ಶೇ.78ರಷ್ಟು ಮೈಸೂರು ನಗರ ಸಾರಿಗೆ,  ಶೇ.62ರಷ್ಟು ಗ್ರಾಮಾಂತರ ಸಾರಿಗೆ ಬಸ್ ಸಂಚಾರ
ಮೈಸೂರು

ಶೇ.78ರಷ್ಟು ಮೈಸೂರು ನಗರ ಸಾರಿಗೆ, ಶೇ.62ರಷ್ಟು ಗ್ರಾಮಾಂತರ ಸಾರಿಗೆ ಬಸ್ ಸಂಚಾರ

April 21, 2021

ಮೈಸೂರು,ಏ.20(ಪಿಎಂ)-ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ 14ನೇ ದಿನಕ್ಕೆ ಮಂಗಳವಾರ ಕಾಲಿಟ್ಟಿದ್ದು, ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಬಹುತೇಕ ನೌಕರರು ಕರ್ತವ್ಯ ನಿರ್ವ ಹಿಸುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಅಂತಹ ಸಮಸ್ಯೆ ಎದುರಾಗಿಲ್ಲ.
ಈ ಹಿನ್ನೆಲೆಯಲ್ಲಿ ಇಂದು ಸಹ ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗಗಳ ಬಸ್ ಸಂಚಾರದಲ್ಲಿ ಅಂತಹ ವ್ಯತ್ಯಯ ಉಂಟಾಗಿರಲಿಲ್ಲ. ಒಟ್ಟಾರೆ ಸಾರಿಗೆ ನೌಕರರ ಮುಷ್ಕರ ಮುಂಕಾದಂತೆ ಆಗಿದೆ.

ಇಂದು ಬೆಳಗ್ಗೆಯಿಂದ ಸಂಜೆ 7ರವರೆಗೆ ಮೈಸೂರು ನಗರ ಸಾರಿಗೆ ವಿಭಾಗದಿಂದ 293 ಬಸ್‍ಗಳು ಸಂಚರಿಸಿದ್ದರೆ (ಶೇ.78 ರಷ್ಟು ಬಸ್‍ಗಳ ಸಂಚಾರ), ಗ್ರಾಮಾಂತರ ವಿಭಾಗದಿಂದ 480 ಬಸ್‍ಗಳು ಸಂಚರಿ ಸಿವೆ. ಜೊತೆಗೆ ಖಾಸಗಿ ಬಸ್‍ಗಳಿಗೂ ಸಾರಿಗೆ ಸಂಸ್ಥೆ ನಿಲ್ದಾಣದಿಂದ ತೆರಳಲು ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ 200 ಖಾಸಗಿ ಬಸ್‍ಗಳು ರಸ್ತೆಗಿಳಿಯುವ ಮೂಲಕ ಒಟ್ಟಾರೆ ಗ್ರಾಮಾಂತರ ವಿಭಾಗದಿಂದ ಶೇ.62ರಷ್ಟು ಬಸ್‍ಗಳು ಸಂಚರಿಸಿವೆ.

ನಗರ ಸಾರಿಗೆ ವಿಭಾಗದಿಂದ ಇಂದು ಬೆಳಗ್ಗೆ 10ರ ವೇಳೆಗೆ 220 ಬಸ್‍ಗಳು ರಸ್ತೆಗಿಳಿದಿದ್ದವು. ಈ ವಿಭಾಗದಲ್ಲಿ ಒಟ್ಟು ನಾಲ್ಕು ಡಿಪೋಗಳಿಂದ 375 ಬಸ್ ಗಳಿದ್ದು, ಸಂಜೆವರೆಗೆ 293 ಬಸ್‍ಗಳು ಸಂಚಾರ ನಡೆಸಿದವು. ಚಾಲಕ, ನಿರ್ವಾ ಹಕ ಹಾಗೂ ಚಾಲಕ ಕಂ ನಿರ್ವಾಹಕ ಸೇರಿದಂತೆ ನಗರ ಸಾರಿಗೆಯಲ್ಲಿ ಒಟ್ಟು 1,422 ಸಿಬ್ಬಂದಿ ಇದ್ದು, ಈ ಪೈಕಿ ಕೇವಲ 200 ಮಂದಿ ಹೊರತುಪಡಿಸಿ, ಉಳಿ ದೆಲ್ಲರೂ ಕರ್ತವ್ಯ ನಿರ್ವಹಿಸುತ್ತಿರುವು ದಾಗಿ ಅಧಿಕಾರಿಗಳು ತಿಳಿಸಿದರು.

ಅಂತೆಯೇ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನಗರ ಸಾರಿಗೆ ನಿಲ್ದಾಣದ ಮೂಲಕ ಖಾಸಗಿ ಬಸ್‍ಗಳ ಸಂಚಾರಕ್ಕೆ ಅವಕಾಶ ಮುಂದುವರೆಸಲಾಗಿದೆ. `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ನಗರ ಸಾರಿಗೆ ವಿಭಾಗೀಯ ನಿಯಂ ತ್ರಣಾಧಿಕಾರಿ ಎಸ್.ಪಿ.ನಾಗರಾಜು, ನಗರ ದಲ್ಲಿ ಬಸ್‍ಗಳ ಸಂಚಾರದಲ್ಲಿ ಯಾವುದೇ ಗಂಭೀರ ಸಮಸ್ಯೆಗಳು ಇಲ್ಲ. ಮುಷ್ಕರ ಆರಂಭವಾದ ಒಂದೆರಡು ದಿನದ ಬಳಿ ಕವೇ ಮೈಸೂರು ನಗರ ಸಾರಿಗೆಯಲ್ಲಿ ಬಹುತೇಕ ಸಹಜ ಸ್ಥಿತಿಯೇ ಇದೆ. ನೌಕ ರರ ವಿರುದ್ಧ ಗಂಭೀರ ಕ್ರಮ ಜರುಗಿಸು ವಂತಹ ಸನ್ನಿವೇಶ ನಮ್ಮ ವಿಭಾಗದಲ್ಲಿ ಉದ್ಭವಿಸಿಲ್ಲ. 30 ಮಂದಿ ಸಿಬ್ಬಂದಿಯನ್ನು ಬೇರೆ ವಿಭಾಗಕ್ಕೆ ವರ್ಗ ಮಾಡುವ ಕ್ರಮ ವಷ್ಟೇ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಮಾಂತರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಹೆಚ್.ಶ್ರೀನಿವಾಸ್ `ಮಿತ್ರ’ನೊಂದಿಗೆ ಮಾತನಾಡಿ, ಶೇ.56 ರಷ್ಟು ನೌಕರರು ಕರ್ತವ್ಯಕ್ಕೆ ವರದಿ ಮಾಡಿ ಕೊಂಡಿದ್ದಾರೆ. ಖಾಸಗಿ ಬಸ್‍ಗಳಿಗೂ ಸಾರಿಗೆ ಸಂಸ್ಥೆ ನಿಲ್ದಾಣದ ಮೂಲಕ ಸಂಚ ರಿಸಲು ಅವಕಾಶ ಮುಂದುವರೆದಿದೆ. ಕೋವಿಡ್ ಹಿನ್ನೆಲೆಯಲ್ಲಿ ಜನ ಸಂಚಾ ರವೇ ವಿರಳವಾಗಿದೆ. ಹೀಗಾಗಿ ಯಾವುದೇ ಗಂಭೀರ ಸಮಸ್ಯೆಗಳು ಉದ್ಭವಿಸಿಲ್ಲ ಎಂದು ಮಾಹಿತಿ ನೀಡಿದರು.

Translate »