Tag: COVID Vaccine

ಅವಧಿ ಮುಗಿದಿದ್ದರೂ ೨ನೇ ಡೋಸ್ ಲಸಿಕೆ ಪಡೆಯದ ಎರಡು ಲಕ್ಷ ಮಂದಿ
ಮೈಸೂರು

ಅವಧಿ ಮುಗಿದಿದ್ದರೂ ೨ನೇ ಡೋಸ್ ಲಸಿಕೆ ಪಡೆಯದ ಎರಡು ಲಕ್ಷ ಮಂದಿ

November 8, 2021

ಎಂ.ಟಿ.ಯೋಗೇಶ್‌ಕುಮಾರ್ ಮೈಸೂರು, ನ.೭ – ಸಂಭವನೀಯ ಕೊರೊನಾ ಮೂರನೇ ಅಲೆ ಜನರ ಆರೋಗ್ಯದ ಮೇಲೆ ದುಷ್ಪರಿ ಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರೂ, ಜನರು ಮಾತ್ರ ಎರಡು ಡೋಸ್ ಲಸಿಕೆ ಪಡೆದು ಅಪಾಯದಿಂದ ಪಾರಾಗಲು ಹಿಂದೇಟು ಹಾಕುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿ ಣಮಿಸಿದೆ. ಜನರನ್ನು ಸೋಂಕಿನಿಂದ ರಕ್ಷಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯಾ ದ್ಯಂತ ಮನೆ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕುವ ಅಭಿಯಾನ ಆರಂಭಿಸಿದೆ. ಕೊರೊನಾ ಎರಡನೇ…

ಕೊರೊನಾ ಲಸಿಕೆ ನೀಡಿಕೆಯಲ್ಲಿ ಮೈಸೂರು ಜಿಲ್ಲೆಗೆ ಅಗ್ರಸ್ಥಾನ
ಮೈಸೂರು

ಕೊರೊನಾ ಲಸಿಕೆ ನೀಡಿಕೆಯಲ್ಲಿ ಮೈಸೂರು ಜಿಲ್ಲೆಗೆ ಅಗ್ರಸ್ಥಾನ

April 12, 2021

ಮೈಸೂರು,ಏ.11(ಆರ್‍ಕೆಬಿ)-ಕೊರೊನಾ ಲಸಿಕೆ ನೀಡಿಕೆಯ ಗುರಿ ಸಾಧನೆಯಲ್ಲಿ ಮೈಸೂರು ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಜಿಲ್ಲೆಗೆ ಪ್ರತಿ ದಿನ 25,050 ಜನರಿಗೆ ಲಸಿಕೆ ನೀಡುವ ಗುರಿ ಇದೆ. ಇದರಲ್ಲಿ ಜಿಲ್ಲೆಯು ಏ.9 ಮತ್ತು 10ರಂದು ಗುರಿ ಮೀರಿ ಸಾಧನೆ ಮಾಡಿದೆ. ನೀಡಲಾಗಿದ್ದ 25,050 ಗುರಿ ಪೈಕಿ 9ರಂದು 31,459 ಹಾಗೂ 10ರಂದು 31,613 ಜನರಿಗೆ ಲಸಿಕೆ ನೀಡಿ ಶೇ.126ರಷ್ಟು ಗುರಿ ಸಾಧಿಸಿದೆ. ಅಲ್ಲದೆ ಏ.1ರಿಂದ 10ರವರೆಗೆ ಲಸಿಕೆ ನೀಡಿಕೆಯ ಶೇಖಡಾವಾರು ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿಯೇ ಇರುವುದು ಮೈಸೂರು…

ಮೈಸೂರಲ್ಲಿ 15 ದಿನದೊಳಗಾಗಿ 3 ಲಕ್ಷ ಮಂದಿಗೆ  ಲಸಿಕೆ ನೀಡುವ ಗುರಿ: ಡಿಸಿ ರೋಹಿಣಿ ಸಿಂಧೂರಿ
ಮೈಸೂರು

ಮೈಸೂರಲ್ಲಿ 15 ದಿನದೊಳಗಾಗಿ 3 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ: ಡಿಸಿ ರೋಹಿಣಿ ಸಿಂಧೂರಿ

