ಮೈಸೂರಲ್ಲಿ `ಯುದ್ಧ ಸ್ಮಾರಕ’ ನಿರ್ಮಾಣ ಶೀಘ್ರವೇ ಆರಂಭ
ಮೈಸೂರು

ಮೈಸೂರಲ್ಲಿ `ಯುದ್ಧ ಸ್ಮಾರಕ’ ನಿರ್ಮಾಣ ಶೀಘ್ರವೇ ಆರಂಭ

February 12, 2021

ಮೈಸೂರು,ಫೆ.11(ಎಂಟಿವೈ)- ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಮೀಪದ ಎನ್‍ಸಿಸಿ ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಿ ರುವ `ಯುದ್ಧ ಸ್ಮಾರಕ’ ನಿರ್ಮಾಣ ಕಾಮ ಗಾರಿ ಸದ್ಯದಲ್ಲೇ ಆರಂಭಗೊಳ್ಳಲಿದೆ.

ಸ್ಮಾರಕ ನಿರ್ಮಾಣಕ್ಕೆ ಅಗತ್ಯವಾದ ಕಪ್ಪು ಶಿಲೆಯನ್ನೂ ತರಲಾಗಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರೂ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಕಾಮಗಾರಿ ಆರಂ ಭಿಸಲು ಗುರುವಾರ ಸೂಚನೆ ನೀಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿ ಗಳೊಂದಿಗೆ ಗುರುವಾರ ಸಭೆ ನಡೆಸಿದ ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆಯು ಸ್ಮಾರಕ ನಿರ್ಮಾಣ ಕಾಮ ಗಾರಿ ಆರಂಭಿಸಲು ವಿಳಂಬ ಮಾಡು ತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ದರು. ಯುದ್ಧ ಸ್ಮಾರಕ ನಿರ್ಮಾಣ ಜವಾ ಬ್ದಾರಿಯನ್ನು `ನಿರ್ಮಿತಿ ಕೇಂದ್ರ’ಕ್ಕೆ ವರ್ಗಾ ಯಿಸಿದರು. ರಾಜ್ಯ ಸರ್ಕಾರವೂ ಕನ್ನಡ-ಸಂಸ್ಕೃತಿ ಇಲಾಖೆಯಿಂದ ನಿರ್ಮಾಣ ವಾಗುತ್ತಿರುವ `ಯುದ್ಧ ಸ್ಮಾರಕ’ಕ್ಕೆ ಮೊದಲ ಹÀಂತದಲ್ಲಿ 50 ಲಕ್ಷ ರೂ. ಬಿಡುಗಡೆ ಮಾಡಿದೆ. ಸ್ಮಾರಕ ನಿರ್ಮಾಣ ಕಾರ್ಯದ ಪ್ರಗತಿ ಗಮನಿಸಲು ಸಮಿತಿಯೊಂದನ್ನು ರಚಿಸಿರುವ ಜಿಲ್ಲಾಧಿಕಾರಿ, ನಿಗದಿತ ಅವಧಿ ಯೊಳಗೇ ಕಟ್ಟಡ ಪೂರ್ಣಗೊಳಿಸು ವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚನ್ನಪ್ಪ, ನಿರ್ಮಿತಿ ಕೇಂದ್ರದ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರುದ್ರೇಶ್ ಮತ್ತಿತರರು ಸಭೆಯಲ್ಲಿದ್ದರು.

Translate »