ಕೊರೊನಾ ನಿಯಂತ್ರಣ: ಸರ್ವ ಪಕ್ಷ ಸಭೆ ಕರೆಯಲು ಬಿಎಸ್‌ವೈಗೆ  ಡಿ.ಕೆ. ಶಿವಕುಮಾರ್ ಒತ್ತಾಯ
ಮೈಸೂರು

ಕೊರೊನಾ ನಿಯಂತ್ರಣ: ಸರ್ವ ಪಕ್ಷ ಸಭೆ ಕರೆಯಲು ಬಿಎಸ್‌ವೈಗೆ ಡಿ.ಕೆ. ಶಿವಕುಮಾರ್ ಒತ್ತಾಯ

March 26, 2020

ಬೆಂಗಳೂರು ಮಾರ್ಚ್ 26 (ಕೆಎಂಶಿ): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆ ಕರೆಯಬೇಕೆಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರ ಕರೆ ಮಾಡ್ತಿದ್ದಾರೆ, ಅಲ್ಲದೇ ಅನೇಕ ಸಂಘಟನೆಗಳ ಮುಖ್ಯಸ್ಥರು ಕರೆ ಮಾಡಿ, ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೈರಸ್ ತಡೆಗಟ್ಟಲು ಬದಲು ಸಂಬಂಧಪಟ್ಟ ಸಚಿವರುಗಳಲ್ಲಿ ಸಮನ್ವಯತೆ ಇಲ್ಲದೆ, ಪ್ರಚಾರಕ್ಕಾಗಿ ಪೈಪೋಟಿ ಮಾಡುತ್ತಿದ್ದಾರೆ.

ಪ್ರತಿಯೊಬ್ಬ ನಾಗರೀಕ ಕೂಡ ಮನೇಲಿ ಇರಬೇಕು ಅಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರಗಳು ಅದರದೇ ಆದ ರೀತಿಯಲ್ಲಿ ಕೆಲಸ ಮಾಡ್ತಿವೆ, ಈಗ ಏನನ್ನೂ ನಾನು ವ್ಯಾಖ್ಯಾನ ಮಾಡೋಕೆ ಹೋಗಲ್ಲ.

ಪೊಲೀಸ್ ಮಾಡ್ತಿರೋ ಕಾರ್ಯ ಶೈಲಿ ತೋರಿಸ್ತಿದ್ದೀರಿ, ಹೊಡೆಯೋದು, ತುಳಿಯೋ ಕೆಲಸ ಮಾಡ್ತಿದ್ದಾರೆ ಅಂತಹ ಅಪರಾಧ ಏನ್ ಮಾಡಿದ್ದಾರೋ ಗೊತ್ತಿಲ್ಲ. ಎಲ್ಲರನ್ನೂ ನಿಯಂತ್ರ ಮಾಡಿ.

ನಿಮ್ಮ ಆರ್ ಎಸ್ ಎಸ್ ಸಿದ್ದಾಂತ ಕೆಲಸದ ಬಗ್ಗೆ ಚರ್ಚೆ ಮಾಡಲ್ಲ, ಅನುಮತಿ ತೆಗೆದುಕೊಂಡಿದ್ದೇವೆ ಅಂತ ಕಲೆಕ್ಷನ್ ಮಾಡಲು ಹೊರಡಿದ್ದಾರೆ.

ಐದು ಕೆ.ಜಿ ಅಕ್ಕಿ, ಸಾಲ್ಟ್, ಅಡುಗೆ ಎಣ್ಣೆ ಕೊಡ್ತೀವಿ ಅಂತ ಗಾಡಿಗಳಲ್ಲಿ ಓಡಾಡ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅನುಮತಿ ಕೊಟ್ಟಿದ್ದಾರಾ, ಎಲ್ಲರೂ ಕೂಡ ಸೇವೆ ಮಾಡಲು ರೆಡಿಯಾಗಿದ್ದಾರೆ.

ಆದರೆ ಇವರು ಬೇಕಾಬಿಟ್ಟಿ ಓಡಾಡ್ಕೊಂಡು ಇದ್ದಾರೆ. ಕೊರೋನಾ ಇದು ಪ್ರಪಂಚದ ಸಮಸ್ಯೆ, ದೇಶದ ಸಮಸ್ಯೆ, ನಾವು ಎಲ್ಲ ರೀತಿಯ ಸಹಕಾರ ಕೊಡ್ತೀವಿ ಅಂತ ಹೇಳಿದ್ದೇವೆ. ಆದರೆ ನಿಮ್ಮ ಕಾರ್ಯಕರ್ತರು ರಾಜಕೀಯ ಲಾಭ ಪಡೆದುಕೊಳ್ತಿದ್ದಾರೆ.

ಸರ್ಕಾರ ಒಂದೇ ಒಂದು ಪ್ಲಾನ್ ಆಫ್ ಆಯಕ್ಷನ್ ತೆಗೆದುಕೊಂಡಿಲ್ಲ. ನಮ್ಮನ್ನು ಕರೆದು ಸಲಹೆನೂ ಪಡೆಯದೇ ಹೋಗುತ್ತಿದ್ದಾರೆ.

ಇಬ್ಬರು ಸಚಿವರ ನಡುವೆ ಗೊಂದಲ ಇದೆ ಅನ್ನೋದನ್ನ ನೋಡ್ತಾ ಇದ್ದೇವೆ. ಇದು ನಿಮ್ಮ ಪಾರ್ಟಿ ಪ್ರಾಬ್ಲಮ್ಮಾ, ಆಡಳಿತದ ಪ್ರಾಬ್ಲಮ್ಮಾ.

ಅತೀ ಬುದ್ದಿವಂತ ಸಚಿವರಿದ್ದಾರೆ, ಅವರ ಬಗ್ಗೆ ನಾನು ಮಾತಾಡೋಕೆ ಹೋಗಲ್ಲ. ಇಬ್ಬರೂ ಸಚಿವರಿಗೆ ಕೆಲಸ ಹಂಚಿದ್ದೀರಾ.

ಏನ್ ಇದು ಫೋನ್ ಎತ್ತಿದ್ರೆ ಕೆಮ್ಮೋದು ಬರುತ್ತೆ, ಅದನ್ನ ಕೇಳಿದ್ರೆ ನಮ್ಗೂ ಕೆಮ್ಮು ಜಾಸ್ತಿಯಾಗುತ್ತೆ.

ಗಡಿ ವಿಚಾರ, ನೀರು, ಭೂಮಿ ವಿಚಾರ ಬಂದಾಗ ಸರ್ವಪಕ್ಷ ಸಭೆ ಕರೆದು ಮಾತಾಡೋದು ವಾಡಿಕೆ. ಸರ್ವ ಪಕ್ಷ ಸಭೆ ಕರೆಯಬೇಕು ಅಂತ ನಾನು ಒತ್ತಾಯ ಮಾಡ್ತೀನಿ.

ಪ್ರಧಾನಿ ಮೋದಿ ಕೂಡ ಸರ್ವ ಪಕ್ಷ ಸಭೆ ಕರೆಯಬೇಕು. ನಮ್ಮ ಜಿಲ್ಲೆಯಲ್ಲೂ ಶಂಕಿತರು ಹೆಚ್ಚಾಗಿದ್ದಾರೆ. ನಮ್ಮ ಡ್ರೈವರ್‍ಗಳು ಕೂಡ ಬೆಂಗಳೂರಿನಿಂದ ಓಡೋಗಿದ್ದಾರೆ. ಹಳ್ಳಿಗಳಿಗೂ ಕೂಡ ಸೋಂಕು ಹರಡಿದೆ.

Translate »