ಡಿ.16ಕ್ಕೆ ಸಂಪುಟ ವಿಸ್ತರಣೆ ಸಾಧ್ಯತೆ
ಮೈಸೂರು

ಡಿ.16ಕ್ಕೆ ಸಂಪುಟ ವಿಸ್ತರಣೆ ಸಾಧ್ಯತೆ

December 12, 2019

ಬೆಂಗಳೂರು, ಡಿ.11(ಕೆಎಂಶಿ)- ವರಿಷ್ಠರ ಭೇಟಿಯ ಸಮಯ ನಿಗದಿಯಾಗದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಮಂತ್ರಿ ಮಂಡಲ ವಿಸ್ತರಿಸಲು ಇನ್ನೂ ಕಾಲ ಕೂಡಿ ಬಂದಿಲ್ಲ.

ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾದ ನೂತನ ಶಾಸಕರು ಮಾತ್ರ ತಕ್ಷಣವೇ ಮಂತ್ರಿಮಂಡಲ ವಿಸ್ತರಿಸಿ, ಸರ್ಕಾರ ರಚನೆಗೂ ಮುನ್ನ ನಮಗೆ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಅನರ್ಹರು ಮತ್ತು ಅನರ್ಹಗೊಂಡು ಈಗ ಶಾಸಕರಾಗಿ ರುವವರು, ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಯಕತ್ವ ದಲ್ಲಿ ಇಂದು ಮುಂಜಾನೆ ಯಡಿಯೂರಪ್ಪನವರನ್ನು ಧವಳ ಗಿರಿ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ ನೂತನ ಶಾಸಕರು, ಬೇಡಿಕೆಗಳ ಸರಮಾಲೆಯನ್ನೇ ಅವರ ಮುಂದಿಟ್ಟಿ ದ್ದಾರೆ. ನೂತನ ಶಾಸಕರ ಬೇಡಿಕೆಗಳನ್ನು ಆಲಿಸಿದ ಯಡಿ ಯೂರಪ್ಪನವರು ಒಂದು ಕ್ಷಣ ದಿಙ್ಮೂಢರಾಗಿ, ನಿಮಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತೇನೆ. ನಿಮ್ಮಿಂದಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿರುವುದು. ನಿಮ್ಮ ಬೇಡಿಕೆಗಳಲ್ಲಿ ಕೆಲವನ್ನು ಈಡೇರಿಸಲು ದೆಹಲಿ ವರಿಷ್ಠರ ಅನುಮತಿ ಬೇಕಿದೆ.

ಒಂದೆರಡು ದಿನ ಬಿಟ್ಟು ನೀವೆಲ್ಲರೂ ದೆಹಲಿಗೆ ತೆರಳಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿ ಬನ್ನಿ, ನಿಮ್ಮ ಜೊತೆ ನಾನಿದ್ದೇನೆ ಎಂದಿದ್ದಾರೆ. ನಿಮಗೆ ನೀಡಿದ ಭರವಸೆಯಂತೆ ವಿಧಾನ ಸಭೆಗೆ ಆಯ್ಕೆಗೊಂಡಿರುವವರನ್ನು ಮಂತ್ರಿ ಮಾಡಲು ನಾಳೆಯೇ ಸಮಯ ನಿಗದಿ ಮಾಡಿದ್ದೆ. ಆದರೆ ನನಗೆ ವರಿಷ್ಠ ರಿಂದ ಇನ್ನೂ ಅನುಮತಿ ದೊರೆತಿಲ್ಲ. ಪಕ್ಷದ ಕಾರ್ಯಾಧ್ಯಕ್ಷ ನಡ್ಡಾ ಅವರು ಶನಿವಾರ ದೆಹಲಿಗೆ ಬನ್ನಿ ಸಾಧ್ಯವಾದರೆ ಭಾನುವಾರ ಬೆಳಿಗ್ಗೆ ಅಧ್ಯಕ್ಷರನ್ನು ಭೇಟಿ ಮಾಡಿಸುತ್ತೇನೆ, ಸೋಮವಾರ ನಿಮ್ಮ ಮಂತ್ರಿಮಂಡಲ ವಿಸ್ತರಿಸಿಕೊಳ್ಳಿ ಎಂದಿ ದ್ದಾರೆ. ನೀವು ಇಟ್ಟಿರುವ ಬೇಡಿಕೆಗಳನ್ನು ಅಧ್ಯಕ್ಷರ ಗಮನಕ್ಕೆ ತರುತ್ತೇನೆ. ನೀವು ಪ್ರತ್ಯೇಕವಾಗಿ ಅವರ ಜೊತೆ ಸಮಾ ಲೋಚನೆ ನಡೆಸಿ. ನಾನು ನೀಡಿದ ಭರವಸೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸಾವಧಾನವಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡುವುದಕ್ಕೂ ಮುನ್ನ ನಿನ್ನೆ ರಾತ್ರಿ ಪಂಚತಾರಾ ಹೊಟೇಲ್‍ನಲ್ಲಿ ಸಭೆ ಸೇರಿದ್ದ ನೂತನ ಶಾಸಕರು, ಚುನಾವಣೆಯಲ್ಲಿ ಸೋತವರು ಹಾಗೂ ಅನರ್ಹಗೊಂಡ ಇಬ್ಬರು ಶಾಸಕರು ಒಮ್ಮತದ ನಿರ್ಣಯಗಳನ್ನು ಕೈಗೊಂಡು ಅದನ್ನು ಇಂದು ಬೆಳಿಗ್ಗೆ ಯಡಿಯೂರಪ್ಪನವರ ಮುಂದಿಟ್ಟಿದ್ದಾರೆ.

