ಮೈಸೂರು-ಬೆಂಗಳೂರು, ಮೈಸೂರು-ನಂಜನಗೂಡು ಹೆದ್ದಾರಿಗಳಲ್ಲಿ ಸರ್ವಿಸ್ ರಸ್ತೆ ವಿಸ್ತರಣೆ, ಅಂಡರ್‍ಪಾಸ್, ಕೆಳ ಸೇತುವೆ ನಿರ್ಮಾಣಕ್ಕೆ  ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಸದ ಪ್ರತಾಪ ಸಿಂಹ ಮನವಿ
ಮೈಸೂರು

ಮೈಸೂರು-ಬೆಂಗಳೂರು, ಮೈಸೂರು-ನಂಜನಗೂಡು ಹೆದ್ದಾರಿಗಳಲ್ಲಿ ಸರ್ವಿಸ್ ರಸ್ತೆ ವಿಸ್ತರಣೆ, ಅಂಡರ್‍ಪಾಸ್, ಕೆಳ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಸದ ಪ್ರತಾಪ ಸಿಂಹ ಮನವಿ

February 12, 2021

ಮೈಸೂರು,ಫೆ.11-ಮೈಸೂರು-ನಂಜನ ಗೂಡು (ರಾಷ್ಟ್ರೀಯ ಹೆದ್ದಾರಿ-212) ರಸ್ತೆ ಯನ್ನು ಸದ್ಯದ 4 ಪಥದಿಂದ 6 ಪಥಕ್ಕೆ ಮೇಲ್ದರ್ಜೆಗೇರಿಸಬೇಕು, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಮಾಲೂರು ಹೋಬಳಿಯ ಮತ್ತಿಕೆರೆ-ಶೆಟ್ಟಿಹಳ್ಳಿ ಗ್ರಾಮ ದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಯಲ್ಲಿ ಮತ್ತು ಮದ್ದೂರು ಪಟ್ಟಣ ಸಮೀ ಪದ ಯಲಿಯೂರು ವೃತ್ತದಲ್ಲಿ `ಅಂಡರ್ ಪಾಸ್’ ನಿರ್ಮಿಸಬೇಕು. ಕೋಡಿಹಳ್ಳಿ-ಮದ್ದೂರು ಮಾರ್ಗದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆ ಯನ್ನು ಮತ್ತಷ್ಟು ವಿಸ್ತರಿಸಬೇಕು. ಮೈಸೂ ರಿನ ರಿಂಗ್ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ-275ಕೆ) 4 ಕಡೆ `ಆರ್‍ಯುಬಿ’ (ರಸ್ತೆ ಕೆಳ ಸೇತುವೆ)ಗಳನ್ನು ನಿರ್ಮಿಸುವ ಸಂಬಂಧ ಸಲ್ಲಿಸಿರುವ ಪ್ರಸ್ತಾವನೆಗೆ ಅನು ಮೋದನೆ ನೀಡಬೇಕು ಎಂದು ಸಂಸದ ಪ್ರತಾಪ ಸಿಂಹ ಅವರು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.

ಬೇಡಿಕೆಗಳು:

