ನವದೆಹಲಿ, ನ.೭- ಭಗವಂತ ಶ್ರೀರಾಮನಲ್ಲಿ ನಂಬಿಕೆಯಿರುವ ಪ್ರವಾಸಿಗರಿಗಾಗಿ ಭಾರತೀಯ ರೈಲ್ವೆ ಇಲಾಖೆ “‘ದೇಖೋ ಅಪ್ನಾ ದೇಶ್’ ಕಾರ್ಯಕ್ರಮದಡಿಯಲ್ಲಿ ‘ಶ್ರೀ ರಾಮಾಯಣ ಯಾತ್ರೆ’ ಆರಂಭಿಸಿದೆ. ಶ್ರೀರಾಮಾಯಣ ಯಾತ್ರೆ ಪ್ರವಾಸ ಡಿಸೆಂಬರ್ ೧೨ರಿಂದ ಪ್ರಾರಂಭವಾಗ ಲಿದೆ. ಈ ಪ್ರಯಾಣವು ೧೭ ದಿನಗಳವರೆಗೆ ಇರು ತ್ತದೆ ಮತ್ತು ಪ್ರಯಾಣದ ಸಮಯದಲ್ಲಿ, ಪ್ರವಾ ಸಿಗರು ರಾಮಲಲ್ಲಾ ಮತ್ತು ಹನುಮಾನ್‌ಗರ್ಹಿ ಮತ್ತು ಸೀತಾ ಜನ್ಮಸ್ಥಳ ಮತ್ತು ಕಾಶಿ ವಿಶ್ವನಾಥನ ದೈವಿಕ ದರ್ಶನವನ್ನು ಸಹ ಪಡೆಯಬಹುದಾಗಿದೆ. ಒಟ್ಟು ೧೭ ದಿನಗಳಲ್ಲಿ ಈ ಪ್ರಯಾಣ ಪೂರ್ಣ ಗೊಳ್ಳಲಿದೆ….
ದೇಶದ 30 ಕೋಟಿ ಜನರಿಗೆ ಮೊದಲಿಗೆ ಕೋವಿಡ್ ಲಸಿಕೆ
December 9, 2020ನವದೆಹಲಿ: ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಸೇರಿದಂತೆ ದೇಶದ ಸುಮಾರು 30 ಕೋಟಿ ಜನರು ಮೊದಲಿಗೆ ಲಸಿಕೆ ಪಡೆಯಲಿದ್ದಾರೆ ಎಂದು ಕೊರೊನಾ ಲಸಿಕೆ ಕಾರ್ಯತಂತ್ರದ ಬಗ್ಗೆ ಮೊದಲ ಬಾರಿಗೆ ಅಧಿಕೃತ ಮಾಹಿತಿ ಯನ್ನು ಕೇಂದ್ರ ಸರ್ಕಾರ ಹಂಚಿಕೊಂಡಿದೆ. ಅಗತ್ಯವಿರುವ ಪ್ರತಿಯೊಬ್ಬ ಜನರಿಗೂ ಲಸಿಕೆ ಹಾಕುವಂತೆ ಕೋವಿಡ್-19 ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಶಿಫಾರಸು ಮಾಡಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಗೋಷ್ಠಿಯಲ್ಲಿ ತಿಳಿಸಿದರು. ಲಸಿಕೆ ಅಗತ್ಯವಿರುವ ಗುಂಪುಗಳನ್ನು ಆದ್ಯತೆ ಮೇರೆಗೆ ವಿಂಗಡಿಸಲಾಗುವುದು. ಸರ್ಕಾರಿ…
ಕ್ರಿಮಿನಲ್‍ಗಳಿಗೆ ಟಿಕೆಟ್ ನಿರಾಕರಣೆ; ಸುಪ್ರೀಂಗೆ ಆಯೋಗದ ವರದಿ
January 26, 2020ನವದೆಹಲಿ: ಕ್ರಿಮಿನಲ್ ಹಿನ್ನೆಲೆ ಯುಳ್ಳ ವ್ಯಕ್ತಿಗಳನ್ನು ರಾಜಕಾರಣ ಹಾಗೂ ಶಾಸನ ರಚನೆಯಿಂದ ದೂರವಿಡುವ ಸಲು ವಾಗಿ ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್ ಸರ್ಕಾ ರಗಳಿಗೆ ಎಷ್ಟೇ ಸೂಚನೆ, ನಿರ್ದೇಶನ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕ್ರಿಮಿನಲ್ ಗಳು ಆಡಳಿತದ ಕೇಂದ್ರ ಭಾಗ ಪ್ರವೇಶಿಸದಂತೆ ನಿರ್ಬಂಧ ಹಾಕುವ ಆಯೋಗದ ಯತ್ನಕ್ಕೆ ಫಲ ಸಿಗದ ಹಿನ್ನೆಲೆಯಲ್ಲಿ, ಕ್ರಿಮಿನಲ್ ಹಿನ್ನೆಲೆ ಯುಳ್ಳವರಿಗೆ ಚುನಾವಣಾ ಟಿಕೆಟ್ ನೀಡ ದಂತೆ ನಿರ್ದೆ ಶನ ಜಾರಿ ಮಾಡಬೇಕೆಂದು ಕೋರಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‍ಗೆ ವರದಿ…
