ಸಿಎಂ ರಾಜೀನಾಮೆಗೆ ಆಗ್ರಹಿಸಿ ಇಂದು ಬಿಜೆಪಿಯಿಂದ ಪ್ರತಿಭಟನೆ
ಮೈಸೂರು

ಸಿಎಂ ರಾಜೀನಾಮೆಗೆ ಆಗ್ರಹಿಸಿ ಇಂದು ಬಿಜೆಪಿಯಿಂದ ಪ್ರತಿಭಟನೆ

July 10, 2019

ಬೆಂಗಳೂರು, ಜು.9- ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಬುಧ ವಾರ ವಿಧಾನಸೌಧದ ಎದುರು ಪ್ರತಿ ಭಟನೆ ನಡೆಸಲು ತೀರ್ಮಾನ ಮಾಡ ಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಬಿಎಸ್‍ವೈ, ಸಮ್ಮಿಶ್ರ ಸರ್ಕಾರ ಬಹುಮತವನ್ನು ಕಳೆದುಕೊಂಡಿದೆ. ಸರ್ಕಾರ ಉಳಿಸಿಕೊಳ್ಳಲು ನಾಯಕರು ನಾನಾ ರೀತಿಯ ನಾಟಕಗಳನ್ನು ಮಾಡುತ್ತಿದ್ದಾರೆ. ಅದು ಯಾವುದೂ ನಡೆಯುವುದಿಲ್ಲ. ನಾಳೆ ಬೆಳಿಗ್ಗೆ 11 ಗಂಟೆಗೆ ಸಿಎಂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ 2 ಗಂಟೆ ಕಾಲ ಧರಣಿ ನಡೆಸಲಾಗುವುದು ಎಂದರು. ನಾಳೆ ನಡೆಯುವ ಧರಣಿಗೆ ಎಲ್ಲಾ ಶಾಸಕರು ಬರಬೇಕು ಎಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಎಸ್‍ವೈ ಸೂಚನೆ ನೀಡಿದ್ದಾರೆ.

ಬಿಜೆಪಿಗೆ ದೂರು ನೀಡಿದ ರೆಬೆಲ್ಸ್?: ಸ್ಪೀಕರ್ ನಡೆ ಬಗ್ಗೆ ಬಿಜೆಪಿ ಮುಖಂಡರಿಗೆ ರೆಬೆಲ್ಸ್ ಶಾಸಕರು ದೂರು ನೀಡಿ ದ್ದಾರೆ. ಮತ್ತೊಮ್ಮೆ ರಾಜೀನಾಮೆ ನೀಡಿ ಬೆಂಗಳೂರು ತೊರೆಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಗುರಗಾಂವ್ ಅಥವಾ ಗೋವಾಗೆ ತೆರಳೋ ಸಾಧ್ಯತೆ ಹೆಚ್ಚಿದೆ. ಅಥವಾ ರಾಜೀನಾಮೆ ಬಳಿಕ ಮುಂಬೈಗೆ ವಾಪಸ್ಸಾಗಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜೀನಾಮೆ ನೀಡಿದರೆ ಕಲಾಪಕ್ಕೆ ಗೈರಾಗ ಬಹುದು ಒಂದು ವೇಳೆ ರಾಜೀನಾಮೆ ನೀಡದಿದ್ದರೆ, ಕಲಾಪಕ್ಕೆ ಹಾಜರಾಗಬೇಕು. ರಾಜೀನಾಮೆ ನೀಡದೇ ಕಲಾಪಕ್ಕೆ ಗೈರಾದ್ರೆ ಮತ್ತೇ ವಿಪ್ ಜಾರಿ ಮಾಡೋ ಸಾಧ್ಯತೆ ಇದೆ. ಅದಕ್ಕೆ ಅವಕಾಶ ನೀಡದಿರಲು ಅಧಿವೇಶನಕ್ಕೂ ಮುನ್ನ ರಾಜೀನಾಮೆ ನೀಡಿ ಅಧಿವೇಶನಕ್ಕೆ ಗೈರಾಗೋದು ಅತೃಪ್ತ ಶಾಸಕರ ಪ್ಲಾನ್ ಆಗಿದೆ.

Translate »