Tag: BJP

ವಾರಣಾಸಿಯಲ್ಲೇ ಮೋದಿ ಸ್ಪರ್ಧೆ
ಮೈಸೂರು

ವಾರಣಾಸಿಯಲ್ಲೇ ಮೋದಿ ಸ್ಪರ್ಧೆ

ನವದೆಹಲಿ: ಕೇಂದ್ರದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲು ಶತ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಲೋಕಸಭಾ ಚುನಾವಣೆಗೆ ಕರ್ನಾ ಟಕದ 21 ಕ್ಷೇತ್ರ ಸೇರಿದಂತೆ ದೇಶದ 184 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬಿಜೆಪಿಯ ಭೀಷ್ಮ ಎಂದೇ ಕರೆಯಲ್ಪಡುವ 91 ವರ್ಷದ ಎಲ್.ಕೆ.ಅಡ್ವಾಣಿ ಅವರ ಸ್ಪರ್ಧೆಗೆ ಅವಕಾಶ ನಿರಾಕರಿಸ ಲಾಗಿದ್ದು, ಅವರು ಸ್ಪರ್ಧಿಸುತ್ತಿದ್ದ ಗುಜರಾತ್‍ನ ಗಾಂಧಿ ನಗರ ಕ್ಷೇತ್ರವನ್ನು ಪ್ರಧಾನಿ ಬಲಗೈ ಭಂಟ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ನೀಡಲಾ ಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ…

ಶ್ರೀನಿವಾಸಪ್ರಸಾದ್, ಪ್ರತಾಪ್‍ಸಿಂಹ, ಸದಾನಂದಗೌಡ, ಶೋಭಾ ಕರಂದ್ಲಾಜೆ ಸ್ಪರ್ಧಿಸಲು ಅವಕಾಶ
ಮೈಸೂರು

ಶ್ರೀನಿವಾಸಪ್ರಸಾದ್, ಪ್ರತಾಪ್‍ಸಿಂಹ, ಸದಾನಂದಗೌಡ, ಶೋಭಾ ಕರಂದ್ಲಾಜೆ ಸ್ಪರ್ಧಿಸಲು ಅವಕಾಶ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ನೀಡದಿರಲು ನಿರ್ಧರಿಸಿ ರುವ ರಾಷ್ಟ್ರೀಯ ಬಿಜೆಪಿ ತನ್ನ ಅಭ್ಯರ್ಥಿ ಯನ್ನು ಕಣಕ್ಕಿಳಿಸಲು ನಿರ್ಧರಿಸಿರುವುದಲ್ಲದೆ, ಕರ್ನಾಟಕದ ಹಾಲಿ ಎಲ್ಲಾ ಸಂಸದರಿಗೂ ಮತ್ತೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅಧ್ಯಕ್ಷತೆ ಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲೂ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಲ್ಲದೆ, ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಅಧಿಕೃತವಾಗಿ ಪಟ್ಟಿ ಹೊರ…

ಪರಿಕ್ಕರ್ ನಿಧನ ಹಿನ್ನೆಲೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಮುಂದೂಡಿಕೆ
ಮೈಸೂರು

ಪರಿಕ್ಕರ್ ನಿಧನ ಹಿನ್ನೆಲೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಮುಂದೂಡಿಕೆ

ಬೆಂಗಳೂರು: ಕ್ಯಾನ್ಸರ್ ರೋಗದಿಂದ ನಿನ್ನೆ ಗೋವಾ ರಾಜಧಾನಿ ಪಣಜಿಯಲ್ಲಿ ನಿಧನರಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‍ರವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳ ಬೇಕಾಗಿರುವುದರಿಂದ ಇಂದು ನಡೆಯಬೇಕಿದ್ದ ಬಿಜೆಪಿಯ ಮಹತ್ವದ ಕೇಂದ್ರ ಚುನಾವಣಾ ಸಮಿತಿ ಸಭೆಯನ್ನು ಮುಂದೂಡಲಾಗಿದೆ. ಪರಿಕ್ಕರ್ ಅವರ ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಕೇಂದ್ರ ಚುನಾವಣಾ ಸಮಿತಿಯ ಬಹುತೇಕ ಸದಸ್ಯರು ಅಂತ್ಯಕ್ರಿಯೆಯಲ್ಲಿ…

`ಕೈ’ ಬಿಟ್ಟು `ಕಮಲ’ ಹಿಡಿದ ಮಾಜಿ ಸಚಿವ ಎ.ಮಂಜು
ಮೈಸೂರು

`ಕೈ’ ಬಿಟ್ಟು `ಕಮಲ’ ಹಿಡಿದ ಮಾಜಿ ಸಚಿವ ಎ.ಮಂಜು

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಮಂಜು ಅವರು ನಿರೀಕ್ಷೆಯಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಇಂದು ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆದಿದ್ದು, ಎ.ಮಂಜು ಅವರ ಒಂದೇ ಹೆಸರನ್ನು ಹಾಸನ ಲೋಕಸಭಾ ಕ್ಷೇತ್ರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಮಂಜು ಅವರು ಇಂದು ಸಂಜೆ ಹಠಾತ್ತನೇ ಬಿಜೆಪಿ ಸದಸ್ಯತ್ವ…

