ಹೋಟೆಲ್ ಮಾಲೀಕರ ಸಂಘದಿಂದ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಹೋಟೆಲ್ ಮಾಲೀಕರ ಸಂಘದಿಂದ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಣೆ

May 24, 2020

ಮೈಸೂರು: ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಅಶೋಕಪುರಂನ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಲಾಯಿತು. ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಸಂಘದ ಸಭಾಂಗಣದಲ್ಲಿ ಅಕ್ಕಿ, ಸಕ್ಕರೆ, ಬೇಳೆ, ಎಣ್ಣೆ, ರವೆ, ಸಾಂಬಾರ್‍ಪೌಡರ್, ಉದ್ದಿನಬೇಳೆ, ಗೋಧಿಹಿಟ್ಟು, ಉಪ್ಪುಗಳನ್ನೊಳಗೊಂಡ ದಿನಸಿ ಕಿಟ್ ಅನ್ನು 20 ಮಂದಿ ಆಟೋ ಚಾಲಕರಿಗೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್ ವಿತರಿಸಿದರು.

ಇದೇವೇಳೆ ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಡುಬಡವರಿಗೆ ಪಾಲಿಕೆ ವತಿಯಿಂದ ದಿನಸಿ ಕಿಟ್ ವಿತರಿಸುತ್ತಿದ್ದು, 4 ಸಾವಿರ ಪ್ಯಾಕೆಟ್ ಅಡುಗೆ ಎಣ್ಣೆ ಖರೀದಿಸಲು ಹೋಟೆಲ್ ಮಾಲೀಕರ ಸಂಘದ ವತಿಯಿಂದ 1.90 ಲಕ್ಷ ರೂ. ಚೆಕ್ ಅನ್ನು ಸಂಘದ ಅಧ್ಯಕ್ಷ ನಾರಾಯಣಗೌಡ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್ ಅವರಿಗೆ ಹಸ್ತಾಂ ತರಿಸಿದರು. ನಂತರ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಲಾಕ್‍ಡೌನ್ ನಿಂದಾಗಿ ಆದಾಯವಿಲ್ಲದೆ ಆರ್ಥಿಕವಾಗಿ ಹಿಂದುಳಿದ ಅಶೋಕಪುರಂನ 20 ಮಂದಿ ಆಟೋ ಚಾಲಕರನ್ನು ಗುರುತಿಸಿ ದಿನಸಿ ಕಿಟ್ ನೀಡಲಾಗಿದೆ. ಇದುವರೆಗೆ 700 ಕಿಟ್‍ಗಳನ್ನು ನೀಡಿದ್ದು, 20 ಸಾವಿರ ಆಹಾರ ಪೊಟ್ಟಣ ವಿತರಿಸಿದ್ದೇವೆ. ಹೀಗೆ ಸಂಘವು ಹಿಂದಿ ನಿಂದಲೂ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.

Translate »