ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಿಗೆ ಕಳಂಕ ತರುವ ಯತ್ನ: ಡಿಕೆಶಿ
ಮೈಸೂರು

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಿಗೆ ಕಳಂಕ ತರುವ ಯತ್ನ: ಡಿಕೆಶಿ

December 5, 2019

ನವದೆಹಲಿ : ಮಾಜಿ ಸಚಿವ `ಟ್ರಬಲ್ ಶೂಟರ್’ ಡಿಕೆ ಶಿವಕುಮಾರ್ ಬುಧವಾರ ದೆಹಲಿಯಲ್ಲಿ ದಿಢೀರ್ ಸುದ್ದಿಗೋಷ್ಟಿ ನಡೆಸಿ, ಕೆಂಪೇಗೌಡ ಅಧ್ಯಯನ ಪೀಠ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಬೆಂಗಳೂರು ವಿವಿ ಅಧ್ಯಯನ ಪೀಠ ಕಾಮಗಾರಿ ಕೈ ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ದ ವಾಗ್ಧಾಳಿ ನಡೆಸಿದ ಡಿಕೆ ಶಿವಕುಮಾರ್, ರಾಜ್ಯ ಸರ್ಕಾರ ಬೆಂಗಳೂರು ವಿವಿ ಅಧ್ಯಯನ ಪೀಠ ಕಾಮಗಾರಿಯನ್ನು ರದ್ದು ಮಾಡಿರುವುದು ಖಂಡನಾರ್ಹ, ಕೆಂಪೇಗೌಡರ ಹೆಸರಿಗೆ ಕಳಂಕ ತರುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದರು.

ಸರ್ಕಾರದ ನಿರ್ಧಾರ ಖಂಡನೀಯ, ಈ ಬಗ್ಗೆ 100 ಶಾಸಕರಿಗೆ ಪತ್ರ ಬರೆದಿದ್ದೇನೆ, ಕೆಂಪೇಗೌಡ ಹೆಸರಿಗೆ ಕಳಂಕ ತರುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದರು.

ಕೆಂಪೇಗೌಡ ಅಧ್ಯಯನ ಪೀಠ ಕೈ ಬಿಟ್ಟಿಲ್ಲ: ಕೆಂಪೇಗೌಡ ಅಧ್ಯಯನ ಪೀಠ ಕೈ ಬಿಟ್ಟಿಲ್ಲ, ಬದಲಾಗಿ ಮರು ಪರಿಶೀಲನೆ ನಡೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ, ರಾಜ್ಯ ಸರ್ಕಾರ ಕೆಂಪೇಗೌಡ ಅಧ್ಯಯನ ಪೀಠ ಕೈ ಬಿಟ್ಟಿದೆ ಎಂಬ ಡಿಕೆಶಿ ಆರೋಪಕ್ಕೆ ಸ್ಪಷ್ಟನೆ ನೀಡಿದ ರಾಜ್ಯ ಸರ್ಕಾರ ಕೆಂಪೇಗೌಡ ಅಧ್ಯಯನ ಪೀಠ ಕೈಬಿಟ್ಟಿಲ್ಲ. ಬದಲಾಗಿ ಮರು ಪರಿಶೀಲನೆ ನಡೆಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಕೆಂಪೇಗೌಡ ಅಧ್ಯಯನ ಪೀಠ ವಿಚಾರಕ್ಕೆ ಸಂಬಂಧಿಸಿದಂತೆ ಯೋಜನೆ ಕೈ ಬಿಡುವ ಆದೇಶವನ್ನು ನಗರಾಭಿವೃದ್ಧಿ ಇಲಾಖೆ ಹಿಂಪಡೆದಿದೆ. ಡಿಕೆಶಿ ಸುದ್ದಿಗೋಷ್ಡಿ ಬೆನ್ನಲ್ಲೇ ಈ ಆದೇಶ ವಾಪಸ್ ಪಡೆದುಕೊಂಡಿದೆ. ಈ ಯೋಜನೆಗೆ 50 ಕೋಟಿ ರೂ. ಅನುದಾನ ನಿಗದಿಯಾಗಿತ್ತು. ಆದರೆ ಹಣದ ಕೊರತೆಯಿಂದ ಯೋಜನೆ ರದ್ದಾಗಿತ್ತು. ಆದರೆ ಈಗ ಯೋಜನೆ ಕೈ ಬಿಡುವ ಆದೇಶವನ್ನು ನಗರಾಭಿವೃದ್ಧಿ ಇಲಾಖೆ ಹಿಂಪಡೆದಿದೆ.

Translate »