ಸಿದ್ದರಾಮಯ್ಯರ ಮುಗಿಸಲು ಬಿಜೆಪಿ, ಜೆಡಿಎಸ್ ಸಂಚು
ಮೈಸೂರು

ಸಿದ್ದರಾಮಯ್ಯರ ಮುಗಿಸಲು ಬಿಜೆಪಿ, ಜೆಡಿಎಸ್ ಸಂಚು

December 2, 2021
  • ಡಾ.ಹೆಚ್.ಸಿ.ಮಹದೇವಪ್ಪ ಆರೋಪ
  • ಮಾಜಿ ಸಿಎಂ ಸಿದ್ದರಾಮಯ್ಯನವರ `ಕೈ’ ಬಲಪಡಿಸಲು ಡಾ.ತಿಮ್ಮಯ್ಯ ಗೆಲ್ಲಿಸಿ

ಡಾ.ಹೆಚ್.ಸಿ.ಮಹದೇವಪ್ಪ ಆರೋಪ ಮಾಜಿ ಸಿಎಂ ಸಿದ್ದರಾಮಯ್ಯನವರ `ಕೈ’ ಬಲಪಡಿಸಲು ಡಾ.ತಿಮ್ಮಯ್ಯ ಗೆಲ್ಲಿಸಿ

ಮೈಸೂರು, ಡಿ.೧(ಜಿಎ)- ಬಿಜೆಪಿ, ಜೆಡಿಎಸ್‌ನವರು ಹೊಂದಾಣಿಕೆ ಮಾಡಿಕೊಂಡು ಸಿದ್ದರಾಮಯ್ಯನವರ ನಾಯಕತ್ವವನ್ನೇ ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಆದರೆ ಅವರ ಆಟ ನಡೆಯುವುದಿಲ್ಲ. ಸಿದ್ದರಾಮಯ್ಯನವರ ಕೈಬಲಪಡಿಸಲು ಡಾ.ಡಿ.ತಿಮ್ಮಯ್ಯನವರನ್ನು ಗೆಲ್ಲಿಸಬೇಕೆಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕರೆ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಕೇರ್ಗಳ್ಳಿಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ಸಂಬAಧಿಸಿದAತೆ ನಡೆದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ ಕಳೆದ ೪೦ ವರ್ಷಗಳಿಂದ ಸಿದ್ದರಾಮಯ್ಯನವರ ನಾಯಕತ್ವವನ್ನು ಪ್ರಶ್ನೆ ಮಾಡುವವರು ಯಾರು ಇಲ್ಲ. ಅವರು ಹೇಳಿದ್ದೇ ಅಂತಿಮ. ಅವರು ಮುಖ್ಯಮಂತ್ರಿಯಾಗಿದ್ದಾಗ ದಲಿತರು, ಹಿಂದು ಳಿದವರು. ಅಲ್ಪಸಂಖ್ಯಾತರು, ಮಹಿಳೆಯರು, ಬಡವರ ಪರ ತಳಸಮುದಾಯಗಳ ಪರ ಕೆಲಸ ಮಾಡಿದ್ದರು. ಅದನ್ನು ಸಹಿಸಿಕೊಳ್ಳಲಾಗದ ಬಿಜೆಪಿ,
ಜೆಡಿಎಸ್‌ನವರು ಸಿದ್ಧರಾಮಯ್ಯನವರನ್ನು ಮೂಲೆಗುಂಪು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಆಟ ನಡೆಯುವುದಿಲ್ಲ. ಡಾ. ತಿಮ್ಮಯ್ಯನವರ ನಾಮಪತ್ರ ತಿರಸ್ಕೃತಗೊಳಿಸಿ ಸಿದ್ಧರಾಮಯ್ಯನವರಿಗೆ ಮುಖಭಂಗಮಾಡಲು ಪ್ರಯತ್ನಿಸಿದರು ಎಂದು ಆರೋಪಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ೩೪೮ ಮತಗಳಿವೆ. ಜಿ.ಟಿ.ದೇವೇ ಗೌಡರ ಕಡೆಯವರು ನಮ್ಮ ಪಕ್ಷವನ್ನು ಬೆಂಬಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷದವರು ಒಗ್ಗಟ್ಟಿನಿಂದ ಡಾ. ಡಿ.ತಿಮ್ಮಯ್ಯರವರಿಗೆ ಮೊದಲ ಪ್ರಾಶಸ್ತö್ಯದ ಒಂದೇ ಮತವನ್ನು ಚಲಾಯಿಸಿ, ೨ನೇ ಓಟಿನ ಬಗ್ಗೆ ಯೋಚನೆಯನ್ನೇ ಮಾಡಬೇಡಿ. ಹೆಚ್ಚು ಮತಗಳ ಅಂತರದಿAದ ಮೊದಲ ಸುತ್ತಿನಲ್ಲೇ ಗೆಲ್ಲಿಸಿ ಎಂದ ಅವರು ೨೦೨೩ಕ್ಕೆ ಕಾಂಗ್ರೆಸ್ ಸರ್ಕಾರ ಬರುವುದು ಖಚಿತವಾಗಿದ್ದು, ಅದಕ್ಕೆ ಈ ಚುನಾವಣೆ ದಿಕ್ಸೂಚಿಯಾಗಲಿದೆ ಎಂದರು.

ಜಿ.ಪA. ಮಾಜಿ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ಡಾ. ಡಿ. ತಿಮ್ಮಯ್ಯನವರು ಸಜ್ಜನವರು ಉತ್ತಮ ವೈದ್ಯರಾಗಿ ಹೆಸರು ಪಡೆದಿದ್ದಾರೆ. ಅವರು ಗೆಲ್ಲುವುದು ಖಚಿತವಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾವುದೇ ಗೊಂದಲವಿಲ್ಲ ನಾವೆಲ್ಲರೂ ಒಗ್ಗಾಟ್ಟಾಗಿದ್ದೇವೆ. ಜಿ.ಟಿ.ದೇವೇಗೌಡರ ಬಣ ಸಹ ನಮ್ಮ ಜೊತೆಗೆ ಬಂದಿದೆ. ಎಲ್ಲರೂ ಒಂದೇ ಒಂದು ಮತವನ್ನು ಮಾತ್ರ ಚಲಾಯಿಸಿ, ಮೊದಲ ಸುತ್ತಿನಲ್ಲೇ ಜಯಗಳಿಸಲು ಸಹಕರಿಸಿ ಎಂದು ಮನವಿ ಮಾಡಿದರು. ಸಮಾರಂಭದಲ್ಲಿ ಮಾಜಿ ಸಚಿವ ಅಂಜನ ಮೂರ್ತಿ, ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ, ಆರ್.ಧರ್ಮಸೇನಾ, ಬಿ.ಜೆ.ವಿಜಯ್ ಕುಮಾರ್, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮಂಜುಳಾ ಮಾನಸ, ಪುಷ್ಪಾ ಅಮರನಾಥ್ ಇತರರು ಹಾಜರಿದ್ದರು.

Translate »