ತಾಯ್ನಾಡಲ್ಲಿ ಮುಕ್ತಿ ಕಂಡ ಇಂಜಿನಿಯರ್ ಅರುಣ್‍ಲಾಲ್
ಮೈಸೂರು

ತಾಯ್ನಾಡಲ್ಲಿ ಮುಕ್ತಿ ಕಂಡ ಇಂಜಿನಿಯರ್ ಅರುಣ್‍ಲಾಲ್

May 24, 2020

ಮೈಸೂರು, ಮೇ 23-ವೈದ್ಯೆ ಪತ್ನಿಯನ್ನು ನೋಡಲು ಗಲ್ಫ್‍ನ ಕತಾರ್‍ಗೆ ತೆರಳಿದ್ದ ಮೈಸೂರಿನ ಇಂಜಿನಿಯರ್ ಮೇ 15ರಂದು ಹೃದಯಾಘಾತದಿಂದ ಮೃತಪಟ್ಟಿದ್ದು, ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಕತಾರ್‍ನ ಕನ್ನಡ ಸಂಘ ಟನೆಗಳ ಸಹಕಾರದೊಂದಿಗೆ `ವಂದೇ ಭಾರತ್’ ಅಭಿಯಾನದಲ್ಲಿ ಅವರ ಮೃತದೇಹವನ್ನು ಶನಿವಾರ ಮೈಸೂ ರಿಗೆ ತರಲಾಯಿತು.

ಮೈಸೂರಿನ ನ್ಯೂ ಕಾಂತರಾಜೇ ಅರಸ್ ರಸ್ತೆ ನಿವಾಸಿ ಅರುಣ್‍ಲಾಲ್ ಅವರು ಕತಾರ್‍ನಲ್ಲಿ ವೈದ್ಯೆಯಾಗಿರುವ ತಮ್ಮ ಪತ್ನಿ ಡಾ. ರೇಖಾ ಅವರನ್ನು ನೋಡಲು ತೆರಳಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೈಸೂರಿಗೆ ಹಿಂತಿರುಗಲು ಸಾಧ್ಯವಾ ಗದೇ ಅಲ್ಲೇ ಇದ್ದ ಅವರು ಮೇ 15 ರಂದು ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಈ ನಡುವೆ ಹೊರ ರಾಜ್ಯ ಹಾಗೂ ಹೊರ ದೇಶದಿಂದ ಮೃತ ದೇಹ ತರುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದ ಪರಿಣಾಮ ವೈದ್ಯೆ ತನ್ನ ಪತಿಯ ಮೃತದೇಹವನ್ನು ಮೈಸೂರಿಗೆ ತರಲು ಹೆಣಗಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಈ ಕಷ್ಟಕರ ಪರಿಸ್ಥಿತಿಯಲ್ಲಿ ಕತಾರ್‍ನ ಕನ್ನಡ ಸಂಘಟನೆಯ ಸುಬ್ರಹ್ಮಣ್ಯ ಹೆಬ್ಬಾ ಗಿಲು, ಮಹೇಶ್‍ಗೌಡ ಇನ್ನಿತರರು ವೈದ್ಯೆಯ ನೆರವಿಗೆ ನಿಂತರು. ಅರುಣ್‍ಲಾಲ್ ಅವರ ಸಾವು ಕೊರೊನಾದಿಂದ ಸಂಭವಿಸಿದ್ದಲ್ಲ. ಅದೊಂದು ಸಹಜ ಸಾವು ಎಂಬುದನ್ನು ದೃಢೀಕರಿಸುವ ವೈದ್ಯಕೀಯ ಪ್ರಮಾಣ ಪತ್ರ ಪಡೆದಿದ್ದ ಅವರು, ಗಲ್ಫ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಏರ್ ಇಂಡಿಯಾ ಅಧಿಕಾರಿಗಳು ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ದಲ್ಲಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ನೆರವನ್ನು ಕೋರಿದ್ದರು.

ಕತಾರ್‍ನಿಂದ ಅರುಣ್‍ಲಾಲ್ ಅವರ ಮೃತದೇಹವನ್ನು ಬೆಂಗಳೂರಿಗೆ ತರಲು ಕೇಂದ್ರ ಸರ್ಕಾರದ ಸಂಪೂರ್ಣ ಸಹ ಕಾರವನ್ನು ಗಿಟ್ಟಿಸಿಕೊಡುವಲ್ಲಿ ಹಾಗೂ ಏರ್ ಇಂಡಿಯಾ ವಿಮಾನದಲ್ಲಿ ಮೃತ ದೇಹವನ್ನು ಸಾಗಿಸಲು ಅನುಮತಿ ಪಡೆ ಯಲು ಸದಾನಂದಗೌಡರು ನೆರವಾ ದರು. ಸಾಮಾನ್ಯವಾಗಿ ಪ್ರಯಾಣಿಕರ ವಿಮಾನದಲ್ಲಿ ಮೃತದೇಹ ಸಾಗಿಸಲು ಅವಕಾಶ ನೀಡುವುದಿಲ್ಲ. ಆದರೆ ಲಾಕ್ ಡೌನ್ ಇರುವ ಸಂಕಷ್ಟಕರ ಪರಿಸ್ಥಿತಿ ಯಲ್ಲಿ ಮಾನವೀಯ ದೃಷ್ಟಿಯಿಂದ ಏರ್ ಇಂಡಿಯಾ ಪ್ರಯಾಣಿಕರ ವಿಮಾನ ದಲ್ಲೇ ಅರುಣ್‍ಲಾಲ್ ಮೃತದೇಹವನ್ನು ಬೆಂಗಳೂರಿಗೆ ತರಲು ಸದಾನಂದ ಗೌಡರು ಅನುಮತಿ ಕೊಡಿಸಿದ್ದರು.

ಶುಕ್ರವಾರ ಸಂಜೆ ಬೆಂಗಳೂರಿಗೆ ಅರುಣ್‍ಲಾಲ್ ಅವರ ಮೃತದೇಹ ವನ್ನು ಅವರ ಪತ್ನಿ ತಂದರು. ಶನಿವಾರ ಬೆಳಿಗ್ಗೆ ಮೈಸೂರಿನ ಹೆಚ್.ಡಿ.ಕೋಟೆ ರಸ್ತೆಯಲ್ಲಿನ ಅವರ ತೋಟದಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಯಿತು ಎಂದು ಅರುಣ್‍ಲಾಲ್ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

Translate »