ಭಾನುವಾರದ ಲಾಕ್‍ಡೌನ್‍ಗೆ ನಂ.ಗೂಡಿನಲ್ಲಿ ಉತ್ತಮ ಪ್ರತಿಕ್ರಿಯೆ
ಮೈಸೂರು ಗ್ರಾಮಾಂತರ

ಭಾನುವಾರದ ಲಾಕ್‍ಡೌನ್‍ಗೆ ನಂ.ಗೂಡಿನಲ್ಲಿ ಉತ್ತಮ ಪ್ರತಿಕ್ರಿಯೆ

May 25, 2020

ನಂಜನಗೂಡು, ಮೇ 24(ರವಿ)- ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಕರೆ ನೀಡಿರುವ ಭಾನುವಾರದ ಸಂಪೂರ್ಣ ಲಾಕ್‍ಡೌನ್‍ಗೆ ನಂಜನಗೂಡಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿಯಿತು.

ಬೆಳ್ಳಿಗ್ಗೆಯಿಂದಲೇ ಸ್ವಯಂಪ್ರೇರಿತವಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಮಾಲೀಕರು ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿದರು. ಎಪಿಎಂಸಿ ಜಾನುನಾವಾರು ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಕ್ಕೂ ನಿರ್ಬಂಧ ಹೇರಿದ್ದರಿಂದಾಗಿ ಹೋಲ್‍ಸೇಲ್ ತರಕಾರಿ ಮಾರುಕಟ್ಟೆ ಇಲ್ಲದೆ. ತರಕಾರಿ ಮಾರಾಟವೂ ಕೂಡ ವಿರಳವಾಗಿತ್ತು. ದಿನಸಿ ಅಂಗಡಿಗಳೂ ಸಹ ಬೆಳ್ಳಿಗ್ಗೆ 9 ಗಂಟೆ ವರೆವಿಗೆ ಬಾಗಿಲು ತೆರೆದಿದ್ದವು. ಹಾಲು, ಔಷಧ ಮಾರಾಟ ಎಂದಿನಂತಿತ್ತು. ಆಟೋ, ಟ್ಯಾಕ್ಸಿ, ಬಸ್‍ಗೆ ನಿರ್ಬಂಧ ಹೇರಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಹಾಗೂ ಜನರ ಸಂಚಾರ ಇಲ್ಲದೆ ಬಿಕೋ ಎನ್ನುವಂತಿತ್ತು.

ರಾಜ್ಯ ಸರ್ಕಾರದ ನಿರ್ದೇಶನದಂತೆ ನಗರದಲ್ಲಿ ಮಾಂಸ, ಕೋಳಿ, ಮೀನು ಮಾರಾಟ ಅಂಗಡಿಗಳು ತೆರದಿದ್ದವು. ಆದರೆ ಶನಿವಾರ ಸಂಜೆಯೇ ಪೊಲೀಸರು ಯಾವುದೇ ವ್ಯಾಪಾರ-ವಹಿವಾಟಿಗೂ ಅವಕಾಶವಿಲ್ಲ ಎಂದು ಧ್ವನಿವರ್ಧಕಗಳಲ್ಲಿ ಪ್ರಚಾರ ಮಾಡಿದ್ದದ್ದರಿಂದ ಮಾಂಸದಂಗಡಿಗಳು ಖರೀದಿದಾರರಿಲ್ಲದೆ ಬಿಕೋ ಎನ್ನುತ್ತಿದ್ದವು.

Translate »