Tag: DK Shivakumar

ಕೊರೋನಾ ಪರಿಸ್ಥಿತಿ ನಿರ್ವಹಣೆ: ಕಾಂಗ್ರೆಸ್ ಕಾರ್ಯಪಡೆ ಮೊದಲ ಸಭೆ ಮಾ.31ಕ್ಕೆ
ಮೈಸೂರು

ಕೊರೋನಾ ಪರಿಸ್ಥಿತಿ ನಿರ್ವಹಣೆ: ಕಾಂಗ್ರೆಸ್ ಕಾರ್ಯಪಡೆ ಮೊದಲ ಸಭೆ ಮಾ.31ಕ್ಕೆ

March 28, 2020

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಣ ಹಾಗೂ ಪರಿಸ್ಥಿತಿ ನಿರ್ವಹಣೆಗೆ ರಚಿಸಲಾಗಿರುವ ಕಾಂಗ್ರೆಸ್ ಕಾರ್ಯಪಡೆಯ ಮೊದಲ ಸಭೆ ಮಾ.31 ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಕಾರ್ಯಪಡೆಯ ಮುಖ್ಯಸ್ಥ ರಮೇಶ್ ಕುಮಾರ್ ಅವರು ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಅನೌಪಚಾರಿಕ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ ನಾಯಕ ಹಸನಬ್ಬ ಅವರು ಉಪಸ್ಥಿತರಿದ್ದರು. ಕಾರ್ಯಪಡೆಯ ಮೊದಲ ಸಭೆ ಮುಂದಿನ ಮಂಗಳವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ…

ಕಾಂಗ್ರೆಸ್ ಶಾಸಕರಿಂದ ತಲಾ ಒಂದು ಲಕ್ಷ ರೂ ’ಕರೋನಾ’ ದೇಣಿಗೆ: ಡಿಕೆ ಶಿವಕುಮಾರ್
ಮೈಸೂರು

ಕಾಂಗ್ರೆಸ್ ಶಾಸಕರಿಂದ ತಲಾ ಒಂದು ಲಕ್ಷ ರೂ ’ಕರೋನಾ’ ದೇಣಿಗೆ: ಡಿಕೆ ಶಿವಕುಮಾರ್

March 27, 2020

ಬೆಂಗಳೂರು: ಕೊರೋನಾ ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ಕಾಂಗ್ರೆಸ್ ಶಾಸಕರು ತಲಾ ಕನಿಷ್ಠ 1 ಲಕ್ಷ ರೂ. ದೇಣಿಗೆಯನ್ನು ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಶಾಸಕ ಅಜಯ್ ಸಿಂಗ್ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು. ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಾವು…

ಕೊರೊನಾ ನಿಯಂತ್ರಣ: ಸರ್ವ ಪಕ್ಷ ಸಭೆ ಕರೆಯಲು ಬಿಎಸ್‌ವೈಗೆ  ಡಿ.ಕೆ. ಶಿವಕುಮಾರ್ ಒತ್ತಾಯ
ಮೈಸೂರು

ಕೊರೊನಾ ನಿಯಂತ್ರಣ: ಸರ್ವ ಪಕ್ಷ ಸಭೆ ಕರೆಯಲು ಬಿಎಸ್‌ವೈಗೆ ಡಿ.ಕೆ. ಶಿವಕುಮಾರ್ ಒತ್ತಾಯ

March 26, 2020

ಬೆಂಗಳೂರು ಮಾರ್ಚ್ 26 (ಕೆಎಂಶಿ): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆ ಕರೆಯಬೇಕೆಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಆಗ್ರಹಿಸಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರ ಕರೆ ಮಾಡ್ತಿದ್ದಾರೆ, ಅಲ್ಲದೇ ಅನೇಕ ಸಂಘಟನೆಗಳ ಮುಖ್ಯಸ್ಥರು ಕರೆ ಮಾಡಿ, ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೈರಸ್ ತಡೆಗಟ್ಟಲು ಬದಲು ಸಂಬಂಧಪಟ್ಟ ಸಚಿವರುಗಳಲ್ಲಿ ಸಮನ್ವಯತೆ ಇಲ್ಲದೆ, ಪ್ರಚಾರಕ್ಕಾಗಿ ಪೈಪೋಟಿ ಮಾಡುತ್ತಿದ್ದಾರೆ. ಪ್ರತಿಯೊಬ್ಬ ನಾಗರೀಕ ಕೂಡ ಮನೇಲಿ ಇರಬೇಕು…

ಟ್ರಬಲ್ ಶೂಟರ್ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ?
ಮೈಸೂರು

ಟ್ರಬಲ್ ಶೂಟರ್ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ?

December 16, 2019

ಬೆಂಗಳೂರು, ಡಿ.15-ನಾಯಕರ ಕಚ್ಚಾಟದಿಂದ ರಾಜ್ಯದಲ್ಲಿ ಪಕ್ಷದ ಪುನಶ್ಚೇತನಕ್ಕೆ ಕಾಂಗ್ರೆಸ್ ಹೈಕಮಾಂಡ್ ಗಂಭೀರ ಪ್ರಯತ್ನ ಆರಂಭಿಸಿದ್ದು, ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಪಕ್ಷದ ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವ ರಿಗೆ ಕಟ್ಟಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನನುಭವಿಸಿದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ವಿಪಕ್ಷ ನಾಯಕ ಸ್ಥಾನಕ್ಕೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಸಲ್ಲಿಸಿದ್ದಾರೆ….

