ಬಿಜೆಪಿ ಸರ್ಕಾರ ರೈತರನ್ನು ಉದ್ದಿಮೆದಾರರ ಗುಲಾಮರನ್ನಾಗಿಸುತ್ತದೆ
ಮೈಸೂರು

ಬಿಜೆಪಿ ಸರ್ಕಾರ ರೈತರನ್ನು ಉದ್ದಿಮೆದಾರರ ಗುಲಾಮರನ್ನಾಗಿಸುತ್ತದೆ

December 9, 2020

ಬೆಂಗಳೂರು,ಡಿ.8-(ಕೆಎಂಶಿ)ದೇಶದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವ ಮೂಲಕ ರೈತರನ್ನು ಉದ್ದಿಮೆದಾರರ ಗುಲಾಮ ರನ್ನಾಗಿ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ. ರೈತ ಈ ದೇಶದ ಬೆನ್ನೆಲುಬು. ಆತನ ರಕ್ಷಣೆಗೆ ನಿಲ್ಲುವುದು ನಮ್ಮ ಕರ್ತವ್ಯವೇ ಹೊರತು, ರಾಜಕೀಯ ಉದ್ದೇಶ ದಿಂದ ಆ ಹೋರಾಟ ನಡೆಯುತ್ತಿಲ್ಲ. ಕಾಂಗ್ರೆಸ್ ಪಕ್ಷ ದೇಶದ ರೈತರ ಬೆನ್ನಿಗೆ ಸದಾ ನಿಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ಕೊಟ್ಟ ಭಾರತ ಬಂದ್ ಕರೆಗೆ ಬೆಂಬಲ ಸೂಚಿಸಿದ ಕಾಂಗ್ರೆಸ್, ಮಂಗಳವಾರ ವಿಧಾನಸೌಧದ ಗಾಂಧಿ ಪ್ರತಿಮೆ, ಟೌನ್‍ಹಾಲ್ ಮುಂಭಾಗ ಹಾಗೂ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿತು. ಇಲ್ಲೆಲ್ಲ ಪ್ರತ್ಯೇಕವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ಹೋರಾಟ ಒಂದು ಪಕ್ಷ, ಜಾತಿ, ಧರ್ಮದ ಹೋರಾಟ ಅಲ್ಲ. ದೇಶದ ಬೆನ್ನೆಲು ಬಾಗಿರುವ, ದೇಶದ ಜನಸಂಖ್ಯೆಯ ಶೇ.78ರಷ್ಟು ರೈತರ ಬೆನ್ನಿಗೆ ನಿಲ್ಲಲು ನಾವಿಂದು ಇಲ್ಲಿ ಸೇರಿದ್ದೇವೆ.

ಸ್ವಾತಂತ್ರ್ಯ ಪೂರ್ವದಲ್ಲಿ ಹೇಗೆ ಜಾತಿ, ಧರ್ಮ ಭೇದ ಮರೆತು ಹೋರಾಟ ಮಾಡಿದರೋ ಅದೇ ರೀತಿ ಇಂದು ರೈತರ ರಕ್ಷಣೆಗೆ ಎಲ್ಲ ವರ್ಗದ ಜನ ಒಟ್ಟಾಗಿ ನಿಂತಿದ್ದಾರೆ. ನಮಗೆ ಅನ್ನ ನೀಡುವ ಅನ್ನದಾತನ ಬಾಯಿಗೆ ಮಣ್ಣು ಹಾಕಲು ಬಿಜೆಪಿ ಸರ್ಕಾರ ಮುಂದಾಗಿ ರೋದು ದೇಶದ ದುರಂತ. ನಾವೆಲ್ಲರೂ ಬದುಕಿರುವಾ ಗಲೇ ಸಾಯಿಸಲು ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು ಕರಾಳ ಕಾಯ್ದೆಗಳಾ ಗಿದ್ದು, ರೈತರ ಪಾಲಿಗೆ ಇವು ಮರಣ ಶಾಸನಗಳಾಗಿವೆ.