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಿಗೆ ಕಳಂಕ ತರುವ ಯತ್ನ: ಡಿಕೆಶಿ
December 5, 2019ನವದೆಹಲಿ : ಮಾಜಿ ಸಚಿವ `ಟ್ರಬಲ್ ಶೂಟರ್’ ಡಿಕೆ ಶಿವಕುಮಾರ್ ಬುಧವಾರ ದೆಹಲಿಯಲ್ಲಿ ದಿಢೀರ್ ಸುದ್ದಿಗೋಷ್ಟಿ ನಡೆಸಿ, ಕೆಂಪೇಗೌಡ ಅಧ್ಯಯನ ಪೀಠ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಬೆಂಗಳೂರು ವಿವಿ ಅಧ್ಯಯನ ಪೀಠ ಕಾಮಗಾರಿ ಕೈ ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ದ ವಾಗ್ಧಾಳಿ ನಡೆಸಿದ ಡಿಕೆ ಶಿವಕುಮಾರ್, ರಾಜ್ಯ ಸರ್ಕಾರ ಬೆಂಗಳೂರು ವಿವಿ ಅಧ್ಯಯನ ಪೀಠ ಕಾಮಗಾರಿಯನ್ನು ರದ್ದು ಮಾಡಿರುವುದು ಖಂಡನಾರ್ಹ, ಕೆಂಪೇಗೌಡರ ಹೆಸರಿಗೆ ಕಳಂಕ ತರುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದರು….
ಎಲ್ಲವನ್ನೂ ಗೆದ್ದು ಬರ್ತೀನಿ, ಬಿಜೆಪಿ ನಾಯಕರ ಬಂಡವಾಳ ಬಿಚ್ಚಿಡುತ್ತೇನೆ…
October 2, 2019ನವದೆಹಲಿ: ನೋಡುತ್ತಾ ಇರಿ, ಎಲ್ಲ ವನ್ನೂ ಗೆದ್ದು ಬರು ತ್ತೇನೆ. ಬಿಜೆಪಿ ನಾಯ ಕರ ಒಬ್ಬೊಬ್ಬರ ಬಂಡ ವಾಳವನ್ನೂ ಬಿಚ್ಚಿಡು ತ್ತೇನೆ ಎಂದು ಇಡಿ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಖಡಕ್ಕಾಗಿ ನುಡಿ ದಿದ್ದಾರೆ. ಇಂದು ದೆಹಲಿ ಕೋರ್ಟಿನಲ್ಲಿ ವಿಚಾರಣೆಗೆ ಹಾಜರಾದ ವೇಳೆ ಡಿಕೆಶಿ ಅವರು ತಮ್ಮ ಆಪ್ತರ ಜೊತೆ ಈ ರೀತಿ ಹೇಳಿದ್ದಾರೆ. ಯಡಿಯೂರಪ್ಪ ರಾಚೇನಹಳ್ಳಿ ಆಸ್ತಿ ಕೊಂಡಿದ್ದು ಎಷ್ಟಕ್ಕೆ ಹಾಗೂ ಅದನ್ನು ಮಾರಿದ್ದು ಎಷ್ಟಕ್ಕೆ ಎಂದು ಎಲ್ಲವೂ ನನಗೆ ಗೊತ್ತಿದೆ. ಅಂದು…
ಡಿ.ಕೆ.ಶಿವಕುಮಾರ್ ಬಂಧನ
September 4, 2019ನವದೆಹಲಿ, ಸೆ.3-ಕಳೆದ ಎರಡು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡ 8.60 ಕೋಟಿ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಇಂದು ರಾತ್ರಿ ಬಂಧಿಸಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಅವರನ್ನು ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು, ಶಿವಕುಮಾರ್ ಅವರಿಗೆ ಮಧ್ಯಾಹ್ನ ಊಟದ ವಿರಾಮಕ್ಕೂ ಅವಕಾಶ ನೀಡಲಿಲ್ಲ. ನಿರಂತರ ವಿಚಾರಣೆಯ ನಂತರ ರಾತ್ರಿ 8.38ರ ವೇಳೆಗೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಯಿತು. ಈ ವೇಳೆ ಇಡಿ ಕಚೇರಿಯ…
INX ಮೀಡಿಯಾ ಹಗರಣ: ಹೈಡ್ರಾಮಾ ನಡುವೆ ಕೇಂದ್ರದ ಮಾಜಿ ಗೃಹ, ಹಣಕಾಸು ಸಚಿವ ಪಿ.ಚಿದಂಬರಂ ಬಂಧನ
August 22, 2019ನವದೆಹಲಿ,ಆ.21-ಕಳೆದ 27 ಗಂಟೆಯಿಂದ ತಲೆ ಮರೆಸಿಕೊಂಡಿದ್ದ ಐಎನ್‍ಎಕ್ಸ್ ಮೀಡಿಯಾ ಲಂಚ ಸ್ವೀಕಾರ ಪ್ರಕರಣದ ಆರೋಪಿಯಾದ ಮಾಜಿ ಹಣಕಾಸು ಹಾಗೂ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಕೊನೆಗೂ ಇಂದು ರಾತ್ರಿ ದೆಹಲಿಯ ಜೋರ್‍ಬಾಗ್‍ನಲ್ಲಿರುವ ಅವರ ನಿವಾಸಕ್ಕೆ ನುಗ್ಗಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಚಿದಂಬರಂ ಅವರನ್ನು ಸಿಬಿಐ ಪ್ರಧಾನ ಕಚೇರಿ ಯಲ್ಲಿ ಸಿಬಿಐ ನಿರ್ದೇಶಕ ಆರ್.ಕೆ. ಶುಕ್ಲಾ ವಿಚಾ ರಣೆ ನಡೆಸುತ್ತಿದ್ದಾರೆ. ಇಡೀ ರಾತ್ರಿ ವಿಚಾರಣೆ ನಡೆಸಿ, ನಾಳೆ (ಗುರುವಾರ) ಸಿಬಿಐ ವಿಶೇಷ ನ್ಯಾಯಾ ಲಯಕ್ಕೆ ಹಾಜರುಪಡಿಸಿ, ಮತ್ತೆ ಚಿದಂಬರಂ…
ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಅನರ್ಹ ಶಾಸಕ ಹೆಚ್.ವಿಶ್ವನಾಥ್ ದೆಹಲಿಗೆ ಪ್ರಯಾಣ
August 22, 2019ಮೈಸೂರು,ಆ.21(ಆರ್‍ಕೆಬಿ)- ಅನರ್ಹ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಅವರು ಬುಧವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಬಳಿಕ ದೆಹಲಿ ಯತ್ತ ಪ್ರಯಾಣ ಬೆಳೆಸಿದರು. ಮಾಜಿ ಸಚಿವ, ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಹೆಚ್. ವಿಶ್ವನಾಥ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಸುಪ್ರೀಕೋರ್ಟ್‍ನಲ್ಲಿ ಅನರ್ಹತೆಯನ್ನು ಪ್ರಶ್ನಿಸಿ ಹಾಕಿರುವ ಅರ್ಜಿಯ ವಿಚಾರದ ಬಗ್ಗೆ ವಕೀಲರೊಂದಿಗೆ ಚರ್ಚಿಸಲು ಅವರು ದೆಹಲಿಗೆ ತೆರಳಿದ್ದಾರೆಂದು ಹೇಳಲಾಗಿದೆ. ವಿಶ್ವನಾಥ್ ಯಾವುದೇ ಆಮಿಷಕ್ಕೆ…
