ಮಾರ್ಚ್ 29ರಿಂದ ಮೈಸೂರು-ಚೆನ್ನೈ  ನಡುವೆ ಮತ್ತೊಂದು ವಿಮಾನ ಹಾರಾಟ
ಮೈಸೂರು

ಮಾರ್ಚ್ 29ರಿಂದ ಮೈಸೂರು-ಚೆನ್ನೈ ನಡುವೆ ಮತ್ತೊಂದು ವಿಮಾನ ಹಾರಾಟ

March 24, 2021

ಮೈಸೂರು, ಮಾ.23(ಆರ್‍ಕೆ)- ಮಾರ್ಚ್ 29ರಿಂದ ಮೈಸೂರು ಮತ್ತು ಚೆನ್ನೈ ನಗರಗಳ ನಡುವೆ ಮತ್ತೊಂದು ವಿಮಾನ ಹಾರಾಟ ಆರಂಭಿಸಲಿದೆ.
ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಈಗಾಗಲೇ ಕಾರ್ಯಾಚರಣೆ ನಡೆಯುತ್ತಿರುವ ವಿಮಾ ನದ ಜೊತೆಗೆ ಮೈಸೂರು-ಚೆನ್ನೈ ನಡುವೆ ಮತ್ತೊಂದು ವಿಮಾನ ಸೇವೆಯನ್ನು ಪರಿಚಯಿಸುತ್ತಿದೆ ಎಂದು ಮೈಸೂರಿನ ವಿಮಾನ ನಿಲ್ದಾಣ ನಿರ್ದೇಶಕ ಆರ್.ಮಂಜುನಾಥ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮಾರ್ಚ್ 29ರಿಂದ ವಾರದಲ್ಲಿ ಮೂರು ದಿನ ಮೈಸೂರಿನಿಂದ ಚೆನ್ನೈಗೆ ವಿಮಾನ ಹಾರಾಟ ನಡೆಸಲು ಇಂಡಿಗೋ ಏರ್‍ಲೈನ್ಸ್ ಸಂಸ್ಥೆ ನಿರ್ಧರಿಸಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸೋಮವಾರ ಟ್ವೀಟ್ ಮಾಡಿದ್ದರು.

ಪ್ರಸ್ತುತ ಟ್ರೂ ಜೆಟ್ ಸಂಸ್ಥೆಯು ಮೈಸೂರು-ಚೆನ್ನೈ ನಡುವೆ ನಿತ್ಯ ವಿಮಾನ ಹಾರಾಟ ಸೇವೆ ಒದಗಿಸುತ್ತಿದ್ದು, ಅದರ ಜೊತೆಗೆ ಇದೀಗ ಇಂಡಿಗೋ ಏರ್ ಲೈನ್ಸ್ ವಿಮಾನ ಸಂಸ್ಥೆಯು ಸೇರಿ ದಂತಾಗಿದೆ.

ಈ ಎಟಿಆರ್ 6ಇ 7269 ವಿಮಾನವು ಸಂಜೆ 4.35 ಗಂಟೆಗೆ ಮೈಸೂರಿ ನಿಂದ ಪ್ರಯಾಣ ಆರಂಭಿಸಿ ಸಂಜೆ 5.55 ಗಂಟೆಗೆ ಚೆನ್ನೈ ತಲುಪುವುದು. 6ಇ 7659 ವಿಮಾನವು ಚೆನ್ನೈನಿಂದ ಮಧ್ಯಾಹ್ನ 2.50 ಗಂಟೆಗೆ ಹೊರಟು ಸಂಜೆ 4.15 ಗಂಟೆಗೆ ಮೈಸೂರು ತಲುಪಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರ ವಾರಗಳಂದು ಇಂಡಿಗೋ ಸೇವೆ ಲಭ್ಯವಿದೆ.

ಉಡಾನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರವು ಪ್ರಾಂತೀಯ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮೈಸೂರಿನಿಂದ ಚೆನ್ನೈ, ಹೈದರಾಬಾದ್, ಗೋವಾ, ಬೆಂಗಳೂರು, ಕೊಚ್ಚಿ, ಮಂಗಳೂರು ಹಾಗೂ ಹಲವು ವಿಮಾನಗಳ ಸೇವೆ ಲಭ್ಯವಾಗಿದ್ದು, ಜನರು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.

ಹಲವು ವಿಮಾನಗಳು ಹಾರಾಡುತ್ತಿರುವುದರಿಂದ ಬಹುತೇಕ ವಿಮಾನಗಳಲ್ಲಿ ಶೇಕಡಾ 70ರಿಂದ 80 ರಷ್ಟು ಆಸನಗಳು ಭರ್ತಿಯಾಗುತ್ತಿವೆ. ಅದೇ ರೀತಿ ಶಿರಡಿ, ತಿರುಪತಿ ಹಾಗೂ ಮುಂಬೈ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಬೇಕೆಂದು ಸಾರ್ವಜನಿಕ ರಿಂದ ಬೇಡಿಕೆ ಬರುತ್ತಿದೆ ಎಂದು ಆರ್.ಮಂಜುನಾಥ್ ತಿಳಿಸಿದ್ದಾರೆ. ತಿರುವನಂತಪುರಂ ಮತ್ತು ಕಣ್ಣೂರು ಗಳಂತಹ ಹಲವು ನಗರಗಳಿಗೂ ಮೈಸೂರಿನಿಂದ ವಿಮಾನ ಸಂಪರ್ಕ ಕಲ್ಪಿಸಿದಲ್ಲಿ ಅಂತರರಾಷ್ಟ್ರೀಯ ವಿಮಾನಗಳನ್ನು ಹಿಡಿದು ಪ್ರಯಾಣಿಸಲು ಅನುಕೂಲ ವಾಗುತ್ತದೆ ಎಂಬ ಅಭಿಪ್ರಾಯವೂ ಉದ್ದಿಮೆದಾರರು ಹಾಗೂ ವರ್ತಕ ವರ್ಗದಿಂದ ಕೇಳಿಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.

Translate »