ಬಿಜೆಪಿ ಸರ್ಕಾರ ಈ ಕಾಯ್ದೆಗಳನ್ನು ರೂಪಿಸುವಾಗ ರೈತರನ್ನಾಗಲಿ, ರೈತ ಸಂಘಟನೆಗಳನ್ನಾಗಲಿ ಭೇಟಿ ಮಾಡಿ ಅವರ ಅಭಿಪ್ರಾಯ ಪಡೆಯಲಿಲ್ಲ. ಇದು ಬಿಜೆಪಿಯ ಸರ್ವಾಧಿಕಾರಿ ಮನಸ್ಥಿತಿಯನ್ನು ತೋರು ತ್ತದೆ. ಈ ದೇಶದ ಆಹಾರ ಉತ್ಪನ್ನಗಳ ಮಾರುಕಟ್ಟೆ ಮೌಲ್ಯ 25 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿ ಸಲಾಗಿದ್ದು, ದುಡ್ಡು ಮಾಡಲು ಖಾಸಗಿ ಕಂಪನಿಗಳು ಈ ಮಾರುಕಟ್ಟೆ ಮೇಲೆ ಕಣ್ಣಿಟ್ಟಿವೆ. ಈ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಬಿಜೆಪಿ ಸರ್ಕಾರ ಕಾಯ್ದೆಗಳ ತಿದ್ದುಪಡಿ ಮೂಲಕ ರೈತರ ಸಮಾಧಿ ಕಟ್ಟಲು ಮುಂದಾ ಗಿದೆ. ಈ ನೂತನ ಕಾಯ್ದೆಗಳು ರೈತರಿಗೆ ಹೆಚ್ಚಿನ ಅವ ಕಾಶ ಕಲ್ಪಿಸುತ್ತದೆ, ಆದರೆ ಕಾಂಗ್ರೆಸ್ ರೈತರ ದಾರಿ ತಪ್ಪಿ ಸುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಇದುವರೆಗೂ ಈ ಕಾಯ್ದೆಗಳಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಪ್ರತಿಭಟನಾನಿರತ ರೈತರಿಗೆ ವಿವರಿಸಲು ಅವರಿಂದ ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಯಾರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂಬುದು ಇದರಿಂದಲೇ ಸಾಬೀತಾಗುತ್ತದೆ.

ಕೇಂದ್ರ ಸರ್ಕಾರ ಮೇಲ್ನೋಟಕ್ಕೆ ಎಪಿಎಂಸಿ (ಮಂಡಿ ಮಾರುಕಟ್ಟೆ) ಮುಚ್ಚುವುದಿಲ್ಲ ಎಂದು ಹೇಳುತ್ತಿದೆ. ಆದರೆ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸೆಸ್ ವಿಧಿಸಲಾಗಿದ್ದು, ಎಪಿಎಂಸಿ ಹೊರಗಡೆ ವ್ಯಾಪಾರಕ್ಕೆ ಸೆಸ್ ಇಲ್ಲ. ಇದರಿಂದ ರೈತರನ್ನು ಎಪಿಎಂಸಿಯಿಂದ ದೂರ ಮಾಡುವ ಹುನ್ನಾರ ನಡೆದಿದೆ. ರೈತರು ಈ ಮಾರುಕಟ್ಟೆಯಿಂದ ದೂರ ಉಳಿದರೆ ಸಹಜವಾಗಿಯೆ ಮಂಡಿ ಮಾರುಕಟ್ಟೆಗೆ ಬೀಗ ಹಾಕಲಾಗುತ್ತದೆ.

ಇನ್ನು ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲೂ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಾ ಬಂದಿದೆ. ಬೆಂಬಲ ಬೆಲೆ ಮುಂದುವರಿಯಲಿದೆ ಎಂದು ಹೇಳುವ ಬಿಜೆಪಿ ನಾಯ ಕರು, ಅದರ ಬಗ್ಗೆ ಕಾಯ್ದೆಯಲ್ಲಿ ಪ್ರಸ್ತಾಪವನ್ನೇ ಮಾಡಿಲ್ಲ. ಬೆಂಬಲ ಬೆಲೆಗೆ ಕಾನೂನು ರಕ್ಷಣೆಯನ್ನೇ ಕೊಟ್ಟಿಲ್ಲ. ನಾಳೆ ಕಂಪನಿಯವರು ಬೆಂಬಲ ಬೆಲೆ ನೀಡದಿದ್ದರೆ ಬಡ ರೈತ ಯಾರನ್ನು ಪ್ರಶ್ನೆ ಮಾಡಬೇಕು?

ಇನ್ನು ಒಪ್ಪಂದ ಕೃಷಿ ಪದ್ಧತಿಯು ರೈತರನ್ನು ಗುಲಾಮರನ್ನಾಗಿ ಮಾಡಲಿದೆ. ಇದರಲ್ಲಿ ಕಂಪನಿಗಳು ಹೇಳಿದ ಬೆಳೆಯನ್ನು ರೈತ ಬೆಳೆದು ಕೊಡಬೇಕು. ಆಗ ರೈತನಿಗೆ ಬೆಳೆ ಆಯ್ಕೆ ಸ್ವಾತಂತ್ರ್ಯ ಇರುವುದಿಲ್ಲ. ರೈತ ಬೆಳೆದ ಬೆಳೆ ಗುಣಮಟ್ಟವನ್ನು ಕಂಪನಿಯೇ ತೀರ್ಮಾ ನಿಸಲಿದೆ, ರೈತ ಬೆಳೆದ ಬೆಳೆ ಗುಣಮಟ್ಟ ಸರಿಯಿಲ್ಲ ಎಂದು ನೆಪ ಹೇಳಿ ಕಡಿಮೆ ದುಡ್ಡು ನೀಡುತ್ತಾರೆ. ಒಪ್ಪಂದ ಮಾಡಿಕೊಂಡ ತಪ್ಪಿಗೆ ರೈತ ಬೇರೆಯವರಿಗೂ ಮಾರಲು ಆಗುವುದಿಲ್ಲ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ನಾಯಕರೂ ನಮ್ಮ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ವಿದೇಶದಲ್ಲಿರುವ ಭಾರತೀಯರು ಕೂಡ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ.

