ಸಾಮೂಹಿಕ ಪ್ರಾರ್ಥನೆಗೆ ಮನವಿ ಮಾಡಿದ್ದೇವೆ
ಮೈಸೂರು

ಸಾಮೂಹಿಕ ಪ್ರಾರ್ಥನೆಗೆ ಮನವಿ ಮಾಡಿದ್ದೇವೆ

May 24, 2020

ಮೈಸೂರು, ಮೇ 23(ಆರ್‍ಕೆ)-ರಂಜಾನ್ ಪ್ರಯುಕ್ತ ಸಾಮಾಜಿಕ ಅಂತರ ಕಾಯ್ದು ಕೊಂಡು ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶ ಮಾಡಿ ಕೊಡಬೇಕೆಂದು ಕೋರಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ಮೈಸೂರು ಮೇಯರ್ ತಸ್ನೀಂ ತಿಳಿಸಿದ್ದಾರೆ.

`ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ನಿಯಮಿತ ಮಂದಿ ಸೇರಿ ಮೈಸೂರಿನ ಈದ್ಗಾ ಮೈದಾನದಲ್ಲಿ ಅಥವಾ ಮಸೀದಿಗಳಲ್ಲಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಬೇಕೆಂದು ಕೋರಿಕೊಂಡಿದ್ದೇವೆ. ಸರ್ಕಾರದಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿ ದ್ದೇವೆ. ಸರ್ಕಾರದ ನಿರ್ದೇಶನವನ್ನು ನಾವು ಚಾಚೂ ತಪ್ಪದೇ ಪಾಲಿಸುತ್ತೇವೆ ಎಂದು ಅವರು ನುಡಿದರು.

ಕೇವಲ ಮುಸ್ಲಿಮರಿಗಷ್ಟೇ ಅಲ್ಲದೇ ಇತರ ಸಮುದಾಯಗಳಿಗೂ ದೇವರ ಪೂಜೆಗೆ ಅವಕಾಶ ಕಲ್ಪಿಸುವಂತೆಯೂ ತಾವು ಸರ್ಕಾರವನ್ನು ಕೋರಿರುವುದಾಗಿ ಮೇಯರ್ ತಸ್ನೀಂ ಅವರು ತಿಳಿಸಿದರು.

Translate »