ಡಾ.ಬಿ.ಆರ್.ಅಂಬೇಡ್ಕರ್ ಇಡೀ ಪ್ರಪಂಚದಲ್ಲೇ `ಮಹಾನಾಯಕ’
ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಇಡೀ ಪ್ರಪಂಚದಲ್ಲೇ `ಮಹಾನಾಯಕ’

April 1, 2021

ಮೈಸೂರು ಜಿಲ್ಲಾ ಸಮಗ್ರ ಗಿರಿಜನ ಯೋಜನಾ ಸಮನ್ವಯಾಧಿಕಾರಿ ಪ್ರಕಾಶ್ ವರ್ಣನೆ
ಮೈಸೂರು,ಮಾ.31(ಎಂಟಿವೈ)-ಡಾ.ಅಂಬೇಡ್ಕರ್ ಅವರು ಭಾರತಕ್ಕೆ ಸುಭದ್ರ ಸಂವಿಧಾನ ರಚಿಸಿ ತಳ ಸಮುದಾಯದ ಜನರ ಏಳಿಗೆಗೆ ಮತ್ತು ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಅವಕಾಶ ಮಾಡಿಕೊಡುವ ಮೂಲಕ `ಮಹಾನಾಯಕ’ರಾಗಿದ್ದಾರೆ ಎಂದು ಜಿಲ್ಲಾ ಸಮಗ್ರ ಗಿರಿಜನ ಯೋಜನಾ ಸಮನ್ವಯಾಧಿಕಾರಿ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಮೆಟ್ರಿಕ್ ನಂತರದ ಬಾಲಕಿಯರ ಸರ್ಕಾರಿ ವಿದ್ಯಾರ್ಥಿನಿಲಯ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ `ಡಾ.ಬಿ.ಆರ್.ಅಂಬೇಡ್ಕರ್-130ನೇ ಜನ್ಮದಿನಾ ಚರಣೆ’ ಅಂಗವಾಗಿ ಆಯೋಜಿಸಿದ್ದ `ಪರಿವರ್ತನಾ ಮಾಸಾಚರಣೆ’ ಉದ್ಘಾಟಿಸಿ ಮಾತನಾಡಿದÀರು. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಪ್ರತಿ ಭಾರತೀಯರಿಗೂ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ನೂರಾರು ವರ್ಷ ಕಳೆದರೂ ಅಂಬೇಡ್ಕರ್ ಅವರನ್ನು ಮರೆಯಲು ಸಾಧ್ಯವಿಲ್ಲ. ವಿದ್ಯಾರ್ಥಿ ನಿತ್ಯ ಅಂಬೇಡ್ಕರ್ ಸ್ಮರಣೆ ಮಾಡಬೇಕು ಎಂದರು.

ಅಂಬೇಡ್ಕರ್ ಸಂವಿಧಾನದಲ್ಲಿ ಮಹಿಳೆಯರಿಗೆ ಎಲ್ಲಾ ಅನುಕೂಲ ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿನಿಯರು ಚೆನ್ನಾಗಿ ಓದಿ ವಿದ್ಯಾರ್ಥಿನಿಲಯ ಮತ್ತು ಇಲಾಖೆಗೆ ಕೀರ್ತಿ ತರಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಮಾಲತಿ ಉತ್ತೇಜಿಸಿದರು. ಪ್ರಾಧ್ಯಾಪಕ ಕೆ.ಎಲ್.ಚಂದ್ರಶೇಖರ್ ಐಜೂರ್, ಸಂವಿಧಾನ ರಚನೆ, ಸ್ವರೂಪ, ಸಂವಿಧಾನದಿಂದ ಮಹಿಳೆಯರಿಗೆ ಆಗಿರುವ ಅನುಕೂಲ, ಮೀಸಲು, ಶಿಕ್ಷಣ, ಸಂಘಟನೆ, ಹೋರಾಟಗಳ ಬಗ್ಗೆ ವಿವರಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜನಾರ್ಧನ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ನಿಲಯಪಾಲಕರ ಸಂಘದ ಅಧ್ಯಕ್ಷ ರೇವಣ್ಣ, ನಿಲಯಪಾಲಕರಾದ ಕಾಮಾಕ್ಷಮ್ಮ, ಶಾಂತಲ, ಮೋಹನ್‍ಕುಮಾರಿ, ಎನ್.ಬಿ.ಮಹೇಶ್, ಶಿವಮಲ್ಲಯ್ಯ ಇದ್ದರು.

Translate »