Tag: Ramzan

ಸಾಮೂಹಿಕ ಪ್ರಾರ್ಥನೆಗೆ ಮನವಿ ಮಾಡಿದ್ದೇವೆ
ಮೈಸೂರು

ಸಾಮೂಹಿಕ ಪ್ರಾರ್ಥನೆಗೆ ಮನವಿ ಮಾಡಿದ್ದೇವೆ

May 24, 2020

ಮೈಸೂರು, ಮೇ 23(ಆರ್‍ಕೆ)-ರಂಜಾನ್ ಪ್ರಯುಕ್ತ ಸಾಮಾಜಿಕ ಅಂತರ ಕಾಯ್ದು ಕೊಂಡು ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶ ಮಾಡಿ ಕೊಡಬೇಕೆಂದು ಕೋರಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ಮೈಸೂರು ಮೇಯರ್ ತಸ್ನೀಂ ತಿಳಿಸಿದ್ದಾರೆ. `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ನಿಯಮಿತ ಮಂದಿ ಸೇರಿ ಮೈಸೂರಿನ ಈದ್ಗಾ ಮೈದಾನದಲ್ಲಿ ಅಥವಾ ಮಸೀದಿಗಳಲ್ಲಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಬೇಕೆಂದು ಕೋರಿಕೊಂಡಿದ್ದೇವೆ. ಸರ್ಕಾರದಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿ ದ್ದೇವೆ. ಸರ್ಕಾರದ ನಿರ್ದೇಶನವನ್ನು ನಾವು ಚಾಚೂ ತಪ್ಪದೇ…

ನಾಳೆ ರಂಜಾನ್: ಮೈಸೂರಲ್ಲಿ ಸಂಭ್ರಮದ ಸಿದ್ಧತೆ
ಮೈಸೂರು

ನಾಳೆ ರಂಜಾನ್: ಮೈಸೂರಲ್ಲಿ ಸಂಭ್ರಮದ ಸಿದ್ಧತೆ

May 24, 2020

ಮೈಸೂರು: ಪವಿತ್ರ ರಂಜಾನ್ ಹಬ್ಬಕ್ಕೆ ಇನ್ನೆರಡು ದಿನವಷ್ಟೇ ಬಾಕಿಯಿದ್ದು, ಕೊರೊನಾ ಆತಂಕದ ನಡುವೆಯೂ ನಗರದಲ್ಲಿ ಸಡಗರದಿಂದ ಹಬ್ಬ ಆಚರಣೆಗೆ ಮುಸ್ಲಿಂ ಸಮುದಾಯ ದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಭಾನುವಾರ ಪೂರ್ಣ ಲಾಕ್‍ಡೌನ್ ಘೋಷಣೆ ಆಗಿರುವುದರಿಂದ ಹಬ್ಬಕ್ಕೆ ಅಗತ್ಯ ವಾದ ವಸ್ತುಗಳ ಖರೀದಿ ಅಸಾಧ್ಯ ಎಂಬು ದನ್ನು ಅರಿತ ಮುಸ್ಲಿಂ ಬಾಂಧವರು ಶನಿ ವಾರ ಬೆಳಿಗ್ಗೆಯಿಂದ ಸಂಜೆವರೆಗೂ ಶಾಪಿಂಗ್ ನಡೆಸಿದರು. ದೇವರಾಜ ಮಾರು ಕಟ್ಟೆ, ಮೀನಾ ಬಜಾರ್, ಕೆ.ಟಿ. ಸ್ಟ್ರೀಟ್ ಸೇರಿದಂತೆ ಹಲವೆಡೆ ಹೊಸ ಬಟ್ಟೆ ಮತ್ತಿ ತರ…

