ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮವಿಲ್ಲ; ಎಲ್ಲರೂ ಪಡೆಯಿರಿ
ಮೈಸೂರು

ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮವಿಲ್ಲ; ಎಲ್ಲರೂ ಪಡೆಯಿರಿ

March 24, 2021

ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ ಎಂಪವರ್ಮೆಂಟ್ ಸಲಹೆ
ಮೈಸೂರು,ಮಾ.23(ಆರ್‍ಕೆಬಿ)- ಕೊರೊನಾ ಸೋಂಕು ಇರಲಿ, ಇಲ್ಲದಿರಲಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಕೋವಿ ಶೀಲ್ಡ್ ಲಸಿಕೆಯನ್ನು ಎಲ್ಲರೂ ಪಡೆಯ ಬಹುದು. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಮೈಸೂರಿನ ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ ಎಂಪವರ್ಮೆಂಟ್ (ಪೇಜ್) ಮೈಸೂರು ಶಾಖೆ ಸಲಹೆ ನೀಡಿದೆ.

ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳ ವಾರ ಕೋವಿಡ್ ಲಸಿಕೆಯ ಬಗ್ಗೆ ಇರುವ ಅಪನಂಬಿಕೆ ಮತ್ತು ನಿಜ ಚಿತ್ರಣ’ ಕುರಿತ `ಸಂವಾದ’ ಕಾರ್ಯಕ್ರಮದಲ್ಲಿ ಪೇಜ್ ಮೈಸೂರು ಶಾಖೆಯ ಅಧ್ಯಕ್ಷರೂ ಆಗಿರುವ ಶಾರದಾವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ ಮಾತನಾಡಿ, ಕೋವಿಶೀಲ್ಡ್ ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗುವು ದಿಲ್ಲ. ಅದನ್ನು ಎಲ್ಲರೂ ಪಡೆಯುವ ಮೂಲಕ ಕೋವಿಡ್-19 ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ಕೋವ್ಯಾಕ್ಸಿನ್ ಒಂದು ರೀತಿಯಾಗಿದ್ದು ಇದನ್ನು ಪಡೆದ ಕೆಲವರಿಗೆ ಕೈ ಕಾಲು ನೋವು ಕಾಣಿಸಿಕೊಳ್ಳಬಹುದು ಅಥವಾ ಸುಸ್ತಾಗಬಹುದೇ ಹೊರತು ಬೇರೆ ಯಾವುದೇ ಅಡ್ಡ ಪರಿಣಾಮವಿರುವುದಿಲ್ಲ. ಇದರ ಬಗ್ಗೆ ಉಂಟಾಗಿರುವ ಅಪಪ್ರಚಾರ ಮತ್ತು ವದಂತಿಗಳಿಗೆ ಕಿವಿಕೊಡಬಾರದು ಎಂದು ಮನವಿ ಮಾಡಿದರು.

ಲಸಿಕೆಯನ್ನು ಗರ್ಭಿಣಿಯರು ತೆಗೆದು ಕೊಳ್ಳಬೇಕೆ, ಬೇಡವೇ ಎಂಬುದನ್ನು ಸ್ಪಷ್ಟ ವಾಗಿ ಹೇಳಿಲ್ಲ. ಇದನ್ನು ಹೊರತುಪಡಿಸಿದರೆ ಈ ಔಷಧದಿಂದ ಅಡ್ಡಪರಿಣಾಮ ಇರು ವುದಿಲ್ಲ ಎಂದರು.

ಪೇಜ್ ಕಾರ್ಯದರ್ಶಿಯೂ ಆಗಿರುವ ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಜೆರಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥೆ ಡಾ. ಪ್ರತಿಭಾ ಪೆರೇರಾ ವಾತನಾಡಿ, ಕೋವ್ಯಾ ಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ರೀತಿಯ ಲಸಿಕೆ ಪೂರೈಸಲಾಗುತ್ತಿದ್ದು, ಈ ಪೈಕಿ ಕೋವ್ಯಾಕ್ಸಿನ್ ಸುಮಾರು 8ರಿಂದ 9 ತಿಂಗಳವರೆಗೆ ಮನುಷ್ಯನ ದೇಹದಲ್ಲಿ ಕೆಲಸ ಮಾಡುತ್ತದೆ. ನಾನು ಎಂಬಿಬಿಎಸ್ ಮಾಡುವಾಗಲೂ ಕೊರೊನಾ ಸೋಂಕಿನ ಬಗ್ಗೆ ಆ ಪುಸ್ತಕದಲ್ಲಿ ಉಲ್ಲೇಖವಾಗಿತ್ತು. ಆಗೆಲ್ಲ ಪ್ರಾಣಿಗಳಿಂದ ಪ್ರಾಣಿಗಳಿಗೆ ಈ ಸೋಂಕು ಹರಡುತ್ತಿತ್ತು. ಆದರೆ ಈಗ ಮನುಷ್ಯರಲ್ಲಿ ಸೋಂಕು ಕಾಣಿಸಿಕೊಳ್ಳು ತ್ತಿದೆ. ಸರ್ಕಾರ ಸೂಚಿಸಿರುವ ವ್ಯಾಕ್ಸಿನ್ ಗಳಲ್ಲಿ ಯಾವುದೇ ಅಡ್ಡಪರಿಣಾಮವಿಲ್ಲ. ಆಸ್ಪತ್ರೆಗಳಲ್ಲಿ ಹೋಗಿ ಪಡೆಯಿರಿ ಎಂದು ಸಲಹೆ ನೀಡಿದರು. ಸಂವಾದದಲ್ಲಿ ಪೇಜ್‍ನ ಉಪಾಧ್ಯಕ್ಷರೂ ಆದ ಮೈಸೂರು ವೈದ್ಯ ಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಕ್ಲಿನಿಕಲ್ ಫಾರ್ಮಕಾಲಜಿ ವಿಭಾ ಗದ ಮುಖ್ಯಸ್ಥ ಡಾ.ಪಿ.ಎಲ್.ಬಸವಣ್ಣ ಇನ್ನಿತರರು ಸಂವಾದದಲ್ಲಿ ಉಪಸ್ಥಿತರಿದ್ದರು.

Translate »