ಸುಷ್ಮಾ ಸ್ವರಾಜ್ ಪಂಚಭೂತಗಳಲ್ಲಿ ಲೀನ
August 8, 2019ನವದೆಹಲಿ: ಬಿಜೆಪಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ, ಅತ್ಯುತ್ತಮ ವಾಗ್ಮಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಬುಧವಾರ ಸಂಜೆ ಪಂಚಭೂತಗಳಲ್ಲಿ ಲೀನವಾದರು. ಹೃದಯಾಘಾತದಿಂದ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 67 ವರ್ಷದ ಸುಷ್ಮಾ ಸ್ವರಾಜ್ ನಿನ್ನೆ ರಾತ್ರಿ ವಿಧಿವಶರಾಗಿದ್ದರು. ದೆಹಲಿಯ ಲೋಧಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸುಷ್ಮಾ ಸ್ವರಾಜ್ ಅವರ ಅಂತ್ಯಸಂಸ್ಕಾರ ನೆರವೇರಿತು. ಪತಿ ಸ್ವರಾಜ್ ಕೌಶಲ್ ಅಂತಿಮ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಕಂಬನಿ ಮಿಡಿಯುತ್ತಿದ್ದ ಪುತ್ರಿ ಬಾನ್ಸುರಿ ತಂದೆಯ ಜತೆಗಿದ್ದರು. ಸುಷ್ಮಾ ಅಂತ್ಯಕ್ರಿಯೆ ಸಂದರ್ಭ ಪ್ರಧಾನಿ…
ವಿಶ್ವಾಸ ಮತ ಯಾಚನೆ: ಸದನದಲ್ಲಿ ಹಾಜರಿರುವುದು ಶಾಸಕರ ವಿವೇಚನೆಗೆ ಬಿಟ್ಟದ್ದು
July 18, 2019ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು ರಾಜೀನಾಮೆ ಅಂಗೀಕಾರ ವಿಚಾರ ಸ್ಪೀಕರ್‍ಗೆ ಸೇರಿದ್ದು ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರನ್ನೊಳಗೊಂಡ ಪೀಠ ಇಂದು ಮಧ್ಯಂತರ ತೀರ್ಪು ನೀಡಿದ್ದು, ಸಂವಿಧಾನವನ್ನು ಎಲ್ಲರೂ ಕಾಪಾಡಬೇಕು. ನಿರ್ದಿಷ್ಟ ಸಮಯದಲ್ಲಿ ವಿಧಾನಸಭಾಧ್ಯಕ್ಷರು ಶಾಸಕರ ರಾಜೀನಾಮೆ ಬಗ್ಗೆ ನಿರ್ಧಾರ ಮಾಡಬೇಕು ಎಂದಿದೆ. ಶಾಸಕರ ರಾಜೀನಾಮೆ ಕುರಿತು ನಿರ್ಧಾರ ಮಾಡುವುದು ವಿಧಾನಸಭಾಧ್ಯಕ್ಷರ ವಿವೇಚನೆಗೊಳಪಟ್ಟಿದ್ದು. ಆದ್ದರಿಂದ ಕೋರ್ಟ್ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿದ್ದು, ವಿಧಾನಸಭಾಧ್ಯಕ್ಷರು ನಿರ್ಧಿಷ್ಟ ಸಮಯದಲ್ಲಿ ರಾಜೀನಾಮೆ ಬಗ್ಗೆ…