‘ತಮಟೆ’ಯಲ್ಲಿ ಕೃಷಿಲೋಕ ಅನಾವರಣ: ಸಿಪಿಕೆ
ಮೈಸೂರು

‘ತಮಟೆ’ಯಲ್ಲಿ ಕೃಷಿಲೋಕ ಅನಾವರಣ: ಸಿಪಿಕೆ

April 21, 2021

ಮೈಸೂರು, ಏ.20(ಎಂಕೆ)- ರೈತರ ವಂಶವೇ ನಿರ್ವಂಶವಾಗುವ ಕಾಲ ಬರು ತ್ತಿದ್ದು, ಗ್ರಾಮೀಣ ಪ್ರದೇಶಗಳ ಜನತೆ ಕಂಗಾ ಲಾಗಿದ್ದಾರೆ. ಆಹಾರ ಪದಾರ್ಥಗಳಿಗೆ ಮಾರು ಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿರುವುದ ರಿಂದ ವಾಣಿಜ್ಯ ಬೆಳೆ ಕೃಷಿ ಮಾಡಿ ಭೂಮಿಯ ಫಲವತ್ತತೆ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಅಧ್ಯಕ್ಷ ಬಡಗಲಪುರ ನಾಗೇಂದ್ರ ವಿಷಾದಿಸಿದರು.

ಮೈಸೂರಿನ ಜಿಲ್ಲಾ ಕಸಾಪ ಸಭಾಂ ಗಣದಲ್ಲಿ ಮಂಗಳವಾರ ಎಸ್.ಟಿ.ಚಂದ್ರೇ ಗೌಡ ಅವರ ‘ತಮಟೆ’ ಕಾದಂಬರಿ ಬಿಡು ಗಡೆಗೊಳಿಸಿದ ನಾಗೇಂದ್ರ, ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸಂಶೋ ಧನೆ, ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಬೆಳೆಯುವ ಕುರಿತು ಲೇಖನ ಬರೆಯುವುದು ಮುಖ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಲೇಖಕರು ‘ತಮಟೆ’ ಕಾದಂಬರಿಯಲ್ಲಿ ಕೃಷಿಲೋಕ ಅನಾವರಣ ಗೊಳಿಸಿದ್ದಾರೆ. ‘ತಮಟೆ’ ಸಂದೇಶ ನೀಡುವು ದರ ಸಂಕೇತ ಎಂದು ವಿಶ್ಲೇಷಿಸಿದರು.

ಕೃಷಿ ಇಲಾಖೆಯಿಂದ ನಿವೃತ್ತಿಯಾದ ಬಳಿಕ ಚಂದ್ರೇಗೌಡ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ್ದಾರೆ. ಗ್ರಾಮೀಣ ಬದುಕಿನ ವಾಸ್ತವ ಸ್ಥಿತಿಗತಿ ಕಾದಂ ಬರಿಯಲ್ಲಿದೆ. ಕೆಲ ಸಾಹಿತಿಗಳು ರಾಜಕೀಯ ಪಕ್ಷಗಳ ವಕ್ತಾರರಾಗಿದ್ದಾರೆ. ಡಾಕ್ಟರೇಟ್ ಮಾರಾಟ ವಾಗುತ್ತಿವೆ. ಈ ರೀತಿಯಾದರೆ ಉತ್ತಮ ಸಂಶೋಧನೆ ಸಾಧ್ಯವೇ? ಕೃಷಿ ಕ್ಷೇತ್ರದ ಬದ ಲಾವಣೆಗಾಗಿ ಸಾಹಿತಿಗಳು ಉತ್ತಮ ಕೃತಿಗಳ ರಚನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಸಲಹೆ ನೀಡಿದರು. ವೈದ್ಯ ಕೀಯ ಲೇಖಕ ಡಾ.ಎಸ್.ಪಿ.ಯೋಗಣ್ಣ, ನಿವೃತ್ತ ಪ್ರಾಧ್ಯಾಪಕಿ ಪದ್ಮಶೇಖರ್, ರಂಗ ಕರ್ಮಿ ರಾಜಶೇಖರ ಕದಂಬ, ಕಸಾಪ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ, ಲೇಖಕ ಎಸ್.ಟಿ. ಚಂದ್ರೇಗೌಡ, ಕೆಂಪುಗೌಡ, ನಿತಿನ್ ವೆಂಕ ಟೇಶ್, ಪ್ರಕಾಶ್ ಬಾಬು ಮತ್ತಿತರರಿದ್ದರು.

Translate »