟೇಶ್, ಪವರ್ ಸ್ಟ್ರೈಕರ್‍ನ ನಾಯಕನಾಗಿ ವೆಂಕಟೇಶ್ ಅವರು ತಂಡಗಳನ್ನು ಮುನ್ನಡೆಸಿದರು. ಸರ್ಜಿಕಲ್ ಸ್ಟ್ರೈಕರ್ ನಾಯಕನಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್‍ನ ಉಪಾಧ್ಯಕ್ಷ ಜಿ.ಡಿ.ಹರೀಶ್ ಗೌಡರು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗ ವಹಿಸಿದ್ದು ಪಂದ್ಯಾವಳಿಗೆ ಮೆರಗು ನೀಡಿತು.

ಬಹುಮಾನ ವಿತರಣೆ: 2 ದಿನಗಳ ಕಾಲ ನಡೆದ ಗುಂಗ್ರಾಲ್‍ಛತ್ರ ಪ್ರೀಮಿಯರ್ ಲೀಗ್ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗ ವಹಿಸಿದ್ದ ಎಲ್ಲಾ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾದ ಸರ್ಜಿಕಲ್ ಸ್ಟ್ರೈಕರ್ ತಂಡದ ನಾಯಕ ಜಿ.ಡಿ.ಹರೀಶ್‍ಗೌಡ, ಜಿಪಂ ಸದಸ್ಯ ವಿಜಯ್‍ಕುಮಾರ್, ಗ್ರಾಪಂ ಸದಸ್ಯ ಯದುವರ, ವಿಜಯಕುಮಾರ್, ಕೃಷ್ಣಮೂರ್ತಿ, ಯಜಮಾನರಾದ ಸೀತಾ ರಾಮು, ಮಹೇಶ್, ದೇವರಾಜು ಆಯೋ ಜಕರಾದ ಪ್ರೇಮ್ ಕುಮಾರ್, ಸುರೇಶ್, ತಿಲಕ್‍ಕುಮಾರ್, ಬಾಲರಾಜ್, ಪ್ರವೀಣ್, ರಜನಿಕಾಂತ್, ಶಿವಕುಮಾರ್, ಕಿರಣ್ ಇದ್ದರು.

Translate »