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಿಗೆ ಕಳಂಕ ತರುವ ಯತ್ನ: ಡಿಕೆಶಿ
ಮೈಸೂರು

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಿಗೆ ಕಳಂಕ ತರುವ ಯತ್ನ: ಡಿಕೆಶಿ

December 5, 2019

ನವದೆಹಲಿ : ಮಾಜಿ ಸಚಿವ `ಟ್ರಬಲ್ ಶೂಟರ್’ ಡಿಕೆ ಶಿವಕುಮಾರ್ ಬುಧವಾರ ದೆಹಲಿಯಲ್ಲಿ ದಿಢೀರ್ ಸುದ್ದಿಗೋಷ್ಟಿ ನಡೆಸಿ, ಕೆಂಪೇಗೌಡ ಅಧ್ಯಯನ ಪೀಠ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಬೆಂಗಳೂರು ವಿವಿ ಅಧ್ಯಯನ ಪೀಠ ಕಾಮಗಾರಿ ಕೈ ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ದ ವಾಗ್ಧಾಳಿ ನಡೆಸಿದ ಡಿಕೆ ಶಿವಕುಮಾರ್, ರಾಜ್ಯ ಸರ್ಕಾರ ಬೆಂಗಳೂರು ವಿವಿ ಅಧ್ಯಯನ ಪೀಠ ಕಾಮಗಾರಿಯನ್ನು ರದ್ದು ಮಾಡಿರುವುದು ಖಂಡನಾರ್ಹ, ಕೆಂಪೇಗೌಡರ ಹೆಸರಿಗೆ ಕಳಂಕ ತರುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದರು….

ಡಿಕೆಶಿ ನ್ಯಾಯಾಂಗ ಬಂಧನ ಅ.15ರವರೆಗೆ ವಿಸ್ತರಣೆ
ಮೈಸೂರು

ಡಿಕೆಶಿ ನ್ಯಾಯಾಂಗ ಬಂಧನ ಅ.15ರವರೆಗೆ ವಿಸ್ತರಣೆ

October 2, 2019

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ದೆಹಲಿ ನ್ಯಾಯಾಲಯವು ಅಕ್ಟೋಬರ್ 15 ರವರೆಗೆ ವಿಸ್ತರಿಸಿದೆ. ಅಲ್ಲದೆ ಅಕ್ಟೋಬರ್ 4 ಮತ್ತು 5 ರಂದು ತಿಹಾರ್ ಜೈಲಿನಲ್ಲಿರುವ ಶಿವ ಕುಮಾರ್ ಅವರನ್ನು ವಿಚಾರಣೆಗೆ ಒಳ ಪಡಿಸಲು ನ್ಯಾಯಾಲಯ ಜಾರಿ ನಿರ್ದೇ ಶನಾಲಯಕ್ಕೆ ಅನುಮತಿ ನೀಡಿದೆ. ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿ ಮಂಗಳವಾರ ಕೊನೆಗೊಂಡ ನಂತರ ಅವರನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ…

ಎಲ್ಲವನ್ನೂ ಗೆದ್ದು ಬರ್ತೀನಿ, ಬಿಜೆಪಿ ನಾಯಕರ ಬಂಡವಾಳ ಬಿಚ್ಚಿಡುತ್ತೇನೆ…
ಮೈಸೂರು

ಎಲ್ಲವನ್ನೂ ಗೆದ್ದು ಬರ್ತೀನಿ, ಬಿಜೆಪಿ ನಾಯಕರ ಬಂಡವಾಳ ಬಿಚ್ಚಿಡುತ್ತೇನೆ…

October 2, 2019

ನವದೆಹಲಿ: ನೋಡುತ್ತಾ ಇರಿ, ಎಲ್ಲ ವನ್ನೂ ಗೆದ್ದು ಬರು ತ್ತೇನೆ. ಬಿಜೆಪಿ ನಾಯ ಕರ ಒಬ್ಬೊಬ್ಬರ ಬಂಡ ವಾಳವನ್ನೂ ಬಿಚ್ಚಿಡು ತ್ತೇನೆ ಎಂದು ಇಡಿ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಖಡಕ್ಕಾಗಿ ನುಡಿ ದಿದ್ದಾರೆ. ಇಂದು ದೆಹಲಿ ಕೋರ್ಟಿನಲ್ಲಿ ವಿಚಾರಣೆಗೆ ಹಾಜರಾದ ವೇಳೆ ಡಿಕೆಶಿ ಅವರು ತಮ್ಮ ಆಪ್ತರ ಜೊತೆ ಈ ರೀತಿ ಹೇಳಿದ್ದಾರೆ. ಯಡಿಯೂರಪ್ಪ ರಾಚೇನಹಳ್ಳಿ ಆಸ್ತಿ ಕೊಂಡಿದ್ದು ಎಷ್ಟಕ್ಕೆ ಹಾಗೂ ಅದನ್ನು ಮಾರಿದ್ದು ಎಷ್ಟಕ್ಕೆ ಎಂದು ಎಲ್ಲವೂ ನನಗೆ ಗೊತ್ತಿದೆ. ಅಂದು…