ಮುಸ್ಲಿಂ ಬಾಂಧವರಿಗೆ ದಿನಸಿ, ರಂಜಾನ್ ಕಿಟ್ ವಿತರಣೆ
ಮೈಸೂರು

ಮುಸ್ಲಿಂ ಬಾಂಧವರಿಗೆ ದಿನಸಿ, ರಂಜಾನ್ ಕಿಟ್ ವಿತರಣೆ

May 24, 2020

ಮೈಸೂರು, ಮೇ 23(ಪಿಎಂ)- ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ರಂಜಾನ್ ಅಂಗವಾಗಿ ಮುಸ್ಲಿಂ ಬಾಂಧವರಿಗೆ ದಿನಸಿ ಕಿಟ್ ಹಾಗೂ ರಂಜಾನ್ ಕಿಟ್‍ಗಳನ್ನು ಶನಿವಾರ ವಿತರಣೆ ಮಾಡಲಾಯಿತು. ಮೈಸೂರಿನ ಜಯನಗರದಲ್ಲಿ ಬಳಗದ ಮುಖಂಡರೂ ಆದ ಮೈಸೂರು ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹಾದೇವ ಸ್ವಾಮಿ ದಿನಸಿ ಕಿಟ್ ಹಾಗೂ ರಂಜಾನ್ ಕಿಟ್‍ಗಳನ್ನು (ಡ್ರೈಫ್ರೂಟ್ಸ್) ವಿತರಣೆ ಮಾಡಿ, ಶುಭ ಕೋರಿದರು. ಬಳಿಕ ಮಾತನಾಡಿದ ಎಲ್.ಆರ್….

ರಂಜಾನ್: ನೂರಾರು ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ನಾಗೇಂದ್ರ
ಮೈಸೂರು

ರಂಜಾನ್: ನೂರಾರು ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ನಾಗೇಂದ್ರ

May 24, 2020

ಮೈಸೂರು: ರಂಜಾನ್ ಹಬ್ಬದಂಗವಾಗಿ ಮುಸ್ಲಿಂ ಸಮುದಾಯದ 600ಕ್ಕೂ ಹೆಚ್ಚು ಕುಟುಂಬಗಳಿಗೆ ಅಶೋಕ ರಸ್ತೆಯಲ್ಲಿನ ಸರ್ಕಾರಿ ನಿಜಾಮಿಯ ಬಾಡಿಗಾರ್ಡ್ ಪ್ರೌಢಶಾಲೆ ಆವರಣದಲ್ಲಿ ಶಾಸಕ ಎಲ್.ನಾಗೇಂದ್ರ ದಿನಸಿ ಕಿಟ್ ವಿತರಿಸಿದರು. ಬಳಿಕ ಮಾತನಾಡಿದ ಶಾಸಕರು, ರಂಜಾನ್ ಪ್ರಯುಕ್ತ ಹಾಗೂ ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿರುವ ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಇನ್ನೆರಡು ದಿನದಲ್ಲಿ ರಂಜಾನ್ ಹಬ್ಬವಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಹಬ್ಬ ಆಚರಿಸಿ ಎಂದರಲ್ಲದೆ, ಹಬ್ಬದ ಶುಭಾಶಯ ಕೋರಿದರು. ಮೇಯರ್ ತಸ್ನಿಂ ಮಾತನಾಡಿ, ವಾರ್ಡ್ 25 ಮತ್ತು 26ರಲ್ಲಿ…

ಮೈಸೂರಲ್ಲಿ ಭಕ್ತಿ-ಭಾವದ ರಂಜಾನ್ ಪ್ರಾರ್ಥನೆ
ಮೈಸೂರು

ಮೈಸೂರಲ್ಲಿ ಭಕ್ತಿ-ಭಾವದ ರಂಜಾನ್ ಪ್ರಾರ್ಥನೆ

June 17, 2018

ಮೈಸೂರು:  ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಭಕ್ತಿ-ಭಾವ ಹಾಗೂ ಸಂಭ್ರಮದಿಂದ ಶನಿವಾರ ರಂಜಾನ್ ಆಚರಿಸಿದರು. ತಿಲಕ್‍ನಗರದಲ್ಲಿರುವ ಈದ್ಗಾ ಮೈದಾನ, ರಾಜೀವ್‍ನಗರ 3ನೇ ಹಂತದ ಗೌಸಿಯಾ ನಗರ ಸೇರಿದಂತೆ ನಗರದ ಹಲವು ಈದ್ಗಾ ಮೈದಾನ ಹಾಗೂ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸರ್‍ಖಾಜಿ ಆಫ್ ಮೈಸೂರು ಡಾ. ಮೌಲಾನಾ ಮೊಹಮದ್ ಉಸ್ಮಾನ್ ಷರೀಫ್ ಅವರು ತಿಲಕ್‍ನಗರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ನಾಡಿನ ಜನತೆಗೆ ರಂಜಾನ್ ಸಂದೇಶ ನೀಡಿದರು. ಬಡವರ ಹಸಿವಿನ ತೀವ್ರತೆ ಏನೆಂಬು ದನ್ನು ಅರಿಯಲು…

