ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ  ಪ್ರಯುಕ್ತ ಏ.14ರಂದು ಮ್ಯಾರಥಾನ್
ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಏ.14ರಂದು ಮ್ಯಾರಥಾನ್

March 30, 2021

ಮೈಸೂರು, ಮಾ.29(ಆರ್‍ಕೆಬಿ)- ಡಾ.ಬಿ.ಆರ್.ಅಂಬೇಡ್ಕರ್ 130ನೇ ಜನ್ಮ ದಿನಾಚರಣೆ ಅಂಗವಾಗಿ ವಿಶ್ವಜ್ಞಾನಿ ಚಾರಿಟಬಲ್ ಟ್ರಸ್ಟ್, ಭಾರತೀಯ ಪರಿವರ್ತನಾ ಸಂಘ, ಭಾರತೀಯ ವಿದ್ಯಾರ್ಥಿ ಸಂಘ, ದಲಿತ ಸಂಘಟನೆಗಳ ಒಕ್ಕೂಟ, ಸಂಶೋಧಕರ ಸಂಘದ ಜಂಟಿ ಆಶ್ರಯದಲ್ಲಿ ಏ.14ರಂದು ಬೆಳಿಗ್ಗೆ 6.30 ಗಂಟೆಗೆ ಮೈಸೂರಿನಲ್ಲಿ ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರತೀಯ ಪರಿ ವರ್ತನಾ ಸಂಘದ ಸಂಚಾಲಕ ಸೋಸಲೆ ಸಿದ್ದರಾಜು ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಭವನದಿಂದ ಆರಂಭವಾಗುವ ಮ್ಯಾರ ಥಾನ್, ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)ದ ಮೂಲಕ ಅಗ್ರಹಾರ ವೃತ್ತ, ಅಶೋಕ ವೃತ್ತ (ಬಲ್ಲಾಳ್ ವೃತ್ತ), ಕೃಷ್ಣಮೂರ್ತಿ ಪುರಂ ರೈಲ್ವೆ ಬ್ರಿಡ್ಜ್ ವೃತ್ತ, ಕ್ರಾಫರ್ಡ್ ಹಾಲ್ ಬಳಿ ಕೌಟಿಲ್ಯ ವೃತ್ತ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ವೃತ್ತ (ಮೆಟ್ರೊಪೋಲ್ ವೃತ್ತ) ಜಗಜೀವನರಾಂ ವೃತ್ತ (ರೈಲ್ವೆ ನಿಲ್ದಾಣ ವೃತ್ತ), ಇರ್ವಿನ್ ರಸ್ತೆ ಮೂಲಕ ಆಯುರ್ವೇದ ವೃತ್ತ, ನೆಹರು ವೃತ್ತ, ಅಶೋಕ ರಸ್ತೆ ಮೂಲಕ ಪುರಭವನಕ್ಕೆ ವಾಪಸಾಗಲಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ಮೊ-9880361209, 9886898277 ಸಂಪರ್ಕಿಸಬಹುದು ಎಂದರು.

ಮ್ಯಾರಥಾನ್‍ನಲ್ಲಿ ಭಾಗವಹಿಸುವವರಿಗೆ 15,000 ರೂ.ಮೊದಲ ಬಹುಮಾನ, 10,000 ರೂ. ದ್ವಿತೀಯ ಬಹುಮಾನ, 5,000 ರೂ. ತೃತೀಯ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಹಾಗೂ ಟೀಷರ್ಟ್ ನೀಡ ಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಮಹೇಶ್‍ಕುಮಾರ್, ರಾಜ್ಯ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ ಉಪಸ್ಥಿತರಿದ್ದರು.

Translate »