  • ಕೇರಳ ರಾಜ್ಯ ಮತ್ತು ಕೊಳ್ಳೇಗಾಲ ಪಟ್ಟಣವನ್ನು ಸಂಪರ್ಕಗೊಳಿಸುವ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅತ್ಯಧಿಕವಾಗಿದೆ. ಇದೇ ಮಾರ್ಗದಲ್ಲಿ ಮೈಸೂರು ವಿಮಾನ ನಿಲ್ದಾಣ, ತಾಂಡವ ಪುರ ಬಳಿ ಕೈಗಾರಿಕೆಗಳ ವಸಾಹತು ಇವೆ. ಹಾಗಾಗಿ ಈ ಮಾರ್ಗದಲ್ಲಿ ಮೈಸೂರು-ನಂಜನಗೂಡುವರೆಗಿನ 23 ಕಿ.ಮೀ. ಹೆದ್ದಾರಿ ಯನ್ನು 6 ಪಥಗಳಿಗೆ ವಿಸ್ತರಿಸಬೇಕಿದೆ. ಜತೆಗೆ ಇಲ್ಲಿ ಟ್ರಕ್ ಚಾಲಕರಿಗೆ ವಿಶ್ರಾಂತಿಗೆ ಡಾರ್ಮಿಟರಿ ನಿರ್ಮಿಸುವುದು.
  • ಬೆಂಗಳೂರು-ಮೈಸೂರು ಹೆದ್ದಾರಿ ಯಲ್ಲಿ ಬರುವ ಮತ್ತಿಕೆರೆ-ಶೆಟ್ಟಿಹಳ್ಳಿ ಗ್ರಾಮ ದಲ್ಲಿ ಮದ್ದೂರು ಪಟ್ಟಣ ಸಮೀಪದ ಯಲಿ ಯೂರು ವೃತ್ತದಲ್ಲಿ `ಅಂಡರ್‍ಪಾಸ್’ ನಿರ್ಮಿಸಬೇಕು. ಬೆಂಗಳೂರು-ಮೈಸೂರು ಮಾರ್ಗದಲ್ಲಿ 10 ಪಥಗಳ ಹೆದ್ದಾರಿ ನಿರ್ಮಾಣ ವಾಗುತ್ತಿದೆ. ಹಾಗಾಗಿ, ಇಲ್ಲಿಗೆ ಸಮೀಪ ದಲ್ಲೇ ಇರುವ 8 ಗ್ರಾಮಗಳ ಜನರು ಮತ್ತು ಶಾಲೆಗೆ ಹೋಗುವ ಮಕ್ಕಳು ರಸ್ತೆ ದಾಟು ವುದೇ ಕಷ್ಟವಾಗಿದೆ. ಹಾಗಾಗಿ ಇಲ್ಲಿ ಹೆದ್ದಾರಿಯ ಕೆಳಭಾಗದಲ್ಲೊಂದು `ಅಂಡರ್ ಪಾಸ್’ ನಿರ್ಮಿಸುವುದು.
  • ಬೆಂಗಳೂರು-ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬರುವ ಯಲಿ ಯೂರು, ಮಾಯಣ್ಣನಕೊಪ್ಪಲು, ವೈ ಯರ ಹಳ್ಳಿ, ಅವ್ವೇರಹಳ್ಳಿ, ಮಾದೇಗೌಡನಕೊಪ್ಪಲು, ಚಂದಗಾಲು ಜನರು ರಸ್ತೆ ದಾಟಿ ಸಂಚರಿ ಸಲು 2 ಕಿ.ಮೀ. ಬಳಸಿಬರಬೇಕಿದೆ. ಹಾಗಾಗಿ ಯಲಿಯೂರು ವೃತ್ತದಲ್ಲಿ ಅಂಡರ್‍ಪಾಸ್ ಅತ್ಯಗತ್ಯವಾಗಿದೆ.
  • ರಾ.ಹೆ.275ರಲ್ಲಿ ದಶ ಪಥ ರಸ್ತೆ ನಿರ್ಮಾಣದಲ್ಲಿ ಉದ್ದಕ್ಕೂ ಸರ್ವಿಸ್ ರಸ್ತೆಗಳನ್ನು ಅಭಿವೃದ್ಧಿಪಡಿಸ ಲಾಗಿದ್ದರೂ ಕೆ.ಕೊಡ್ಡಿಹಳ್ಳಿಯಿಂದ ಮದ್ದೂರು ಪಟ್ಟಣಕ್ಕೆ ಸಂಚರಿಸುವೆಡೆ ಸರ್ವಿಸ್ ರಸ್ತೆ ನಿರ್ಮಾಣವಾಗಿರುವುದಿಲ್ಲ. ಇಲ್ಲಿ ಶಿಂಷಾ ನದಿಗೆ ಹೊಂದಿಕೊಂಡಂತೆ ಸರ್ವಿಸ್ ರಸ್ತೆ ಕಾಮಗಾರಿಯನ್ನು ವಿಸ್ತರಿಸಬೇಕು ಎಂಬುದು ಸುತ್ತಲಿನ ಗ್ರಾಮಗಳ ಜನರ ಬೇಡಿಕೆ ಯಾಗಿದೆ. ಈ ಸಂಬಂಧ ಗಮನಹರಿಸು ವಂತೆ ತಮ್ಮ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‍ಹೆಚ್‍ಎಐಗೆ) ಸ್ಪಷ್ಟ ಸೂಚನೆ ನೀಡಬೇಕಿದೆ.