ಮುಸ್ಲಿಂ ಬಾಂಧವರಿಂದ ರಂಜಾನ್ ಆಚರಣೆ
ಕೊಡಗು

ಮುಸ್ಲಿಂ ಬಾಂಧವರಿಂದ ರಂಜಾನ್ ಆಚರಣೆ

June 17, 2018

ಮಡಿಕೇರಿ: ನಗರದ ಮಹದೇವಪೇಟೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು. ಬಳಿಕ ರಾಣಿಪೇಟೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಹಬ್ಬದ ವೃತದಾರಿಗಳು ಪ್ರಾರ್ಥನೆಯ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಡಿಕೇರಿಯ ಹಿಲ್‍ರಸ್ತೆಯ ಅಹ್ಮದಿಯಾ ಮುಸ್ಲಿಂ ಜಮಾಅತ್ ಮಸೀದಿಯಲ್ಲಿ ‘ಈದುಲ್ ಫಿತರ್’ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಸೀದಿಯ ಧರ್ಮ ಗುರುಗಳಾದ ಹಾಫಿಝ್ ರಫೀಕ್ ಉಜ್ಜಮಾ ಅವರ ನೇತೃತ್ವದಲ್ಲಿ ತಕ್ಬೀರ್, ವಿಶೇಷ ನಮಾಝ್ ನಿರ್ವಹಿಸಿದ ಬಳಿಕ ಧಾರ್ಮಿಕ…

ರಂಜಾನ್ ವೇಳೆ ಸಹಬಾಳ್ವೆಯ  ಸಂದೇಶ ಸಾರಿದ ಕೌಟಿಲ್ಯ ವಿದ್ಯಾಲಯ
ಮೈಸೂರು

ರಂಜಾನ್ ವೇಳೆ ಸಹಬಾಳ್ವೆಯ  ಸಂದೇಶ ಸಾರಿದ ಕೌಟಿಲ್ಯ ವಿದ್ಯಾಲಯ

June 17, 2018

ಮೈಸೂರು:  ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ, ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವಂತಹ ರಂಜಾನ್ ಹಬ್ಬ ಎಂದೇ ಜನಪ್ರಿಯವಾಗಿರುವ ಈದ್-ಉಲ್-ಫಿತರ್ ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದಲೇ ಆಚರಿಸಲ್ಪಟ್ಟಿತು. ಪವಿತ್ರ ಕುರಾನಿನ ಪಠಣೆ ಮಾಡಿ ರಂಜಾನ್ ಆಚರಣೆಯ ಅರಿವು ಮತ್ತು ಆಚರಣೆಯ ಉದ್ದೇಶದ ಬಗ್ಗೆ ತಿಳಿಸಲಾಯಿತು. ವಿದ್ಯಾಲಯದ ಅಧ್ಯಕ್ಷರಾದ ಆರ್.ರಘು ಮಾತನಾಡುತ್ತ ‘ಮನುಷ್ಯ ಮನುಷ್ಯನನ್ನು ಪ್ರೀತಿಸುವ, ಒಬ್ಬರ ವಿಚಾರವನ್ನು ಇನ್ನೊಬ್ಬರ ಜೊತೆ ಹಂಚಿಕೊಂಡು ಎಲ್ಲರೂ ಸಹಬಾಳ್ವೆ ನಡೆಸಬೇಕು. ಇಂತಹ ಸಂದೇಶ ಸಾರುವ ಪವಿತ್ರ ಹಬ್ಬವೇ ರಂಜಾನ್’ ಎಂದು ತಿಳಿಸಿದರು. ಮಕ್ಕಳೆಲ್ಲರೂ…

ಜಿಲ್ಲಾದ್ಯಂತ ಸಡಗರ, ಭಕ್ತಿಭಾವದ ರಂಜಾನ್ ಆಚರಣೆ ಪರಿಸರ ಪ್ರೇಮಿಯ ಹಸಿರು ರಂಜಾನ್ ಆಚರಣೆ…!
ಮಂಡ್ಯ

ಜಿಲ್ಲಾದ್ಯಂತ ಸಡಗರ, ಭಕ್ತಿಭಾವದ ರಂಜಾನ್ ಆಚರಣೆ ಪರಿಸರ ಪ್ರೇಮಿಯ ಹಸಿರು ರಂಜಾನ್ ಆಚರಣೆ…!

