ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ…
ಮೈಸೂರು

ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ…

April 1, 2021

ಮೈಸೂರು, ಮಾ.31(ಎಂಟಿವೈ)- ಕೊರೊನಾ ಎರಡನೇ ಅಲೆಯಿಂದಾಗಿ ಮೈಸೂರಲ್ಲಿ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ಅಪಾಯದಿಂದ ಪಾರಾಗಲು ಸ್ವಪ್ರೇರಣೆ ಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಲಹೆ ನೀಡಿದ್ದಾರೆ.

ಮೈಸೂರಲ್ಲಿ ಬುಧವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕೊರೊನಾ ಹಾವಳಿ ಹಾಗೂ ಅದರ ನಿಯಂ ತ್ರಣಕ್ಕೆ ಲಾಕ್‍ಡೌನ್ ಮಾಡಿದ್ದರಿಂದ ಕಳೆದ ಒಂದು ವರ್ಷದಲ್ಲಿ ಜನ ತತ್ತರಿಸಿದ್ದಾರೆ. ಇದೀಗ 2ನೇ ಹಂತದ ಕೊರೊನಾ ಅಲೆ ಪ್ರಾರಂಭವಾಗಿದೆ. ಕಳೆದ 1 ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನಾ ದರೂ ಜನರು ಕೊರೊನಾ ಸೋಂಕಿನಿಂದ ಪಾರಾಗಲು ಜಾಗೃತರಾಗಬೇಕು. ಸರ್ಕಾರ ಹೊರಡಿಸಿರುವ ಕೋವಿಡ್-19 ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ಪಾಲಿಸ ಬೇಕು. ಜಿಲ್ಲಾಡಳಿತದ ವತಿಯಿಂದ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ನಿಯೋಜಿಸಿ ಮಾಸ್ಕ್ ಧರಿಸಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಕಾರ್ಯಾಚರಣೆ ಮೂಲಕ ಎಚ್ಚರ ಮೂಡಿಸಬೇಕು. ಆದರೆ ಜನರಲ್ಲಿ ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮನೋಭಾವ ರೂಢಿಸಿಕೊಂಡರೆ ಕೊರೊನಾ ಸೋಂಕು ಹರಡುವಿಕೆ ಯನ್ನು ಪರಿಣಾಮಕಾರಿಯಾಗಿ ತಡೆಗಟ್ಟ ಬಹುದು ಎಂದು ಅಭಿಪ್ರಾಯಪಟ್ಟರು.
ಕೋವಿಡ್ ಕೇರ್ ಸೆಂಟರ್ ಆರಂಭ: ಜಿಲ್ಲಾ ಸ್ಪತ್ರೆಯಲ್ಲಿ(ಕೋವಿಡ್) 150ಕ್ಕೂ ಹೆಚ್ಚು ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿ ದ್ದಾರೆ. ಈಗ ಮಂಡಕಳ್ಳಿ ಮುಕ್ತ ವಿವಿಯ ಕಟ್ಟಡದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಸೋಂಕಿತರನ್ನು ಅಲ್ಲಿಗೂ ರವಾನಿಸಲಾಗುತ್ತಿದೆ ಎಂದು ತಿಳಿಸಿದರು.

ಹಾಸಿಗೆ ಕೊರತೆ ಇಲ್ಲ: ಕಳೆದ ಅಕ್ಟೋ ಬರ್-ನವೆಂಬರ್ ತಿಂಗಳಲ್ಲಿ ಮೈಸೂರಲ್ಲಿ ಇದ್ದಂತೆ ಇದೀಗ ಹಾಸಿಗೆ ಕೊರತೆ, ಆಕ್ಸಿಜûನ್ ಕೊರತೆ ಇಲ್ಲ. ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಎಲ್ಲಾ ಕ್ರಮ ಹಾಗೂ ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 150, ಕೋವಿಡ್ ಕೇರ್ ಸೆಂಟರ್‍ನಲ್ಲಿ 650 ಹಾಸಿಗೆ ಸೌಲಭ್ಯವಿದೆ. ಎಲ್ಲಾ ತಾಲೂಕು ಆಸ್ಪತ್ರೆ ಗಳಲ್ಲೂ 50 ಹಾಸಿಗೆ ಸೌಕರ್ಯ ಇದೆ. ಅಲ್ಲದೆ ಆಕ್ಸಿಜûನ್ ಸಂಪರ್ಕ ಇರುವ ಹಾಸಿಗೆ ಗಳೂ ಲಭ್ಯವಿದೆ ಎಂದು ಹೇಳಿದರು.

ಹಬ್ಬ-ಹರಿದಿನಗಳ ಮೇಲೆ ನಿಗಾ: ರಾಜ್ಯ ಸರ್ಕಾರ ಕೋವಿಡ್-19 ಮಾರ್ಗಸೂಚಿ ಹೊರಡಿಸಿದ್ದು, ಮುಂದಿನ 15 ದಿನ ಜಾತ್ರೆ, ಹಬ್ಬಗಳ ಆಚರಣೆಗೆ ನಿರ್ಬಂಧವೇರಿದೆ. ಅಲ್ಲದೆ ಯಾವುದೇ ಸಭೆ, ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನ ಸೇರದಂತೆ ಆದೇ ಶಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶ ದಲ್ಲಿ ಜಾತ್ರೆ, ಹಬ್ಬ ಆಚರಿಸಲು ಅನುಮತಿ ನೀಡದಂತೆ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ. ಇನ್ನು ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದ ಮೇಲೂ ನಿಗಾ ಇಡಲಾಗುತ್ತಿದೆ ಎಂದರು.

Translate »