ಸೋನಿಯಾ ಗಾಂಧಿ ವಿರುದ್ಧ ಎಫ್‍ಐಆರ್: ರಾಜಕೀಯ ಪಿತೂರಿ
ಮೈಸೂರು

ಸೋನಿಯಾ ಗಾಂಧಿ ವಿರುದ್ಧ ಎಫ್‍ಐಆರ್: ರಾಜಕೀಯ ಪಿತೂರಿ

May 24, 2020

ಮೈಸೂರು, ಮೇ 23(ಎಂಟಿವೈ)- ಪಿಎಂ ಕೇರ್ ಫಂಡ್‍ನಲ್ಲಿ ಸಂಗ್ರಹವಾದ 1 ಲಕ್ಷ ಕೋಟಿ ರೂ. ಬಳಸುವ ರೀತಿಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್‍ಐಆರ್ ದಾಖಲಿಸಿರುವುದರ ಹಿಂದೆ ರಾಜಕೀಯ ನಾಯಕರ ಕೈವಾಡವಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಾಗರ ತಾಲೂಕಿನ ಆರ್‍ಎಸ್‍ಎಸ್, ಬಿಜೆಪಿ ಕಾರ್ಯಕರ್ತ ಕೆ.ವಿ.ಪ್ರವೀಣ್ ಎಂಬಾತ ಸಾಗರ ಠಾಣೆಗೆ ಮೇ 18ರಂದು ತೆರಳಿ `ಸೋನಿಯಾ ಗಾಂಧಿ ಪಿಎಂ ಕೇರ್ ಫಂಡ್ ಬಗ್ಗೆ ಪ್ರಶ್ನೆ ಮಾಡಿ ಪ್ರಧಾನಿ ಮೋದಿಗೆ ಅಪ ಮಾನಿಸಿದ್ದಾರೆ’ ಎಂದು ದೂರು ನೀಡಲು ಮುಂದಾಗಿದ್ದರು. ಪೊಲೀಸರು ದೂರು ಸ್ವೀಕರಿಸದೇ ವಾಪಸ್ ಕಳುಹಿಸಿದ್ದರು. ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ವಿರೋಧಿ ಬಣದಲ್ಲಿರುವ, ಬಿಜೆಪಿಯಲ್ಲಿ ಉನ್ನತ ಹುದ್ದೆ ಯಲ್ಲಿರುವ ವ್ಯಕ್ತಿ ಮೂಲಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಗೃಹ ಸಚಿವರನ್ನು ಸಂಪರ್ಕಿಸಿ ಎಫ್‍ಐಆರ್ ದಾಖಲಿಸುವಂತೆ ನಿರ್ದೇ ಶನ ಕೊಡಿಸಲಾಗಿದೆ. ಹಾಗಾಗಿ ಯಾವ ಅಪ ರಾಧ ಇಲ್ಲದಿದ್ದರೂ ಸೋನಿಯಾಗಾಂಧಿ ಅವರ ವಿರುದ್ಧ ರಾಜ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಕಿಡಿಕಾರಿದರು.

SONIA GANDHI@CONGRESS ಎಂಬುದು ಸೋನಿಯಾ ಗಾಂಧಿ ಅವರ ಅಧಿಕೃತ ಟ್ವಿಟರ್ ಖಾತೆ. ಇದನ್ನು ಸೋನಿಯಾ ಗಾಂಧಿ ಅವರೇ ನಿರ್ವಹಿಸುತ್ತಾರೆ. ಇದ ರಲ್ಲಿ ಯಾವುದೇ ಆಕ್ಷೇಪಾರ್ಹ ಪೋಸ್ಟ್ ಹಾಕಿಲ್ಲ. ಅಔಓಉಖಇSS@IಓಅIಓಆIಂ ಟ್ವಿಟರ್ ಖಾತೆಯಲ್ಲಿ ಮೇ 11ರಂದು ಪಿಎಂ ಕೇರ್ ಫಂಡ್ ಬಳಕೆ ರೀತಿ ಬಗ್ಗೆ ಪೋಸ್ಟ್ ಹಾಕಲಾಗಿದೆ. ಈ ಖಾತೆ ನಿರ್ವಹಿಸಲು ಕೆಲವರನ್ನು ನಿಯೋಜಿಸಲಾಗಿದೆ. ಈ ವಿಚಾರ ಅರಿಯದೇ ದುರುದ್ದೇಶದಿಂದ ಸೋನಿಯಾ ಗಾಂಧಿ ಅವರ ವಿರುದ್ಧವೇ ಎಫ್‍ಐಆರ್ ದಾಖಲಿಸಲಾಗಿದೆ. ಇಂಥ ಯತ್ನದಿಂದ ಕಾಂಗ್ರೆಸ್‍ನವರನ್ನು ಕಟ್ಟಿ ಹಾಕ ಬಹುದೆಂದು ಬಿಜೆಪಿಯವರು ತಿಳಿದಿ ದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಧೃತಿ ಗೆಡುವುದಿಲ್ಲ. ಅವರ ಉತ್ಸಾಹ 3 ಪಟ್ಟು ಹೆಚ್ಚುತ್ತದೆ ಅಷ್ಟೆ ಎಂದರು.

