ದಲಿತರು, ಹಿಂದುಳಿದವರು ಬಿಜೆಪಿಯತ್ತ ಮುಖ ಮಾಡಿದ್ದಾರೆ
ಮೈಸೂರು

ದಲಿತರು, ಹಿಂದುಳಿದವರು ಬಿಜೆಪಿಯತ್ತ ಮುಖ ಮಾಡಿದ್ದಾರೆ

December 2, 2021

ಮೈಸೂರು,ಡಿ.೧(ಆರ್‌ಕೆಬಿ)- ಕಾಂಗ್ರೆಸ್ ದುರಾಡಳಿತ ದಿಂದ ಬೇಸತ್ತಿರುವ ದಲಿತರು, ಹಿಂದುಳಿದವರು ಬಿಜೆಪಿ ಯತ್ತ ಮುಖ ಮಾಡಿದ್ದಾರೆ. ಇದೇ ರೀತಿ ಮುಂದುವರಿದರೆ ಕಾಂಗ್ರೆಸ್‌ಗೆ ಪ್ರಾದೇಶಿಕ ಪಕ್ಷದ ಮಾನ್ಯತೆ ಪಡೆದುಕೊಳ್ಳಲೂ ಸಾಧ್ಯವಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣ ದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಬುಧವಾರ ಆಯೋಜಿಸಿದ್ದ ಮೋರ್ಚಾದ ಮೈಸೂರು ನಗರ, ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳನ್ನು ಒಳಗೊಂಡ ವಿಭಾಗೀಯ ಪ್ರಮುಖರ ಚಿಂತನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ೭೦ ವರ್ಷಗಳ ಕಾಲ ದೇಶವನ್ನಾ ಳಿದ ಕಾಂಗ್ರೆಸ್ ಪಕ್ಷ ದಲಿತರು, ಹಿಂದುಳಿದವರನ್ನು ಕಡೆಗಣಿಸಿದೆ. ಅದರ ಪರಿಣಾಮ ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ. ಇತ್ತೀಚೆಗೆ ತ್ರಿಪುರ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಪಾದನೆ ಶೂನ್ಯಕ್ಕೆ ತಲುಪಿದೆ.

ಬಿಜೆಪಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ ಎಂದರು. ಮುಂದಿನ ಯಾವುದೇ ಚುನಾವಣೆ ಯಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲುವುದಿಲ್ಲ. ನಮ್ಮನ್ನು ನಂಬಿ ಬರುತ್ತಿರುವ ದಲಿತ ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗೆ ಶ್ರಮಿಸ ಬೇಕು. ಇದನ್ನು ಪಕ್ಷದ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ದಲಿತರು, ಹಿಂದುಳಿದವರು ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡುವ ಕಾಲ ದೂರ ವಿಲ್ಲ. ಕಾಂಗ್ರೆಸ್ ವಿಸರ್ಜನೆಯತ್ತ ನಾವು ಗಮನಹರಿಸಿ ಬಿಜೆಪಿ ಕಾರ್ಯಕರ್ತರು ದಲಿ ತರು, ಹಿಂದುಳಿದವರ ಸಂಘಟನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಎಪ್ಪತ್ತು ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ಮಾಡಲು ಸಾಧ್ಯವಾಗದ್ದನ್ನು ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಮಾಡಿ ತೋರಿಸಿದೆ. ದಲಿ ತರು ಹಿಂದುಳಿದವರ ಅಭಿವೃದ್ಧಿಗೆ ಬಿಜೆಪಿ ಕಟಿಬದ್ಧವಾಗಿದೆ ಎಂದು ತಿಳಿಸಿದರು.

ನಮ್ಮ ಒಬ್ಬ ಯೋಧನನ್ನು ಪಾಕಿಸ್ತಾನ ದವರು ಕೊಂದರೆ, ಪಾಕಿಸ್ತಾನದ ೧೦ ಯೋಧ ರನ್ನು ಕೊಲ್ಲಿ ಎಂದು ಹೇಳಿದ ಮೊದಲ ಪ್ರಧಾನಿ ಮೋದಿ ಎಂದು ಹೆಮ್ಮೆಯಿಂದ ಹೇಳಬಲ್ಲೆ ಎಂದ ಅವರು, ನೀಚ ಕಾಂಗ್ರೆಸ್ ನವರು ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲೂ ಅಪಪ್ರಚಾರ ಮಾಡಿದರು. ವ್ಯಾಕ್ಸಿನ್ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆಂದು ಅಪಪ್ರಚಾರ ಮಾಡಿದರು. ಆದರೂ, ಜನ ಮೋದಿ ಮೇಲೆ ನಂಬಿಕೆ ಇಟ್ಟು ಕೊರೊನಾ ಲಸಿಕೆ ಹಾಕಿಸಿಕೊಂಡರು. ಕಾಂಗ್ರೆಸ್‌ನ ಇಂತಹ ನಡವಳಿಕೆಗಳಿಂದಲೇ ಕಾಂಗ್ರೆಸ್ ನಾಶವಾಗುತ್ತಿದೆ. ಹಿಂದುಳಿದವರು, ದಲಿತರು ಕಾಂಗ್ರೆಸ್ ಪಕ್ಷವನ್ನು ಮೂಲೆಗೆ ಬಿಸಾಕಿ ದ್ದಾರೆಂದು ಎಂದರು.

Translate »