ಸಾಲಬಾಧೆ: ರೈತ ಆತ್ಮಹತ್ಯೆ
ಮೈಸೂರು ಗ್ರಾಮಾಂತರ

ಸಾಲಬಾಧೆ: ರೈತ ಆತ್ಮಹತ್ಯೆ

May 25, 2020

ಹುಣಸೂರು, ಮೇ 24 (ಕೆಕೆ)-ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಂಜೇಗೌಡ(60) ಆತ್ಮಹತ್ಯೆಗೆ ಶರಾಣಾದ ರೈತ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಇವರು ತಮ್ಮ 3 ಎಕರೆ ಜಮೀನು ಹೊಂದಿದ್ದು, ಬೇಸಾಯಕ್ಕಾಗಿ ಹುಣಸೂರು ಬ್ಯಾಂಕ್, ಕಲ್ಲಹಳ್ಳಿ ಸೊಸೈಟಿಯಲ್ಲಿ 9 ಲಕ್ಷ ರೂ. ಸಾಲ ಪಡೆದಿದ್ದರು. ಮಹಿಳಾ ಸಂಘಗಳಿಂದಲೂ ಸಾಕಷ್ಟು ಸಾಲ ಮಾಡಿದ್ದರು. ಬೆಳೆ ನಷ್ಟವಾಗಿ ನೊಂದಿದ್ದ ನಂಜೇಗೌಡರು ಶನಿವಾರ ತಮ್ಮ ಜಮೀನಿನಲ್ಲಿ ಮರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Translate »