ಟ್ವೀಟ್‍ನಲ್ಲಿ ದೇಶದ್ರೋಹದ ಅಂಶವಿಲ್ಲ. ಪಿಎಂ ಕೇರ್ಸ್ ಫಂಡ್‍ನ ಹಣ ಯಾವುದಕ್ಕೆ ಬಳಸುತ್ತಿದ್ದೀರಿ? ವಲಸೆ ಕಾರ್ಮಿಕರ ಸಮಸ್ಯೆ ಬಗೆಹರಿಸಲು, ವಿದೇಶದಲ್ಲಿ ಸಿಲುಕಿದ ಭಾರತೀ ಯರನ್ನು ಕರೆತರಲು ಅಥವಾ ಪಾತಾಳಕ್ಕೆ ಕುಸಿದ ಅರ್ಥವ್ಯವಸ್ಥೆ ಸುಧಾರಿಸಲು ಬಳಸ ಲಾಗುತ್ತಿದೆಯೇ? ಎಂದಷ್ಟೇ ಪ್ರಶ್ನಿಸಲಾಗಿದೆ. ಇದು ಅಪರಾಧವೇ? ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಲಕ್ಷ್ಮಣ್ ಕಿಡಿಕಾಡಿದರು.

ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ಬಂಡವಾಳ ಬಯಲು ಮಾಡುವ ವಿರೋಧ ಪಕ್ಷಗಳ ಮುಖಂಡರು, ಕಾರ್ಯ ಕರ್ತರ ಬಾಯಿ ಮುಚ್ಚಿಸಲು ಸುಳ್ಳು ಪ್ರಕ ರಣ ದಾಖಲಿಸುವ ಸಂಚಿದು. ಸಿಎಂ ಯಡಿ ಯೂರಪ್ಪ ಅವರಿಗೆ ಕೆಟ್ಟ ಹೆಸರು ತರಲು ಬಿಜೆಪಿಯಲ್ಲೇ ಹುನ್ನಾರ ನಡೆದಿದೆ. ಸಿಎಂಗೆ ಪತ್ರ ಬರೆದು ಈ ಸಂಗತಿಗಳತ್ತ ಗಮನ ಸೆಳೆದಿದ್ದೇನೆ ಎಂದರು.

ಸಾಗರ ಪೊಲೀಸ್ ಠಾಣೆಯ ಮಹಿಳಾ ಎಎಸ್‍ಐ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಟೀಕಿಸಿ, ಬಿಜೆಪಿ ಹೊಗಳಿ ಪೋಸ್ಟ್ ಹಾಕಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಚಿತ್ರವನ್ನೂ ಬಳಸಿದ್ದಾರೆ. ಸರ್ಕಾರಿ ಉದ್ಯೋಗಿ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಪೋಸ್ಟ್ ಹಾಕುವಂತಿಲ್ಲ. ಆಕೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದೇವೆ ಎಂದರು.

ವಿವೇಚನೆ ಇಲ್ಲದ ಮಂತ್ರಿ: ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮಾತನಾಡಿ, ಸಚಿವ ಮಾಧು ಸ್ವಾಮಿ ರೈತ ಮಹಿಳೆಯನ್ನು `ರ್ಯಾಸ್ಕಲ್’ ಎಂದು ಅಪಮಾನಿಸಿದ್ದಾರೆ. ಬಿಜೆಪಿ ನಾಯಕರಿಗೆ ಮಹಿಳೆಯರು, ರೈತರ ಬಗ್ಗೆ ಗೌರವವೇ ಇಲ್ಲ. ಕ್ಷಮೆ ಕೇಳಿದ ಮಾತ್ರಕ್ಕೆ ಸಚಿವರ ವಿರುದ್ಧದ ಹೋರಾಟ ನಿಲ್ಲುವುದಿಲ್ಲ ಎಂದರು.

ಸಡಿಲಿಕೆ ಸರಿಯಲ್ಲ: ಸೋಂಕಿತರ ಸಂಖ್ಯೆ ಕಡಿಮೆಯಿದ್ದಾಗ ಕಟ್ಟುನಿಟ್ಟು ಲಾಕ್‍ಡೌನ್ ಮಾಡಿ, ಈಗ ಸಂಖ್ಯೆ ಹೆಚ್ಚುತ್ತಿರುವಾಗ ಲಾಕ್‍ಡೌನ್ ಸಡಿಲಿಸಲಾಗಿದೆ. ಕೇವಲ ಭಾನುವಾರ ಕಫ್ರ್ಯೂ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಟೀಕಿಸಿದರು. ಮಾಜಿ ಮೇಯರ್ ಆಯೂಬ್ ಖಾನ್, ಪಾಲಿಕೆ ಮಾಜಿ ಸದಸ್ಯ ಎಂ.ಶಿವಣ್ಣ, ಮುಖಂಡ ರಾದ ಸುಧೀಂದ್ರ, ಮಹೇಶ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »