ದೇಶದ 30 ಕೋಟಿ ಜನರಿಗೆ ಮೊದಲಿಗೆ ಕೋವಿಡ್ ಲಸಿಕೆ
ಮೈಸೂರು

ದೇಶದ 30 ಕೋಟಿ ಜನರಿಗೆ ಮೊದಲಿಗೆ ಕೋವಿಡ್ ಲಸಿಕೆ

December 9, 2020

ನವದೆಹಲಿ: ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಸೇರಿದಂತೆ ದೇಶದ ಸುಮಾರು 30 ಕೋಟಿ ಜನರು ಮೊದಲಿಗೆ ಲಸಿಕೆ ಪಡೆಯಲಿದ್ದಾರೆ ಎಂದು ಕೊರೊನಾ ಲಸಿಕೆ ಕಾರ್ಯತಂತ್ರದ ಬಗ್ಗೆ ಮೊದಲ ಬಾರಿಗೆ ಅಧಿಕೃತ ಮಾಹಿತಿ ಯನ್ನು ಕೇಂದ್ರ ಸರ್ಕಾರ ಹಂಚಿಕೊಂಡಿದೆ.

ಅಗತ್ಯವಿರುವ ಪ್ರತಿಯೊಬ್ಬ ಜನರಿಗೂ ಲಸಿಕೆ ಹಾಕುವಂತೆ ಕೋವಿಡ್-19 ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಶಿಫಾರಸು ಮಾಡಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಗೋಷ್ಠಿಯಲ್ಲಿ ತಿಳಿಸಿದರು. ಲಸಿಕೆ ಅಗತ್ಯವಿರುವ ಗುಂಪುಗಳನ್ನು ಆದ್ಯತೆ ಮೇರೆಗೆ ವಿಂಗಡಿಸಲಾಗುವುದು. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡು ತ್ತಿರುವ 1 ಕೋಟಿ ಆರೋಗ್ಯ ಕಾರ್ಯ ಕರ್ತರಿದ್ದರೆ, ಕೇಂದ್ರ ಹಾಗೂ ರಾಜ್ಯ ಪೆÇಲೀಸ್, ಶಸಾಸ್ತ್ರ ಪಡೆ, ಹೋಮ್ ಗಾರ್ಡ್, ವಿಪತ್ತು ನಿರ್ವಹಣಾ ಸ್ವಯಂ ಸೇವಕರು, ಪೌರಕಾರ್ಮಿಕರು ಸೇರಿ ದಂತೆ ಸುಮಾರು 2 ಕೋಟಿ ಮುಂಚೂಣಿ ಕಾರ್ಯಕರ್ತರಿದ್ದಾರೆ. 3ನೇ ಗುಂಪಿ ನಲ್ಲಿ 50 ವರ್ಷಕ್ಕೂ ಮೇಲ್ಪಟ್ಟ 27 ಕೋಟಿ ಜನರಿದ್ದಾರೆ ಎಂದರು.

Translate »