ನಾಳೆ ಬಿಜೆಪಿ ಪಟ್ಟಿ ಪ್ರಕಟ
ಮೈಸೂರು

ನಾಳೆ ಬಿಜೆಪಿ ಪಟ್ಟಿ ಪ್ರಕಟ

ಬೆಂಗಳೂರು: ರಾಜ್ಯದಿಂದ ಲೋಕಸಭೆಗೆ ಸ್ಪರ್ಧಿಸಲಿರುವ ಬಿಜೆಪಿ ಹುರಿಯಾಳುಗಳ ಮೊದಲ ಪಟ್ಟಿ ಸೋಮವಾರ ಬಿಡುಗಡೆಯಾಗಲಿದೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಕ್ಕೂ ಮುನ್ನವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುಂದಾಗಿದ್ದ ಕಾಂಗ್ರೆಸ್ ದೆಹಲಿಯಲ್ಲಿ ಇಂದು ನಡೆಯಬೇಕಿದ್ದ ಅಭ್ಯರ್ಥಿ ಆಯ್ಕೆ ಸಮಿತಿ ಸಭೆಯನ್ನು ಮಂಗಳ ವಾರಕ್ಕೆ ಮುಂದೂಡಿದೆ. ಮೈತ್ರಿ ಪಕ್ಷದೊಂದಿ ಗಿನ ಸೀಟು ಹೊಂದಾಣಿಕೆ ನಂತರ ಪಕ್ಷದಲ್ಲಿ ಉಂಟಾಗಿರುವ ಗೊಂದಲದಿಂದ ಆಯ್ಕೆ ಸಮಿತಿ ಸಭೆ ಮುಂದೂಡಲಾಗಿದೆ. ಬಿಜೆಪಿ 20ರಿಂದ 22 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇಂದ್ರ ಘಟಕಕ್ಕೆ ಶಿಫಾರಸು…

ಕೃಷ್ಣ-ಯಡಿಯೂರಪ್ಪ ಭೇಟಿ: ಸುಮಲತಾ ಸ್ಪರ್ಧೆ ಕುರಿತು ಚರ್ಚೆ
ಮೈಸೂರು

ಕೃಷ್ಣ-ಯಡಿಯೂರಪ್ಪ ಭೇಟಿ: ಸುಮಲತಾ ಸ್ಪರ್ಧೆ ಕುರಿತು ಚರ್ಚೆ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೆಣಸಾಡುತ್ತಿರುವ ಮಾಜಿ ಸಚಿವ, ದಿವಂಗತ ನಟ ಅಂಬರೀಶ್ ಪತ್ನಿ ಸುಮ ಲತಾ ಅವರಿಗೆ ಬೆಂಬಲ ನೀಡಬೇಕೇ? ಬೇಡವೇ? ಎಂಬ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ-ಬಿ.ಎಸ್. ಯಡಿಯೂರಪ್ಪ ಚರ್ಚೆ ನಡೆಸಿದರು. ಇಂದು ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಸಚಿವರೂ ಆದ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಒಂದು ಗಂಟೆ…

‘ಕೈ’ಗೆ ಶಾಕ್ ನೀಡಲಿದ್ದಾರಾ ಎ.ಮಂಜು?
ಹಾಸನ

‘ಕೈ’ಗೆ ಶಾಕ್ ನೀಡಲಿದ್ದಾರಾ ಎ.ಮಂಜು?

ನೂರಾರು ಬೆಂಬಲಿಗರೊಂದಿಗೆ ‘ಕಮಲ’ ಹಿಡಿಯಲು ಮಂಜು ರೆಡಿ, ಜಿಲ್ಲೆಯಲ್ಲಿ ‘ಕೈ’ ಭವಿಷ್ಯ ಅಂತ್ಯವಾಗುವ ಭೀತಿ ಹಾಸನ: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾ ಗಿದ್ದು, ಜಿಲ್ಲೆಯಲ್ಲಿ ರಾಜಕೀಯ ಬೆಳವಣಿಗೆಗಳು ಸಂಚಲನ ಮೂಡಿಸಿದೆ. ಈಗಾ ಗಲೇ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾಗಿ ಪ್ರಜ್ವಲ್ ಕಣಕ್ಕಿಳಿದಿದ್ದು, ಚುನಾ ವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇವರಿಗೆ ಸವಾಲೊಡ್ಡಲು ಮತ್ತೊಂದೆಡೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಮಂಜು ‘ಕೈ’ ತೊರೆದು ಬಿಜೆಪಿ ಸೇರು ತ್ತಾರೆಂಬ ಚರ್ಚೆ ಶುರುವಾಗಿದೆ. ಮಾಜಿ ಸಚಿವ ಎ.ಮಂಜು…

ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಸದಾನಂದಗೌಡ  ಸೇರಿದಂತೆ ಎಲ್ಲಾ ಹಾಲಿ 15 ಸಂಸದರಿಗೆ ಬಿಜೆಪಿ ಟಿಕೆಟ್
ಮೈಸೂರು

ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಸದಾನಂದಗೌಡ ಸೇರಿದಂತೆ ಎಲ್ಲಾ ಹಾಲಿ 15 ಸಂಸದರಿಗೆ ಬಿಜೆಪಿ ಟಿಕೆಟ್

ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಪ್ರತಾಪ ಸಿಂಹ ಸೇರಿದಂತೆ ಎಲ್ಲಾ ಹಾಲಿ ಸಂಸದರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗಲಿದೆ. ಉಳಿದ ಕಡೆ ಬಿಜೆಪಿ ಅಭ್ಯರ್ಥಿ ಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತ ನಾಡಿದ ಅವರು, ಕಾಂಗ್ರೆಸ್ ತೊರೆದು ವಿಧಾನ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಪಕ್ಷಕ್ಕೆ ಸೇರ್ಪಡೆಗೊಂಡಿರುವ ಉಮೇಶ್ ಜಾಧವ್ ರೀತಿಯಲ್ಲಿಯೇ ಇನ್ನೂ ಹಲವು ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಎರಡು, 3…

ಮನೆ-ಮನೆ ಮೇಲೆ ಬಿಜೆಪಿ ಧ್ವಜ ಕಟ್ಟಲು ಅವಕಾಶ ನೀಡಿ
ಮೈಸೂರು

ಮನೆ-ಮನೆ ಮೇಲೆ ಬಿಜೆಪಿ ಧ್ವಜ ಕಟ್ಟಲು ಅವಕಾಶ ನೀಡಿ

ಮೈಸೂರು: -ಮನೆ-ಮನೆ ಮೇಲೆ ಬಿಜೆಪಿ ಧ್ವಜ ಕಟ್ಟಲು ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರಿಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಿಜೆಪಿ ಧ್ವಜಗಳನ್ನು ತೆರವುಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ನೋಟೀಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಇಂದು ಪಕ್ಷದ ಮುಖಂಡರೊಂದಿಗೆ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಈಗಾಗಲೇ ನ್ಯಾಯಾಲಯದಿಂದ ಬಿಜೆಪಿ ಧ್ವಜ ಕಟ್ಟಲು ಎನ್‍ಓಸಿ ಪಡೆದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕೋರ್ಟ್ ಪ್ರತಿಯೊಂದಿಗೆ ಮನವಿ ಪತ್ರ ಸಲ್ಲಿಸಿ ಮನವರಿಕೆ…

ಮನೆಗಳ ಮೇಲೆ ಹಾಕಲಾದ ಬಿಜೆಪಿ ಬಾವುಟ ತೆರವು  ವೇಳೆ ಮಾತಿನ ಚಕಮಕಿ: ಕೆಲಕಾಲ ಗೊಂದಲ
ಮೈಸೂರು

ಮನೆಗಳ ಮೇಲೆ ಹಾಕಲಾದ ಬಿಜೆಪಿ ಬಾವುಟ ತೆರವು ವೇಳೆ ಮಾತಿನ ಚಕಮಕಿ: ಕೆಲಕಾಲ ಗೊಂದಲ

ಮೈಸೂರು: ಕೆ.ಆರ್.ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಮನೆ ಮೇಲೆ ಹಾರಿಸಿದ್ದ ಬಿಜೆಪಿ ಬಾವುಟ ತೆರವುಗೊಳಿ ಸುವ ಸಂಬಂಧ ಚುನಾವಣಾ ಸಿಬ್ಬಂದಿ ಮತ್ತು ಕಾರ್ಯಕರ್ತರ ನಡುವೆ ಇಂದು ಸಂಜೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಮೈಸೂರಿನ ಅಗ್ರಹಾರದ ತ್ಯಾಗರಾಜ ರಸ್ತೆಯ ನಿವಾಸಿ, ಬಿಜೆಪಿ ಕಾರ್ಯಕರ್ತ ಪ್ರಭುಸ್ವಾಮಿ, ಚುನಾವಣಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆಲಕಾಲ ಗೊಂದಲಮಯ ವಾಯಿತು. ಚುನಾವಣಾ ಸಿಬ್ಬಂದಿ ಮತ್ತು ಅಭಯ ತಂಡದೊಂದಿಗೆ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ತ್ಯಾಗರಾಜ ರಸ್ತೆಯಲ್ಲಿ ಅಳವಡಿ ಸಿದ್ದ ಬಾವುಟ,…

1 2 3 12