ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಸಚಿವರ  ಜೊತೆ ನಾನೇ ಹೋಗುತ್ತೇನೆ: ಡಿಕೆಶಿ
News

ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಸಚಿವರ ಜೊತೆ ನಾನೇ ಹೋಗುತ್ತೇನೆ: ಡಿಕೆಶಿ

April 21, 2021

ಬೆಂಗಳೂರು,ಏ.20-ಕೋವಿಡ್-19 ಪರಿಸ್ಥಿತಿ ಅರಿಯುವುದ ಕ್ಕಾಗಿ ರಾಜ್ಯಪಾಲರ ಸಭೆ ಮುಗಿದ, ಬಳಿಕ ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಬರಲು ಸಿದ್ಧವಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ಕೋವಿಡ್‍ನಿಂದ ಮೃತಪಪಟ್ಟ ವರ ಅಂತಿಮ ಸಂಸ್ಕಾರ ಸರ್ಕಾರಿ ಜಾಗದಲ್ಲಿ ಗೌರವಯುತ ವಾಗಿ ಆಗಲಿ ಎಂದು ಶಿವಕುಮಾರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶವ ಸಂಸ್ಕಾರಕ್ಕೂ ತೊಂದರೆಯಾಗು ತ್ತಿರುವುದು ಕಂದಾಯ ಸಚಿವರಿಗೆ ಗೊತ್ತಾಗಬೇಕು. ಸರತಿ ಸಾಲಿನಲ್ಲಿ ನಿಂತು ಹೆಣ ಸುಡುವಂತೆ ಮಾಡುತ್ತಿದ್ದಾರೆ. ಸರ್ಕಾರ ಕೊರೊನಾದಿಂದ ಮೃತಪಟ್ಟವರು ಎಷ್ಟು ಮಂದಿ ಎಂಬುದನ್ನು ಲೆಕ್ಕಪರಿಶೋಧನೆ ಮಾಡಬೇಕು ಎಂದರು.

ಕೋವಿಡ್ ಕುರಿತು ಬರೀ ಸಭೆಗಳನ್ನು ಮಾಡುವುದನ್ನು ಬಿಟ್ಟರೆ ಸರ್ಕಾರ ಬೇರೇನೂ ಮಾಡುತ್ತಿಲ್ಲ. ಇಂತಹ ಬೇಜವಾಬ್ದಾರಿ ಸರ್ಕಾರವನ್ನು ನೋಡಿ ಹಳ್ಳಿಯ ಜನರು ನಗುತ್ತಿದ್ದಾರೆ. ಪಿಎಂ, ಸಿಎಂ ಕೇರ್‍ನಲ್ಲಿ ಹಣ ಎಷ್ಟು ಬಂದಿತು ಎಂಬ ಬಗ್ಗೆ ಜನರಿಗೆ ಲೆಕ್ಕ ಕೊಡಬೇಕು. ಮೊದಲು ಸಿಎಂ, ಪಿಎಂ ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡು ನಂತರ ಬೇರೆಯವರಿಗೆ ಕೊಡಬೇಕಿತ್ತು. ಆದರೆ ಇವರು ಮಾಡಿದ್ದೇನು? ನಿಮಗೆ ಆಡಳಿತ ಮಾಡುವುದಕ್ಕೆ ಬರುವು ದಿಲ್ಲ ಎಂದ ಮೇಲೆ ಸರ್ಕಾರ ಪತನಗೊಳಿಸಬೇಕಿತ್ತು. ಸರ್ಕಾರ ಇನ್ನೂ ಮಲಗಿದೆ ಎದ್ದಿಲ್ಲ, ಬರಿ ಮೀಟಿಂಗ್ ಮಾಡಿಕೊಂಡಿದೆ ಎಂದು ಡಿಕೆಶಿ ಕುಟುಕಿದರು. ರಾಜ್ಯಪಾಲರ ಸಭೆ ಮುಗಿದ ಬಳಿಕ ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಬರಲು ಸಿದ್ಧವಿರುವುದಾಗಿ ಹೇಳಿದ ಡಿ.ಕೆ ಶಿವಕುಮಾರ್, ವಾಸ್ತವಾಂಶ ಅರಿಯೋಣ ಬನ್ನಿ. ಹೋಗೋಣ. ರಾಜ್ಯ ಪಾಲರ ಸಭೆ ಮುಗಿಯಲಿ. ಬೇರೆ ರಾಜ್ಯದ ಪರಿಸ್ಥಿತಿಯೇ ಬೇರೆ. ನಮ್ಮ ರಾಜ್ಯದ ಪರಿಸ್ಥಿತಿಯೇ ಬೇರೆ ಎಂದರು.

ರಾಜ್ಯಪಾಲರ ಆಹ್ವಾನದ ಮೇರೆ ಅವರಿಗೆ ಗೌರವ ಕೊಟ್ಟು ಸರ್ವ ಪಕ್ಷ ನಾಯಕರ ಸಭೆಗೆ ಹಾಜರಾಗುತ್ತಿ ದ್ದೇವೆ. ರಾಜ್ಯಪಾಲರ ಸಭೆ ಸಂವಿಧಾನದ ಯಾವ ಅಡಿಯಲ್ಲಿ ಕರೆದಿದ್ದಾರೆ ಎಂದು ಗೊತ್ತಿಲ್ಲ, ಕರೆಯಬಹುದಾ ಎಂದೂ ಗೊತ್ತಿಲ್ಲ. ಸಿಎಂ ಆಸ್ಪತ್ರೆಗೆ ದಾಖಲಾಗಿರುವ ಕಾರಣ ರಾಜ್ಯಪಾಲರು ಸಭೆ ಮಾಡುತ್ತಾರೆ ಎಂದು ನಮಗೆ ನೋಟಿಸ್ ಬಂದಿದೆ. ರಾಜ್ಯಪಾಲರು ಯಾವ ಅಡಿಯಲ್ಲಿ ಕರೆದಿದ್ದಾರೆ ಎಂದು ಗೊತ್ತಿಲ್ಲ. ಇದನ್ನು ಕಾನೂನು ಸಚಿವರು ಹೇಳಬೇಕು. ಇವರು ಹೇಳಿದಂತೆ ನಾವೇ ಎಲ್ಲವನ್ನು ಮಾಡಿದ್ದೇವೆ. ರಾಜ್ಯದಲ್ಲಿ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ರಾಜ್ಯಪಾಲರು ಬಂದಿದ್ದಾರೆ. 1,20,000 ಜನರಿಗೆ ಪೂರ್ವಭಾವಿ ಎಚ್ಚರಿಕೆ ನೀಡುವಂತೆ ತಜ್ಞರು ಹೇಳಿದರೂ ಕೇಳದೆ ಆರೋಗ್ಯ ಸಚಿವರು ಕೇವಲ ಪೇಪರ್ ಬಗ್ಗೆ ಮಾತನಾಡುತ್ತಿದ್ದಾರೆ. ಐಎಎಸ್, ಕೆಎಎಸ್ ಅಧಿಕಾರಿಗಳನ್ನೆಲ್ಲ ಬಳಸಿಕೊಂಡು ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡ ಬೇಕು. ಕೋವಿಡ್ ಅನ್ನು ಸರಿಯಾದ ರೀತಿಯಲ್ಲಿ ಗಮನಿಸದೇ ಇರುವುದು ಸರ್ಕಾರದ ಬೇಜವಾಬ್ದಾರಿತನ ಎಂದು ಟೀಕಿಸಿದರು.

Translate »