Tag: Mysore Airport

ಮಾರ್ಚ್ 29ರಿಂದ ಮೈಸೂರು-ಚೆನ್ನೈ  ನಡುವೆ ಮತ್ತೊಂದು ವಿಮಾನ ಹಾರಾಟ
ಮೈಸೂರು

ಮಾರ್ಚ್ 29ರಿಂದ ಮೈಸೂರು-ಚೆನ್ನೈ ನಡುವೆ ಮತ್ತೊಂದು ವಿಮಾನ ಹಾರಾಟ

March 24, 2021

ಮೈಸೂರು, ಮಾ.23(ಆರ್‍ಕೆ)- ಮಾರ್ಚ್ 29ರಿಂದ ಮೈಸೂರು ಮತ್ತು ಚೆನ್ನೈ ನಗರಗಳ ನಡುವೆ ಮತ್ತೊಂದು ವಿಮಾನ ಹಾರಾಟ ಆರಂಭಿಸಲಿದೆ. ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಈಗಾಗಲೇ ಕಾರ್ಯಾಚರಣೆ ನಡೆಯುತ್ತಿರುವ ವಿಮಾ ನದ ಜೊತೆಗೆ ಮೈಸೂರು-ಚೆನ್ನೈ ನಡುವೆ ಮತ್ತೊಂದು ವಿಮಾನ ಸೇವೆಯನ್ನು ಪರಿಚಯಿಸುತ್ತಿದೆ ಎಂದು ಮೈಸೂರಿನ ವಿಮಾನ ನಿಲ್ದಾಣ ನಿರ್ದೇಶಕ ಆರ್.ಮಂಜುನಾಥ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಮಾರ್ಚ್ 29ರಿಂದ ವಾರದಲ್ಲಿ ಮೂರು ದಿನ ಮೈಸೂರಿನಿಂದ ಚೆನ್ನೈಗೆ ವಿಮಾನ ಹಾರಾಟ ನಡೆಸಲು ಇಂಡಿಗೋ ಏರ್‍ಲೈನ್ಸ್ ಸಂಸ್ಥೆ ನಿರ್ಧರಿಸಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್…

ಜುಲೈ 19ರಿಂದ ಮೈಸೂರಿನಿಂದ ಕೊಚ್ಚಿನ್, ಗೋವಾ, ಹೈದರಾಬಾದ್‍ಗೆ ವಿಮಾನ ಹಾರಾಟ
ಮೈಸೂರು

ಜುಲೈ 19ರಿಂದ ಮೈಸೂರಿನಿಂದ ಕೊಚ್ಚಿನ್, ಗೋವಾ, ಹೈದರಾಬಾದ್‍ಗೆ ವಿಮಾನ ಹಾರಾಟ

July 10, 2019

ಮೈಸೂರು, ಜು.9(ಎಸ್‍ಬಿಡಿ)- ಮೈಸೂರಿನಿಂದ ಕೊಚ್ಚಿನ್, ಗೋವಾ ಹಾಗೂ ಹೈದರಾಬಾದ್ ನಡುವೆ ಜು. 19ರಿಂದ ವಿಮಾನ ಸಂಚಾರ ಆರಂಭವಾಗಲಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 8.15ಕ್ಕೆ ಹೊರಡುವ ವಿಮಾನ 9.45ಕ್ಕೆ ಕೊಚ್ಚಿನ್‍ಗೆ ತಲುಪಲಿದೆ. ಹಾಗೆಯೇ ಕೊಚ್ಚಿನ್‍ನಿಂದ 10.10ಕ್ಕೆ ಹೊರಟು 11.40ಕ್ಕೆ ಮೈಸೂರಿಗೆ ವಾಪಸ್ಸಾಗಲಿದೆ. ಮೈಸೂರಿನಿಂದ ಮಧ್ಯಾಹ್ನ 3.20ಕ್ಕೆ ಹೊರಟು ಸಂಜೆ 4.50ಕ್ಕೆ ಗೋವಾ ತಲುಪುವ ವಿಮಾನ, 5.20ಕ್ಕೆ ಅಲ್ಲಿಂದ ಹೊರಟು 6.50ಕ್ಕೆ ಮೈಸೂರಿಗೆ ಬರಲಿದೆ. ಇನ್ನು ಮೈಸೂರಿನಿಂದ ರಾತ್ರಿ 7.20ಕ್ಕೆ ಹೊರಟು 09.05ಕ್ಕೆ ಹೈದರಾಬಾದ್‍ಗೆ ತಲುಪುವ ವಿಮಾನ…

