ಮೈಸೂರು ವಿಮಾನ ನಿಲ್ದಾಣದಿಂದ 2ನೇ ವಿಮಾನ ಸೇವೆ ಇಂದು ಉದ್ಘಾಟನೆ
ಮೈಸೂರು

ಮೈಸೂರು ವಿಮಾನ ನಿಲ್ದಾಣದಿಂದ 2ನೇ ವಿಮಾನ ಸೇವೆ ಇಂದು ಉದ್ಘಾಟನೆ

June 7, 2019

ಮೈಸೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಮೈಸೂರು ವಿಮಾನ ನಿಲ್ದಾಣದಿಂದ ಪ್ರಾದೇಶಿಕ ಸಂಪರ್ಕ ಯೋಜನೆ ಯಡಿಯಲ್ಲಿ ಎರಡನೇ ವಿಮಾನ ಸೇವೆಯ ಉದ್ಘಾ ಟನಾ ಕಾರ್ಯಕ್ರಮ (ಜೂನ್ 7) ಬೆಳಿಗ್ಗೆ 11 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆಯಲಿದೆ.

ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಉದ್ಘಾ ಟನೆ ಮಾಡುವರು. ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಸಂಸದ ಪ್ರತಾಪ್‍ಸಿಂಹ ಅವರು ಉಪಸ್ಥಿತರಿರುವರು.

ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಪುಷ್ಪಲತಾಜಗನ್ನಾಥ್, ಕೇಂದ್ರ ಸರ್ಕಾರದ ಭಾರತೀಯ ವಿಮಾನಯಾನ ಸಚಿವಾಲ ಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ, ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕಾರ್ಯ ದರ್ಶಿ ಟಿ.ಕೆ ಅನಿಲ್‍ಕುಮಾರ್, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್‍ಪುಷ್ಕರ್, ಡಿಸಿ ಅಭಿರಾಮ್ ಜಿ. ಶಂಕರ್, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ದಕ್ಷಿಣ ಕೇಂದ್ರದ ಪ್ರಾದೇಶಿಕ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಮಾಧವನ್ ಅವರು ಭಾಗವಹಿಸಲಿದ್ದಾರೆ.

Translate »