ವಿಧಾನಸಭೆ ಉಪ ಚುನಾವಣೆಯಲ್ಲಿ ಪರಾಭವಗೊಂಡಿರುವ ಹೆಚ್. ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್, ನಮ್ಮೆಲ್ಲರನ್ನು ಸಂಘಟಿಸಿದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳಬೇಕು. ರಮೇಶ್ ಜಾರಕಿಹೊಳಿ ಬೇಡಿಕೆಗಳ ಪಟ್ಟಿ ಹಿಡಿದು, ಈ ಹಿಂದಿನ ಭರವಸೆಯಂತೆ ನನ್ನನ್ನು ಮತ್ತು ವಿಶ್ವನಾಥ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿ, ಹೊಸಕೋಟೆ ಕ್ಷೇತ್ರದಲ್ಲಿ ನಿಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಂದಲೇ ಎಂಟಿಬಿ ಪರಾಭವಗೊಂಡಿದ್ದಾರೆ. ಚಿಕ್ಕಬಳ್ಳಾಪುರ ನಿಮ್ಮ ಸಂಸದ ಬಚ್ಚೇಗೌಡರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು.

ಅವರ ಪುತ್ರ ಶಾಸಕ ಶರತ್ ಬಚ್ಚೇಗೌಡರಿಗೆ ಸರ್ಕಾರದಲ್ಲಿ ಮಣೆ ಹಾಕಬಾರದು. ನೀವು ಹಿಂದೆ ನೀಡಿದ ಭರವಸೆಯಂತೆ ಜಲಸಂಪನ್ಮೂಲ, ಇಂಧನ, ನಗರಾಭಿವೃದ್ಧಿ, ಸಹಕಾರ, ಕೃಷಿ ಸೇರಿದಂತೆ ಪ್ರಮುಖ ಖಾತೆಗಳನ್ನು ನಮ್ಮವರಿಗೇ ನೀಡಬೇಕು.

ಮುನಿರತ್ನ ಹಾಗೂ ಪ್ರತಾಪ್‍ಗೌಡ ಪಾಟೀಲ್ ಅವರ ವಿಚಾರ ಬಗೆಹರಿಸಿ ತಕ್ಷಣವೇ ಅವರ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ನಾವು ಎಲ್ಲಿ ಗೆದ್ದಿದ್ದೆವೋ ಆ ಜಿಲ್ಲೆ ಉಸ್ತುವಾರಿ ನಮ್ಮದೇ. ನಮ್ಮ ಗೆಲುವಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದವರಿಗೂ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರ ಕಲ್ಪಿಸಬೇಕು. ಪಕ್ಷ ಸಂಘಟನೆಯಲ್ಲೂ ನಮ್ಮ ಬೆಂಬಲಿಗರಿಗೆ ಅವಕಾಶ ಮಾಡಿ ಕೊಡಬೇಕು ಎಂಬ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಬೇಡಿಕೆಗಳನ್ನು ಆಲಿಸಿದ ಮುಖ್ಯಮಂತ್ರಿಯವರು ಬಹುಭಾಗ ನಾನೇ ಈಡೇರಿಸುತ್ತೇನೆ. ಆದರೆ ಕೆಲವು ಕಠಿಣವಾಗಿದೆ. ಇದಕ್ಕೆ ವರಿಷ್ಠರ ಅನುಮತಿ ಅಗತ್ಯ. ನೀವೆಲ್ಲರೂ ಒಮ್ಮೆ ಅಧ್ಯಕ್ಷರನ್ನು ಭೇಟಿ ಮಾಡಿ ಎಂದು ಹೇಳಿ ಕಳುಹಿಸಿದ್ದಾರೆ. ಮುಖ್ಯಮಂತ್ರಿ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಶಾಸಕರು, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ, ಪರಸ್ಪರ ಸಹಕಾರದಲ್ಲಿರುತ್ತೇವೆ. ನಾವ್ಯಾರೂ ಖಾತೆ, ಸಚಿವ ಸ್ಥಾನ ಕೇಳಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ತೀರ್ಮಾನ ಕೈಗೊಳ್ಳುತ್ತಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಲು ನಾವೆಲ್ಲರೂ ಒಟ್ಟಿಗೆ ದೆಹಲಿಗೆ ಹೋಗುತ್ತೇವೆ. ಅವರ ಸಮಯಾವಕಾಶ ಕೋರಿದ್ದೇವೆ ಎಂದರು.

Translate »