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ 280 ಎಕರೆ ಭೂಮಿ ಸ್ವಾಧೀನ
ಮೈಸೂರು

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ 280 ಎಕರೆ ಭೂಮಿ ಸ್ವಾಧೀನ

June 8, 2019

ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ವಿಸ್ತರಿಸಿ, ಅಭಿವೃದ್ಧಿಪಡಿಸಲು 280 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಬೆಂಗಳೂರು-ಮೈಸೂರು ನಡುವೆ ಮತ್ತೊಂದು ವಿಮಾನ ಹಾರಾಟ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮೈಸೂರು ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇ ಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಭೂಮಿ ಸ್ವಾಧೀನ ಪಡಿಸಿಕೊಡುವಲ್ಲಿ ನೆರವಾಗಿದ್ದಾರೆ. ಮೈಸೂರಿನಿಂದ ದೇಶದ ವಿವಿಧ ಭಾಗಗಳಿಗೆ ವಿಮಾನ ಸಂಪರ್ಕ ಕಲ್ಪಿಸಲು ಸರ್ಕಾರ…

ಮೈಸೂರು ವಿಮಾನ ನಿಲ್ದಾಣದಿಂದ 2ನೇ ವಿಮಾನ ಸೇವೆ ಇಂದು ಉದ್ಘಾಟನೆ
ಮೈಸೂರು

ಮೈಸೂರು ವಿಮಾನ ನಿಲ್ದಾಣದಿಂದ 2ನೇ ವಿಮಾನ ಸೇವೆ ಇಂದು ಉದ್ಘಾಟನೆ

June 7, 2019

ಮೈಸೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಮೈಸೂರು ವಿಮಾನ ನಿಲ್ದಾಣದಿಂದ ಪ್ರಾದೇಶಿಕ ಸಂಪರ್ಕ ಯೋಜನೆ ಯಡಿಯಲ್ಲಿ ಎರಡನೇ ವಿಮಾನ ಸೇವೆಯ ಉದ್ಘಾ ಟನಾ ಕಾರ್ಯಕ್ರಮ (ಜೂನ್ 7) ಬೆಳಿಗ್ಗೆ 11 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಲ್ಲಿ ನಡೆಯಲಿದೆ. ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಉದ್ಘಾ ಟನೆ ಮಾಡುವರು. ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಸಂಸದ ಪ್ರತಾಪ್‍ಸಿಂಹ ಅವರು ಉಪಸ್ಥಿತರಿರುವರು. ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಪುಷ್ಪಲತಾಜಗನ್ನಾಥ್, ಕೇಂದ್ರ ಸರ್ಕಾರದ…

ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ `ಆಕಾಶ ಅಂಬಾರಿ’ ವಿಮಾನಯಾನ ಮುಂದುವರಿಕೆ
ಮೈಸೂರು

ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ `ಆಕಾಶ ಅಂಬಾರಿ’ ವಿಮಾನಯಾನ ಮುಂದುವರಿಕೆ

October 22, 2018

ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆ ಯಲ್ಲಿ ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿರುವ `ಆಕಾಶ ಅಂಬಾರಿ’ ವಿಮಾನ ಯಾನಕ್ಕೆ ಜನರ ಪ್ರತಿ ಕ್ರಿಯೆ ಮನಗಂಡು ಸೇವೆ ಮುಂದುವರಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ. ದಸರಾ ಆನೆಗಳಿಗೆ ಭಾನುವಾರ ಪೂಜೆ ಸಲ್ಲಿಸಿ ಬೀಳ್ಕೊಟ್ಟ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಸರಾ ಹಿನ್ನೆಲೆಯಲ್ಲಿ ಮೈಸೂರು- ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಆಕಾಶ ಅಂಬಾರಿ ವಿಮಾನಯಾನಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಯಾಣ ದರ ಒಬ್ಬರಿಗೆ 999 ರೂ ನಿಗದಿ ಮಾಡಲಾಗಿತ್ತು. ಇದರಿಂದ…

ಅಂತರರಾಷ್ಟ್ರೀಯ ಮಟ್ಟಕ್ಕೆ ಮೈಸೂರು ವಿಮಾನ ನಿಲ್ದಾಣ
ಮೈಸೂರು

ಅಂತರರಾಷ್ಟ್ರೀಯ ಮಟ್ಟಕ್ಕೆ ಮೈಸೂರು ವಿಮಾನ ನಿಲ್ದಾಣ

October 21, 2018

ಬೆಂಗಳೂರು: ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಅಂತಾ ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಭೂಮಿಯನ್ನು ಮೂರು ತಿಂಗಳೊಳಗಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ. ವಿಶ್ವ ವಿಖ್ಯಾತ ದಸರಾ ನಾಡಹಬ್ಬ ವೀಕ್ಷಣೆಗೆ ಪತ್ನಿ ಸಮೇತ ಆಗಮಿಸಿದ ಕೇಂದ್ರ ವಿಮಾನ ಯಾನ ಸಚಿವ ಸುರೇಶ್ ಪ್ರಭು ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆ ಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈ ಭರವಸೆ ನೀಡಿದ್ದಾರೆ. ಪ್ರಭು ಸಲಹೆಯಂತೆ ವಿಮಾನಯಾನ ಇಲಾಖೆ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಅಗತ್ಯ…

ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಯೋಗ
ಮೈಸೂರು

ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಯೋಗ

July 29, 2018

ಭೂಸ್ವಾಧೀನ ಪ್ರಕ್ರಿಯೆಗೆ ಆ.15ರೊಳಗೆ ಅಧಿಸೂಚನೆ ಅಗತ್ಯವಿರುವ 290 ಎಕರೆ ಭೂಮಿ ಸಮೀಕ್ಷಾ ವರದಿಗೆ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ `ಸಾಹಸ ಜೋಡಿ’ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್‍ಸಿಂಹ ಉತ್ಸಾಹ ಮೈಸೂರು:  ಮೈಸೂರು ವಿಮಾನ ನಿಲ್ದಾಣದ ಎದುರಿನ ರಾಷ್ಟ್ರೀಯ ಹೆದ್ದಾರಿ(ಎನ್‍ಎಚ್-212)ಗೆ ಅಂಡರ್‍ಪಾಸ್ ನಿರ್ಮಿಸಿ, ಅದರ ಮೇಲೆ ರನ್ ವೇ ವಿಸ್ತರಿಸುವ ಯೋಜನೆ ಜಾರಿಗೆ ಕಾಲ ಕೂಡಿ ಬಂದಂತಿದೆ. ಯೋಜನೆಗೆ ಅಗತ್ಯವಾದ ಭೂಮಿಯನ್ನು ಗುರುತಿಸಿ, ಪೂರ್ಣ ಪ್ರಮಾಣದ ಭೂಸ್ವಾಧೀನ ಪ್ರಕ್ರಿಯೆಗೆ ಆ.15ರೊಳಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕು. ಅಲ್ಲದೆ…

ಮೈಸೂರು ಏರ್‍ಪೋರ್ಟ್‍ನಿಂದ  ಶೀಘ್ರ ಅಧಿಕ ವಿಮಾನ ಹಾರಾಟ
ಮೈಸೂರು

ಮೈಸೂರು ಏರ್‍ಪೋರ್ಟ್‍ನಿಂದ  ಶೀಘ್ರ ಅಧಿಕ ವಿಮಾನ ಹಾರಾಟ

July 29, 2018

ನವದೆಹಲಿ:  ಮೈಸೂರಿನಿಂದ ವಿಮಾನದಲ್ಲಿ ಪ್ರಯಾಣಿಸುವವರಿಗೆ ಒಂದು ಸಂತಸದ ಸುದ್ದಿ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿ ನಗರಕ್ಕೆ ಮುಂದಿನ 2 ತಿಂಗಳಲ್ಲಿ ವಿಮಾನ ಸೇವೆ ಆರಂಭವಾಗಲಿದೆ. ಅಲ್ಲದೆ, ಅಹಮದಾಬಾದ್, ಚೆನ್ನೈ, ಪುಣೆ, ಹೈದರಾಬಾದ್ ಮತ್ತು ತಿರುಪತಿಗೂ ಮೈಸೂರು ವಿಮಾನ ನಿಲ್ದಾಣದಿಂದ ವಿಮಾನ ಸಂಪರ್ಕ ಕಲ್ಪಿಸಲಾಗುತ್ತಿದೆ. ಮಹತ್ವಾಕಾಂಕ್ಷೆಯ ರೀಜನಲ್ ಕನೆಕ್ಟಿವಿಟಿ ಸ್ಕೀಂ (ಆರ್‌ಸಿಎಸ್), ಉಡಾನ್ ಎಂದು ಕರೆಯಲಾಗುವ (ಉಡೇ ದೇಶ್ ಕ ಆಮ್ ನಾಗರಿಕ್) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಚಾಲನೆ ನೀಡಿದ್ದು, ಈ ಸೇವೆ ವಿಸ್ತೃತಗೊಳ್ಳುವುದರೊಂದಿಗೆ,…

Translate »