  • ಮೈಸೂರು ನಗರದ ರಿಂಗ್ ರಸ್ತೆಯು ಹಿನಕಲ್ ಜಂಕ್ಷನ್‍ನಲ್ಲಿ ಆರಂಭಗೊಂಡು ಇಡೀ ನಗರ ಸುತ್ತು ಹಾಕಿ ಹಿನಕಲ್ ನಲ್ಲಿಯೇ ಅಂತ್ಯಗೊಂಡಿದ್ದು, ಒಟ್ಟು 41.535 ಕಿಮೀ ಉದ್ದವಿದೆ. ಈ ಹೊರವರ್ತುಲ ರಸ್ತೆಯಲ್ಲಿ ಮುಖ್ಯ ಸಂಪರ್ಕ ರಸ್ತೆಗಳಿರು ವೆಡೆ ರಸ್ತೆ ಕೆಳ ಸೇತುವೆ ನಿರ್ಮಿಸಿ ತಡೆ ರಹಿತ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಯೋಜಿಸಲಾಗಿದೆ. ಹಿನಕಲ್ ಜಂಕ್ಷನ್‍ನಿಂದ ಅಳತೆ ಆರಂಭಿಸಿ ರಿಂಗ್ ರಸ್ತೆಯ 5.460ನೇ ಕಿಮೀ ಬಳಿ ರಸ್ತೆ ಕೆಳ ಸೇತುವೆ ನಿರ್ಮಿಸಲು ಅಂದಾಜು 26.98 ಕೋಟಿ ರೂ. ವೆಚ್ಚವಾಗಲಿದೆ. 7.060ನೇ ಕಿಮೀ ಬಳಿ 8.90 ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಸ್ತೆ ಕೆಳ ಸೇತುವೆ ನಿರ್ಮಿಸ ಬೇಕಿದೆ. 7.860ನೇ ಕಿಮೀ ಮೈಲುಗಲ್ಲು ಬಳಿ ರಸ್ತೆ ಕೆಳ ಸೇತುವೆ ನಿರ್ಮಿಸಬೇಕಿದ್ದು, ಅದಕ್ಕೆ ಅಂದಾಜು 24.92 ಕೋಟಿ ರೂ. ವೆಚ್ಚವಾಗಲಿದೆ. 28.585 ಕಿ.ಮೀ. ಮೈಲು ಗಲ್ಲು ಬಳಿ ಅಂದಾಜು 9.78 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕೆಳ ಸೇತುವೆ (ಆರ್‍ಯುಬಿ) ನಿರ್ಮಿಸಬೇಕಿದೆ. ಈ ಕಾಮಗಾರಿಗಳ ಸಂಬಂಧ ಒಟ್ಟು 70.58 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಅನುಮೋದನೆ ಗಾಗಿ ಕಳುಹಿಸಿಕೊಡಲಾಗಿದೆ.

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮಹಾ ನಿರ್ದೇಶಕರು ಮತ್ತು ನಾನು ಜತೆಗೂಡಿ 2020 ಅ.10ರಂದು ರಿಂಗ್ ರಸ್ತೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯವಿರುವ 4 ಕಡೆ ಬಾಕ್ಸ್ ಪುಷಿಂಗ್ ಮೆಥೆಡ್ ಬಳಸಿ ರಸ್ತೆ ಕೆಳ ಸೇತುವೆ ನಿರ್ಮಿಸಲು ಸೂಚಿಸ ಲಾಗಿತ್ತು ಎಂಬುದನ್ನು ಇಲ್ಲಿ ತಮ್ಮ ಗಮನಕ್ಕೆ ತರುವುದಾಗಿ ನಿತಿನ್ ಗಡ್ಕರಿ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

Translate »