ತಿಹಾರ್ ಜೈಲು ಪಾಲಾದ ಡಿಕೆಶಿ
ಮೈಸೂರು

ತಿಹಾರ್ ಜೈಲು ಪಾಲಾದ ಡಿಕೆಶಿ

September 20, 2019

ಬೆಂಗಳೂರು, ಸೆ.19(ಕೆಎಂಶಿ)- ಅಕ್ರಮ ಹಣದ ವಹಿವಾಟು ಆರೋಪದ ಮೇಲೆ ಕರ್ನಾಟಕದ ಮಾಜಿ ಸಚಿವ ಹಾಗೂ ಕಾಂಗ್ರೆಸ್‍ನ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್ ಕೊನೆಗೂ ತಿಹಾರ್ ಜೈಲು ಪಾಲಾಗಿದ್ದಾರೆ. ನವದೆಹಲಿಯ ತಿಹಾರ್ ಜೈಲ್ ಪಾಲಾದ ಕರ್ನಾಟಕದ ಮೊಟ್ಟಮೊದಲ ರಾಜ ಕಾರಣಿ ಡಿ.ಕೆ.ಶಿವಕುಮಾರ್ ಆಗಿದ್ದಾರೆ. ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಅನಾರೋಗ್ಯ ಸಮಸ್ಯೆಯಿಂದ ಕಳೆದೆರಡು ದಿನಗಳಿಂದ ನವದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿ.ಕೆ. ಶಿವಕುಮಾರ್ ಆರೋಗ್ಯ ಸ್ಥಿತಿ ಸ್ಥಿರವಾ ಗಿದೆ ಎಂದು ವೈದ್ಯರು ದೃಢಪಡಿಸಿದ್ದರಿಂದ ಅವರನ್ನು ಆಸ್ಪತ್ರೆಯಿಂದ…

ರಾಜ್ಯಾದ್ಯಂತ ಡಿಕೆಶಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಮೈಸೂರು

ರಾಜ್ಯಾದ್ಯಂತ ಡಿಕೆಶಿ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

September 5, 2019

ಬೆಂಗಳೂರು, ಸೆ.4(ಕೆಎಂಶಿ)-ಡಿ.ಕೆ. ಶಿವಕುಮಾರ್ ಬಂಧನದಿಂದ ಆಕ್ರೋಶಗೊಂಡ ಅವರ ಅಭಿಮಾನಿ ಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾ ದ್ಯಂತ ಉಗ್ರ ಪ್ರತಿಭಟನೆ ನಡೆಸಿ ಬಸ್‍ಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿದ್ದರಿಂದ ಪೊಲೀಸ್ ಸೇರಿದಂತೆ ಹಲವು ಮಂದಿಗೆ ಗಾಯಗಳಾಗಿವೆ. ಕೇಂದ್ರ ಸರ್ಕಾರದ ರಾಜಕೀಯ ಸೇಡಿನ ಕ್ರಮ ಪ್ರತಿಭಟಿಸಿ, ಎಐಸಿಸಿ ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದು, ಅದರ ಆದೇಶದಂತೆ ಕೆಪಿಸಿಸಿ ಕೂಡ ಬೀದಿಗಿಳಿದಿದೆ. ಕಾಂಗ್ರೆಸ್ ಹೋರಾಟಕ್ಕೆ ಬೆಂಬಲ ನೀಡಿ ಜೆಡಿಎಸ್ ಕಾರ್ಯಕರ್ತರೂ ಬೀದಿಗಿಳಿದಿದ್ದಾರೆ. ರಾಜ್ಯ ಘಟಕದ ಸೂಚನೆ ಮೇರೆಗೆ ಜಿಲ್ಲಾ ಹಾಗೂ…

ಡಿ.ಕೆ.ಶಿವಕುಮಾರ್ ಬಂಧನ
ಮೈಸೂರು

ಡಿ.ಕೆ.ಶಿವಕುಮಾರ್ ಬಂಧನ

September 4, 2019

ನವದೆಹಲಿ, ಸೆ.3-ಕಳೆದ ಎರಡು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡ 8.60 ಕೋಟಿ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಇಂದು ರಾತ್ರಿ ಬಂಧಿಸಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಅವರನ್ನು ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು, ಶಿವಕುಮಾರ್ ಅವರಿಗೆ ಮಧ್ಯಾಹ್ನ ಊಟದ ವಿರಾಮಕ್ಕೂ ಅವಕಾಶ ನೀಡಲಿಲ್ಲ. ನಿರಂತರ ವಿಚಾರಣೆಯ ನಂತರ ರಾತ್ರಿ 8.38ರ ವೇಳೆಗೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಯಿತು. ಈ ವೇಳೆ ಇಡಿ ಕಚೇರಿಯ…

1 2 3 6