April 6, 2021

ಮೈಸೂರು, ಏ.5- ಮೈಸೂರು ಜಿಲ್ಲೆ ಹಾಗೂ ನಗರದಲ್ಲಿ ಕೋವಿಡ್-19 2ನೇ ಅಲೆ ಶುರುವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಾನ್ ಸಂಸ್ಥೆಯ ಖಾಸಗಿ ಆಸ್ಪತ್ರೆಯ ವತಿಯಿಂದ ಮೈಸೂರು ನಗರದಲ್ಲಿ 15 ದಿನದೊಳಗಾಗಿ 3 ಲಕ್ಷ ಮಂದಿಗೆ ಲಸಿಕೆ ನೀಡಬೇಕೆಂಬ ಗುರಿ ಇದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದರು. ಮೈಸೂರಿನ ಹೆಬ್ಬಾಳ್‍ನÀಲ್ಲಿರುವ ಆಶಾಕಿರಣ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ನಗರದ 65 ವಾರ್ಡ್‍ಗಳಲ್ಲಿ ಮಹಾನ್ ಗ್ರೂಪ್ ಖಾಸಗಿ ಆಸ್ಪತ್ರೆಯವರು ನಮ್ಮ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ…

ಇಂದಿನಿಂದ ಪಾಲಿಕೆ ಸಿಬ್ಬಂದಿಗೆ ಸಾಮೂಹಿಕ  ಆರ್‍ಟಿ-ಪಿಸಿಆರ್ ಪರೀಕ್ಷೆ ಆರಂಭ
ಮೈಸೂರು

ಇಂದಿನಿಂದ ಪಾಲಿಕೆ ಸಿಬ್ಬಂದಿಗೆ ಸಾಮೂಹಿಕ ಆರ್‍ಟಿ-ಪಿಸಿಆರ್ ಪರೀಕ್ಷೆ ಆರಂಭ

April 5, 2021

ಮೈಸೂರು, ಏ.4(ಎಂಟಿವೈ)-ಕೊರೊನಾ ಎರಡನೇ ಹಂತದ ಅಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿ ರುವ ಹಿನ್ನೆಲೆಯಲ್ಲಿ ಹಾಗೂ ಕಾರ್ಪೊರೇಟರ್ ಸೇರಿದಂತೆ ಪಾಲಿಕೆಯ ಕೆಲವು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಕಾಣಿಸಿ ಕೊಂಡಿರುವುದರಿಂದ ಪಾಲಿಕೆಯ ಎಲ್ಲಾ ಸಿಬ್ಬಂದಿಗಳಿಗೆ ಸೋಮವಾರ ದಿಂದ ಆರ್‍ಟಿ-ಪಿಸಿಆರ್ ಟೆಸ್ಟ್ ಮಾಡಿಸಲು ಕ್ರಮ ಕೈಗೊಳ್ಳ ಲಾಗಿದೆ ಎಂದು ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ತಿಳಿಸಿದ್ದಾರೆ. ಕೊರೊನಾ ಎರಡನೇ ಅಲೆಯಿಂದಾಗಿ ಕರ್ತವ್ಯ ನಿರತ ಕೊರೊನಾ ವಾರಿಯರ್ಸ್‍ಗಳಾದ ಪಾಲಿಕೆಯ 8-10 ಮಂದಿ ಸಿಬ್ಬಂದಿಗಳಿಗೆ ಹಾಗೂ ಇಬ್ಬರು ಕಾರ್ಪೊರೇಟರ್‍ಗಳಿಗೆ ಕೊರೊನಾ ಸೋಂಕು…

