ಜೀತ ಪದ್ಧತಿ ಜಾರಿಗೆ ಹೊರಟ ಕೇಂದ್ರ ಸರ್ಕಾರ
ಮೈಸೂರು

ಜೀತ ಪದ್ಧತಿ ಜಾರಿಗೆ ಹೊರಟ ಕೇಂದ್ರ ಸರ್ಕಾರ

May 24, 2020

ಮೈಸೂರು, ಮೇ 23(ಪಿಎಂ)- ಕೊರೊನಾ ಹಿನ್ನೆಲೆಯ ಲಾಕ್‍ಡೌನ್ ಸಂದರ್ಭವನ್ನೇ ಬಳಸಿಕೊಂಡು 45 ಪ್ರಮುಖ ಕಾರ್ಮಿಕ ಪರ ಕಾಯ್ದೆಗಳನ್ನು ರದ್ದುಗೊಳಿಸಿ, ಕೇವಲ 4 ಕಾಯ್ದೆಗಳನ್ನಾಗಿಸಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ. ಆ ಮೂಲಕ ದೇಶದಲ್ಲಿ ಜೀತ ಪದ್ಧತಿ ಜಾರಿಗೆ ಯತ್ನಿಸುತ್ತಿದೆ ಎಂದು ಮಾಜಿ ಮೇಯರ್ ನಾರಾಯಣ ಟೀಕಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಮಾಜಿ ಅಧ್ಯಕ್ಷರೂ ಆದ ನಾರಾಯಣ, ಕೇಂದ್ರ ಸರ್ಕಾರದ ಈ ಕ್ರಮ ದಿಂದ ಕಾರ್ಮಿಕರ ಹಕ್ಕುಗಳು ಹಾಗೂ ಹಿತಾ ಸಕ್ತಿಗೆ ಧಕ್ಕೆ ಉಂಟಾಗಲಿದೆ. ಬಂಡವಾಳ ಶಾಹಿ, ಮಾಲೀಕ ವರ್ಗ ಹಾಗೂ ಬಹು ರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗು ವಂತೆ ಹೊಸ ಕಾಯ್ದೆಗಳನ್ನು ರೂಪಿಸುವ ಮೂಲಕ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ನಾರಾ ಯಣ್ ಅಸಮಾಧಾನ ವ್ಯಕ್ತಪಡಿಸಿದರು.

ಕನಿಷ್ಠ ವೇತನ ಕಾಯ್ದೆ, ವೇತನ ಪಾವತಿ ಕಾಯ್ದೆ, ಬೋನಸ್ ಪಾವತಿ ಕಾಯ್ದೆ, ಸಮಾನ ವೇತನ ಕಾಯ್ದೆ ಸೇರಿದಂತೆ ಅನೇಕ ಕಾರ್ಮಿಕ ಪರವಾದ ಕಾಯ್ದೆಗಳನ್ನು ರದ್ದುಗೊಳಿಸಿ ಕಾರ್ಮಿಕರನ್ನು ಶೋಷಣೆ ಮಾಡಲು ಸರ್ಕಾರ ಮುಂದಾಗಿದೆ. ಆ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳು ತ್ತಿದೆ. ಕಾಯ್ದೆಗಳ ತಿದ್ದುಪಡಿ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕರ ಉದ್ಯೋಗ ಭದ್ರತೆ, ಜೀವಭದ್ರತೆಯನ್ನೇ ಕಸಿಯುತ್ತಿದೆ. ವಿಶ್ವ ಕಾರ್ಮಿಕ ಸಂಘಟನೆಯ ಧ್ಯೇಯದಂತೆ 8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ ಹಾಗೂ 8 ಗಂಟೆ ಮನರಂಜನೆ ಎಂಬ ದಿನದ 24 ಗಂಟೆಗಳ ಪರಿಕಲ್ಪನೆಗೆ ಧÀಕ್ಕೆ ತರುತ್ತಿದೆ ಎಂದು ಕಿಡಿಕಾರಿದರು. ತಿದ್ದುಪಡಿ ಕಾಯ್ದೆಗಳು ಜಾರಿ ಗೊಂಡರೆ ಮಾಲೀಕರು ಕೊಟ್ಟಷ್ಟು ವೇತನ ಪಡೆದುಕೊಂಡು ಕಾರ್ಮಿಕರು ಹೆಚ್ಚು ಸಮಯ ದುಡಿಮೆ ಮಾಡಬೇಕಾಗುತ್ತದೆ. ಕಾರ್ಮಿಕ ಸಂಘಟನೆ ಕಟ್ಟುವ ಮತ್ತು ಮಾಲೀಕ ರೊಂದಿಗೆ ಮಾತುಕತೆ ನಡೆಸುವ ಅಧಿಕಾರ ವನ್ನೇ ಸಂಘಟನೆಗಳು ಕಳೆದುಕೊಳ್ಳಲಿವೆ. ಸಂವಿಧಾನದ ಪರಿಚ್ಛೇದ 23ರ ಉಲ್ಲಂಘನೆ ಯಾಗಿ ಇಡೀ ಕಾರ್ಮಿಕ ವರ್ಗ ದೇಶದ ದ್ವಿತೀಯ ಪ್ರಜೆಯಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸುಗ್ರೀವಾಜ್ಞೆ ಹೊರಡಿಸುವ ಯತ್ನವನ್ನು ತಕ್ಷಣ ಕೈಬಿಡಬೇಕು. ಪ್ರಸ್ತುತ ಇರುವ ಕಾರ್ಮಿಕ ಪರ ಕಾಯ್ದೆಗಳನ್ನೇ ಮುಂದುವರೆಸ ಬೇಕು. ಇಲ್ಲವಾದರೆ ದೇಶಾದ್ಯಂತ ಕಾರ್ಮಿಕ ವರ್ಗ ಬೃಹತ್ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು. ಮಹಾ ಸಂಘದ ಕಾನೂನು ಸಲಹೆಗಾರ ಆರ್.ಲಕ್ಷ್ಮಣ್, ಪದಾಧಿಕಾರಿಗಳಾದ ಆರ್.ದಾಸ್, ಶಿವಣ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »