ಜುಲೈ 19ರಿಂದ ಮೈಸೂರಿನಿಂದ ಕೊಚ್ಚಿನ್, ಗೋವಾ, ಹೈದರಾಬಾದ್‍ಗೆ ವಿಮಾನ ಹಾರಾಟ
ಮೈಸೂರು

ಜುಲೈ 19ರಿಂದ ಮೈಸೂರಿನಿಂದ ಕೊಚ್ಚಿನ್, ಗೋವಾ, ಹೈದರಾಬಾದ್‍ಗೆ ವಿಮಾನ ಹಾರಾಟ

July 10, 2019

ಮೈಸೂರು, ಜು.9(ಎಸ್‍ಬಿಡಿ)- ಮೈಸೂರಿನಿಂದ ಕೊಚ್ಚಿನ್, ಗೋವಾ ಹಾಗೂ ಹೈದರಾಬಾದ್ ನಡುವೆ ಜು. 19ರಿಂದ ವಿಮಾನ ಸಂಚಾರ ಆರಂಭವಾಗಲಿದೆ.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 8.15ಕ್ಕೆ ಹೊರಡುವ ವಿಮಾನ 9.45ಕ್ಕೆ ಕೊಚ್ಚಿನ್‍ಗೆ ತಲುಪಲಿದೆ. ಹಾಗೆಯೇ ಕೊಚ್ಚಿನ್‍ನಿಂದ 10.10ಕ್ಕೆ ಹೊರಟು 11.40ಕ್ಕೆ ಮೈಸೂರಿಗೆ ವಾಪಸ್ಸಾಗಲಿದೆ. ಮೈಸೂರಿನಿಂದ ಮಧ್ಯಾಹ್ನ 3.20ಕ್ಕೆ ಹೊರಟು ಸಂಜೆ 4.50ಕ್ಕೆ ಗೋವಾ ತಲುಪುವ ವಿಮಾನ, 5.20ಕ್ಕೆ ಅಲ್ಲಿಂದ ಹೊರಟು 6.50ಕ್ಕೆ ಮೈಸೂರಿಗೆ ಬರಲಿದೆ. ಇನ್ನು ಮೈಸೂರಿನಿಂದ ರಾತ್ರಿ 7.20ಕ್ಕೆ ಹೊರಟು 09.05ಕ್ಕೆ ಹೈದರಾಬಾದ್‍ಗೆ ತಲುಪುವ ವಿಮಾನ ಮರುದಿನ ಬೆಳಿಗ್ಗೆ 06.05ಕ್ಕೆ ಹೊರಟು, 7.50ಕ್ಕೆ ಮೈಸೂರಿಗೆ ವಾಪಸ್ಸಾ ಗಲಿದೆ. ಕೇರಳ, ಗೋವಾ, ಆಂಧ್ರ ಹಾಗೂ ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಈ ವಿಮಾನಗಳ ಪ್ರಯಾಣ ದರ 1,200 ರಿಂದ ಆರಂಭವಾಗಲಿದೆ.

ಉಡಾನ್-3 ಭಾಗವಾಗಿ ಕಳೆದ ಜೂ.7ರಂದು ಮೈಸೂರು-ಬೆಂಗಳೂರು ವಿಮಾನ ಸಂಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿ ದ್ದರು. ಇದೀಗ ಮೈಸೂರಿನಿಂದ ವಿಮಾನ ಯಾನ ಸೇವೆ ವಿಸ್ತರಣೆಯಾಗಿದ್ದು, ಜು.19 ರಿಂದ ಕಾರ್ಯಗತವಾಗಲಿದೆ. ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಅತೀ ಮುಖ್ಯವೆಂದು ತಿಳಿದ ಸಂಸದ ಪ್ರತಾಪ್‍ಸಿಂಹ ಮೈಸೂರಿನಿಂದ ಹೆಚ್ಚು ವಿಮಾನ ಸಂಚಾರಕ್ಕೆ ಕೇಂದ್ರ ಸರ್ಕಾ ರವನ್ನು ನಿರಂತರವಾಗಿ ಒತ್ತಾಯಿಸಿದ್ದರು.

 

Translate »