ರೈತರಿಗೆ ಯಾವುದೇ ಜಾತಿ, ಧರ್ಮದ ವ್ಯತ್ಯಾಸ ವಿಲ್ಲ. ಅವರ ಹೆಸರೇಳಿಕೊಂಡು ನಾವೇನೂ ರಾಜಕೀಯ ಮಾಡುತ್ತಿಲ್ಲ. ಅವರ ಭವಿಷ್ಯ, ಅವರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅವರ ಪರವಾಗಿ ನಿಲ್ಲುವುದು ನಮ್ಮ ಕರ್ತವ್ಯ, ಈಗಲೂ ಕಾಂಗ್ರೆಸ್ ರೈತರ ಬೆನ್ನಿಗೆ ನಿಂತಿದೆ. ಅವರ ರಕ್ಷಣೆಗೆ ಬದ್ಧವಾಗಿದೆ. ನಾನು ಈಗಾಗಲೇ ಹೇಳಿರುವ ಹಾಗೆ ರೈತನಿಗೆ ಯಾವುದೇ ರೀತಿಯ ಸಂಬಳವಾಗಲೀ, ಬೋನಸ್ ಆಗಲೀ, ಪಿಂಚಣಿ ಯಾಗಲೀ, ಲಂಚವಾಗಲೀ ಇಲ್ಲ. ರೈತರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ರೈತರು ಇಷ್ಟು ದೊಡ್ಡ ಪ್ರಮಾಣ ದಲ್ಲಿ ತಿರುಗಿ ಬೀಳುತ್ತಾರೆ ಎಂದು ಬಿಜೆಪಿ ಸರಕಾರದವರು ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ಅವರು ವಿರೋಧ ಪಕ್ಷಗಳ ಮೇಲೆ ರಾಜಕೀಯದ ಆರೋಪ ಮಾಡುತ್ತಿ ದ್ದಾರೆ. ಕೇಂದ್ರ ಸರ್ಕಾರ ಮಾಡಿರುವ ಕಾಯ್ದೆಗಳು ಈ ದೇಶದ ಜನರ, ರೈತರ ವಿರೋಧಿಯಾಗಿವೆ.

ನಾವು ಈ ಕಾನೂನಿನ ವಿಚಾರವಾಗಿ ಚರ್ಚೆ ಮಾಡಿರ ಬಹುದು, ಆದರೆ ನಾವು ಅದನ್ನು ಜಾರಿಗೆ ತಂದಿರಲಿಲ್ಲ. ಆದರೆ ಈ ಸರ್ಕಾರ ಯಾರ ಬಳಿಯೂ ಚರ್ಚೆ ಮಾಡದೇ ಏಕಾಏಕಿ ಅಧಿಕಾರ ದುರುಪಯೋಗ ಮಾಡಿಕೊಂಡು ಈ ಕಾನೂನು ಜಾರಿಗೆ ತರುತ್ತಿದೆ. ಈ ಕಾಯ್ದೆಯಲ್ಲಿ ಸ್ವಾಮಿನಾಥನ್ ಸಮಿತಿ ಶಿಫಾರಸ್ಸುಗಳನ್ನು ಗಾಳಿಗೆ ತೂರಿ ದ್ದಾರೆ. ನಮ್ಮ ರಾಜ್ಯದಲ್ಲಿ ಈ ಕಾಯ್ದೆಯನ್ನು ವಿಧಾನ ಪರಿಷತ್ತಿನಲ್ಲಿ ಮಣಿಸಲಾಗಿದ್ದು, ಇದು ಇತಿ ಹಾಸದಲ್ಲಿ ದಾಖಲೆಯಾಗಿ ಸೇರಿದೆ. ಈ ಹೋರಾಟ ಕೇವಲ ಇವತ್ತಿಗೆ ಮಾತ್ರ ಸೀಮಿತವಾಗಿಲ್ಲ. ಈ ಕರಾಳ ಕಾಯ್ದೆಯನ್ನು ಸರ್ಕಾರ ಹಿಂಪಡೆಯುವವರೆಗೂ ನಾವು ರೈತರ ಜತೆಗೆ ನಿಂತು ಅವರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ.’ ಎಂದರು.

Translate »