ಕೋವಿಡ್ ಲಸಿಕೆ ಪಡೆಯಲು ಹಿರಿಯ ನಾಗರಿಕರಿಗೆ  ನಗರ ಪಾಲಿಕೆಯಿಂದ ಉಚಿತ ವಾಹನ ವ್ಯವಸ್ಥೆ
ಮೈಸೂರು

ಕೋವಿಡ್ ಲಸಿಕೆ ಪಡೆಯಲು ಹಿರಿಯ ನಾಗರಿಕರಿಗೆ ನಗರ ಪಾಲಿಕೆಯಿಂದ ಉಚಿತ ವಾಹನ ವ್ಯವಸ್ಥೆ

March 24, 2021

ಮೈಸೂರು,ಮಾ.23(ಪಿಎಂ)- ಹಿರಿಯ ನಾಗರಿಕ ರನ್ನು ಮನೆಯಿಂದ ಕರೆತಂದು ಕೋವಿಡ್ ಲಸಿಕೆ ಹಾಕಿಸಿ, ಮತ್ತೆ ಮನೆಗೆ ತಲುಪಿಸಲು ಮೈಸೂರು ಮಹಾ ನಗರ ಪಾಲಿಕೆ ಉಚಿತ ವಾಹನ ಸೌಲಭ್ಯ ಕಲ್ಪಿಸಿದೆ. ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಈ ಸೌಲಭ್ಯ ಕಲ್ಪಿಸಲು ಮುಂದಾಗಿರುವ ನಗರ ಪಾಲಿಕೆ, ಜೆಎಸ್‍ಎಸ್ ವತಿಯಿಂದ ನೀಡಿರುವ ವ್ಯಾನ್‍ನಲ್ಲಿ ಮಂಗಳವಾರ ಆಲನಹಳ್ಳಿಯ ಅನಾಥಾಶ್ರಮವೊಂದರ 40 ಹಿರಿಯ ನಾಗರಿಕರನ್ನು ಟ್ರಾಮಾ ಕೇರ್ ಸೆಂಟರ್‍ಗೆ ಕರೆದೊಯ್ದು ಲಸಿಕೆ ಕೊಡಿಸಿ, ಮತ್ತೆ ಅವರ ಸ್ಥಳಕ್ಕೆ ತಲುಪಿಸಲಾಯಿತು. ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಸೌಲಭ್ಯ ವಿಸ್ತರಿಸಲು…

ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮವಿಲ್ಲ; ಎಲ್ಲರೂ ಪಡೆಯಿರಿ
ಮೈಸೂರು

ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮವಿಲ್ಲ; ಎಲ್ಲರೂ ಪಡೆಯಿರಿ

March 24, 2021

ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ ಎಂಪವರ್ಮೆಂಟ್ ಸಲಹೆ ಮೈಸೂರು,ಮಾ.23(ಆರ್‍ಕೆಬಿ)- ಕೊರೊನಾ ಸೋಂಕು ಇರಲಿ, ಇಲ್ಲದಿರಲಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಕೋವಿ ಶೀಲ್ಡ್ ಲಸಿಕೆಯನ್ನು ಎಲ್ಲರೂ ಪಡೆಯ ಬಹುದು. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಮೈಸೂರಿನ ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ ಎಂಪವರ್ಮೆಂಟ್ (ಪೇಜ್) ಮೈಸೂರು ಶಾಖೆ ಸಲಹೆ ನೀಡಿದೆ. ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳ ವಾರ ಕೋವಿಡ್ ಲಸಿಕೆಯ ಬಗ್ಗೆ ಇರುವ ಅಪನಂಬಿಕೆ ಮತ್ತು ನಿಜ ಚಿತ್ರಣ’ ಕುರಿತ `ಸಂವಾದ’ ಕಾರ್ಯಕ್ರಮದಲ್ಲಿ ಪೇಜ್…

ಕೋವಿಡ್ ಲಸಿಕೆ ಹಾಕಿಸಲು ವೃದ್ಧಾಶ್ರಮ  ಆಶ್ರಿತರಿಗೆ ಸರ್ಕಾರಿ ವಾಹನಗಳ ವ್ಯವಸ್ಥೆ
ಮೈಸೂರು

ಕೋವಿಡ್ ಲಸಿಕೆ ಹಾಕಿಸಲು ವೃದ್ಧಾಶ್ರಮ ಆಶ್ರಿತರಿಗೆ ಸರ್ಕಾರಿ ವಾಹನಗಳ ವ್ಯವಸ್ಥೆ

March 19, 2021

ಮೈಸೂರು, ಮಾ.18(ಆರ್‍ಕೆ)-ವೃದ್ಧಾಶ್ರಮಗಳಲ್ಲಿ ವಾಸಿಸುತ್ತಿರುವ ಹಿರಿಯರನ್ನು ಕರೆತಂದು ಕೋವಿಡ್ ಲಸಿಕೆ ಹಾಕಿಸಿ, ಅವರನ್ನು ಮತ್ತೆ ಅವರ ಸ್ಥಾನಕ್ಕೆ ಬಿಡಲು ಸರ್ಕಾರಿ ಇಲಾಖೆಗಳ ವಾಹನಗಳನ್ನು ಬಳಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಧೀನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದೇ ರೀತಿ ರೋಟರಿ, ಲಯನ್ಸ್‍ನಂತಹ ಸಂಸ್ಥೆಗಳ ಸದಸ್ಯರ ಕುಟುಂಬದ ಹಿರಿಯರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಶಿಬಿರ ಏರ್ಪಡಿಸಿ ಕೊರೊನಾ ಲಸಿಕೆ ನೀಡುವಂತೆಯೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಕೋವಿಡ್ ಲಸಿಕೆ ಪ್ರಮಾಣವನ್ನು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಬೆನ್ನಲ್ಲೇ…

ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡುವ ಪ್ರಕ್ರಿಯೆ ಆರಂಭ
ಮೈಸೂರು

ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡುವ ಪ್ರಕ್ರಿಯೆ ಆರಂಭ

February 16, 2021

ಮೈಸೂರು,ಫೆ.15(ಆರ್‍ಕೆ)- ಕೊರೊನಾ ವೈರಸ್ ಲಸಿಕೆಯ ಎರಡನೇ ಡೋಸ್ ನೀಡುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಜನವರಿ 16ರಿಂದ ದೇಶಾದ್ಯಂತ ಆರಂಭ ವಾದ ಅಭಿಯಾನದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದ 28 ದಿನಗಳ ನಂತರ ಮೊದಲ ದಿನವಾದ ಇಂದು ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಟ್ರಾಮಾ ಕೇರ್ ಸೆಂಟರ್ ನಲ್ಲಿ ಇಂದು ಸಂಜೆವರೆಗೆ ಕೇವಲ 100 ಮಂದಿ ಲಸಿಕೆ ಎರಡನೇ ಡೋಸೇಜ್ ಪಡೆದರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥಾಪಕ ಡಾ.ಆರ್.ಬಾಲಸುಬ್ರ ಹ್ಮಣ್ಯಂ, ಪಿಕೆಟಿಬಿ…

ಮೈಸೂರು ಜಿಲ್ಲೆಯಲ್ಲಿ ಬುಧವಾರ 1090 ಮಂದಿಗೆ ಲಸಿಕೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಬುಧವಾರ 1090 ಮಂದಿಗೆ ಲಸಿಕೆ

February 11, 2021

ಕಳೆದ 4 ದಿನಗಳಲ್ಲಿ 7500 ಕೊರೊನಾ ವಾರಿಯರ್ಸ್‍ಗೆ ಲಸಿಕೆ ನೀಡುವಿಕೆ ಯಶಸ್ವಿ ಮೈಸೂರು, ಫೆ.10(ವೈಡಿಎಸ್)- ಮುಂಚೂಣಿ ಕೊರೊನಾ ವಾರಿಯರ್ಸ್‍ಗೆ ಲಸಿಕೆ ನೀಡುವ ಅಭಿಯಾನವನ್ನು ಮೈಸೂರಿ ನಲ್ಲಿ ಜಿಲ್ಲಾಡಳಿತ ಮುಂದುವರಿಸಿದ್ದು, ಬುಧವಾರ ಮೈಸೂರು ಉಪವಿಭಾಗದ ಸಹಾಯಕ ಆಯುಕ್ತ ವೆಂಕಟರಾಜು ಮೇಟಗಳ್ಳಿಯಲ್ಲಿ ರುವ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಪಡೆದರು. ಜತೆಗೆ ಕಂದಾಯ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಹಲವು ನೌಕರರು ಸೇರಿ ದಂತೆ ಜಿಲ್ಲೆಯಲ್ಲಿಂದು 1090 ಮಂದಿ ಲಸಿಕೆ ಪಡೆದುಕೊಂಡರು. ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ…

ದೇಶದ 30 ಕೋಟಿ ಜನರಿಗೆ ಮೊದಲಿಗೆ ಕೋವಿಡ್ ಲಸಿಕೆ
ಮೈಸೂರು

ದೇಶದ 30 ಕೋಟಿ ಜನರಿಗೆ ಮೊದಲಿಗೆ ಕೋವಿಡ್ ಲಸಿಕೆ

December 9, 2020

ನವದೆಹಲಿ: ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಸೇರಿದಂತೆ ದೇಶದ ಸುಮಾರು 30 ಕೋಟಿ ಜನರು ಮೊದಲಿಗೆ ಲಸಿಕೆ ಪಡೆಯಲಿದ್ದಾರೆ ಎಂದು ಕೊರೊನಾ ಲಸಿಕೆ ಕಾರ್ಯತಂತ್ರದ ಬಗ್ಗೆ ಮೊದಲ ಬಾರಿಗೆ ಅಧಿಕೃತ ಮಾಹಿತಿ ಯನ್ನು ಕೇಂದ್ರ ಸರ್ಕಾರ ಹಂಚಿಕೊಂಡಿದೆ. ಅಗತ್ಯವಿರುವ ಪ್ರತಿಯೊಬ್ಬ ಜನರಿಗೂ ಲಸಿಕೆ ಹಾಕುವಂತೆ ಕೋವಿಡ್-19 ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಶಿಫಾರಸು ಮಾಡಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಗೋಷ್ಠಿಯಲ್ಲಿ ತಿಳಿಸಿದರು. ಲಸಿಕೆ ಅಗತ್ಯವಿರುವ ಗುಂಪುಗಳನ್ನು ಆದ್ಯತೆ ಮೇರೆಗೆ ವಿಂಗಡಿಸಲಾಗುವುದು. ಸರ್ಕಾರಿ…

Translate »