June 17, 2018

ಮಂಡ್ಯ:  ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ, ನಾಗಮಂಗಲ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕುಗಳಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಆಚರಿಸಿದರು. ಮಂಡ್ಯ: ಮಂಡ್ಯ ನಗರದ ಸಂತೇಮಾಳದ ಬಳಿಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಪುಟ್ಟ ಪುಟ್ಟ ಮಕ್ಕಳು ಸಹ ಪ್ರಾರ್ಥನೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಸಾಮೂಹಿಕ ಪ್ರಾರ್ಥನೆ ಬಳಿಕ ಯುವಕರು, ಹಿರಿಯರು, ಕಿರಿಯರು ಮತ್ತು ಮಕ್ಕಳು…

ಜಿಲ್ಲೆಯೆಲ್ಲೆಡೆ ರಂಜಾನ್ ಸಡಗರ, ಸಾಮೂಹಿಕ ಪ್ರಾರ್ಥನೆ
ಹಾಸನ

ಜಿಲ್ಲೆಯೆಲ್ಲೆಡೆ ರಂಜಾನ್ ಸಡಗರ, ಸಾಮೂಹಿಕ ಪ್ರಾರ್ಥನೆ

June 17, 2018

ಹಾಸನ: ನಗರ ಸೇರಿದಂತೆ ಜಿಲ್ಲೆಯಲ್ಲೆಡೆ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ರಂಜಾನ್ ಆಚರಿಸಿದರು. ಹಾಸನ ನಗರ: ರಂಜಾನ್ ಅಂಗವಾಗಿ ನಗರದ ಹುಣಸಿನಕೆರೆ ಬಳಿ ಇರುವ ಹೊಸ ಈದ್ಗಾ ಮೈದಾನದಲ್ಲಿ ಸಾವಿರಾರು ಜನ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಳೆದ 1ತಿಂಗಳಿನಿಂದ ಶ್ರದ್ಧಾ-ಭಕ್ತಿಯಿಂದ ಉಪವಾಸದಲ್ಲಿದ್ದು ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ದಿನದಂದು ಹೊಸ ಬಟ್ಟೆ ಧರಿಸಿ ಸಡಗರದಿಂದ ಪಾಲ್ಗೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆ ಹಿನ್ನೆಲೆ ಹೊಸ ಈದ್ಗಾ…

ದಾನ-ಧರ್ಮದ ಸಂಕೇತ ರಂಜಾನ್
ಚಾಮರಾಜನಗರ

ದಾನ-ಧರ್ಮದ ಸಂಕೇತ ರಂಜಾನ್

June 17, 2018

ಜಿಲ್ಲಾದ್ಯಂತ ಸಡಗರ, ಸಂಭ್ರಮದ ರಂಜಾನ್ ಆಚರಣೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಚಾಮರಾಜನಗರ: ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯ ದವರು ಶ್ರದ್ಧಾ, ಭಕ್ತಿಯಿಂದ ಶನಿವಾರ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಿದರು.ರಂಜಾನ್ ತಿಂಗಳ ಕೊನೆಯಲ್ಲಿ ಚಂದ್ರ ದರ್ಶನ ಆದ ಮರುದಿನ ಈ ಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಹಬ್ಬದ ಅಂಗವಾಗಿ ಬೆಳಿಗ್ಗೆ ಮುಸ್ಲಿಂ ಬಾಂಧವರು ಹೊಸಬಟ್ಟೆ ತೊಟ್ಟು ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ಪ್ರಾರ್ಥನೆ ಬಳಿಕ, ಒಬ್ಬರೊಬ್ಬರು ಅಪ್ಪಿಕೊಂಡು…

1 2
Translate »