ನಾಳೆ ರಂಜಾನ್: ಮೈಸೂರಲ್ಲಿ ಸಂಭ್ರಮದ ಸಿದ್ಧತೆ
ಮೈಸೂರು

ನಾಳೆ ರಂಜಾನ್: ಮೈಸೂರಲ್ಲಿ ಸಂಭ್ರಮದ ಸಿದ್ಧತೆ

May 24, 2020

ಮೈಸೂರು: ಪವಿತ್ರ ರಂಜಾನ್ ಹಬ್ಬಕ್ಕೆ ಇನ್ನೆರಡು ದಿನವಷ್ಟೇ ಬಾಕಿಯಿದ್ದು, ಕೊರೊನಾ ಆತಂಕದ ನಡುವೆಯೂ ನಗರದಲ್ಲಿ ಸಡಗರದಿಂದ ಹಬ್ಬ ಆಚರಣೆಗೆ ಮುಸ್ಲಿಂ ಸಮುದಾಯ ದಲ್ಲಿ ಸಿದ್ಧತೆ ಭರದಿಂದ ಸಾಗಿದೆ.

ಭಾನುವಾರ ಪೂರ್ಣ ಲಾಕ್‍ಡೌನ್ ಘೋಷಣೆ ಆಗಿರುವುದರಿಂದ ಹಬ್ಬಕ್ಕೆ ಅಗತ್ಯ ವಾದ ವಸ್ತುಗಳ ಖರೀದಿ ಅಸಾಧ್ಯ ಎಂಬು ದನ್ನು ಅರಿತ ಮುಸ್ಲಿಂ ಬಾಂಧವರು ಶನಿ ವಾರ ಬೆಳಿಗ್ಗೆಯಿಂದ ಸಂಜೆವರೆಗೂ ಶಾಪಿಂಗ್ ನಡೆಸಿದರು. ದೇವರಾಜ ಮಾರು ಕಟ್ಟೆ, ಮೀನಾ ಬಜಾರ್, ಕೆ.ಟಿ. ಸ್ಟ್ರೀಟ್ ಸೇರಿದಂತೆ ಹಲವೆಡೆ ಹೊಸ ಬಟ್ಟೆ ಮತ್ತಿ ತರ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿ ಬೀಳುತ್ತಿದ್ದ ದೃಶ್ಯ ಕಂಡುಬಂದಿತು.

ಮಹಿಳೆಯರು ಬಟ್ಟೆ, ಸೌಂದರ್ಯ ವರ್ಧಕ, ಮೆಹಂದಿ, ಬಳೆ, ಕಿವಿಯೋಲೆ ಮತ್ತಿತರ ಅಲಂಕಾರಿಕ ವಸ್ತುಗಳನ್ನು ಖರೀ ದಿಸಿದರೆ, ಪುರುಷರು ಹೊಸಬಟ್ಟೆ, ಟೋಪಿ, ಸುಗಂಧ ದ್ರವ್ಯ, ಪ್ರಾರ್ಥನಾ ಮ್ಯಾಟ್ ಮತ್ತಿತರ ಸಾಮಗ್ರಿಗಳನ್ನು ಕೊಂಡು ಕೊಂಡರು. ಬಹುತೇಕರು ಮಾಸ್ಕ್ ಧರಿ ಸಿಯೇ ಶಾಪಿಂಗ್ ನಡೆಸಿದರು.

ಕೊರೊನಾ ನಿವಾರಣೆಗೆ ಪ್ರಾರ್ಥನೆ: ದೇಶದಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ಸೋಂಕು ದೂರವಾಗಲಿ, ಎಲ್ಲರಿಗೂ ಆರೋಗ್ಯ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂದು ಮಂಡಿ ಮೊಹಲ್ಲಾ ನಿವಾಸಿ ಕಲೀಲ್ ‘ಮೈಸೂರು ಮಿತ್ರ’ನಿಗೆ ಶನಿವಾರ ತಿಳಿಸಿದರು.

7 ವರ್ಷ ಮೇಲ್ಪಟ್ಟ ಮಕ್ಕಳು, ಮಹಿಳೆ ಯರು, ಪುರುಷರು ಕಳೆದೊಂದು ತಿಂಗ ಳಿಂದ ಹಗಲಿಡೀ ಉಪವಾಸ ಆಚರಿಸುತ್ತಿ ದ್ದಾರೆ. ರಂಜಾನ್ ಮಾಸದ ಕಡೆದಿನವಾದ ಸೋಮವಾರ ಉಪವಾಸ ಕೊನೆಗೊಳ್ಳ ಲಿದೆ. ಈಗಿನ ಸಂದಿಗ್ಧ ಸ್ಥಿತಿಯಲ್ಲಿ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸುವು ದಕ್ಕಿಂತ ಎಲ್ಲರ ಆರೋಗ್ಯ ರಕ್ಷಣೆಗೆ ಗಮನ ನೀಡುವುದೇ ಬಹಳ ಮುಖ್ಯ ಎಂದರು.

ಮನೆಯಲ್ಲೇ ಹಬ್ಬ ಆಚರಣೆ: ವಿಶ್ವದಲ್ಲಿ ತಲ್ಲಣ ಸೃಷ್ಟಿಸಿರುವ ಕೊರೊನಾ ವೈರಸ್ ಭೀತಿಯಿಂದಾಗಿ ರಂಜಾನ್ ಹಬ್ಬದ ಸಂಭ್ರಮ ಕಡಿಮೆಯಾಗಿದ್ದು, ಮನೆಯಲ್ಲಿಯೇ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ ಮಾಡಿ ಕೊಳ್ಳುವುದಕ್ಕೆ ಮುಸ್ಲಿಂ ಸಮುದಾಯ ನಿರ್ಧ ರಿಸಿದೆ. ಕೊರೊನಾ ಸೋಂಕು ತಡೆಗೆ ಪರ ಸ್ಪರ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಆರೋಗ್ಯ ರಕ್ಷಣೆ ದೃಷ್ಟಿಯಿಂದ ಸಾಮೂಹಿಕ ಪ್ರಾರ್ಥನೆ ಕೈಬಿಟ್ಟಿದ್ದೇವೆ. ಮನೆಯಲ್ಲಿಯೇ ಪರಸ್ಪರ ಅಂತರ ಕಾಯ್ದು ಕೊಂಡು ಪ್ರಾರ್ಥನೆ ಸಲ್ಲಿಸಲಿದ್ದೇವೆ ಎಂದು ಹಲವರು ಪ್ರತಿಕ್ರಿಯಿಸಿದರು.

Translate »