ವಿದ್ಯಾರ್ಥಿಗಳಿಗೆ ಭವಿಷ್ಯದ ಮಾರ್ಗಸೂಚಿ ಅಗತ್ಯ
ಮೈಸೂರು

ವಿದ್ಯಾರ್ಥಿಗಳಿಗೆ ಭವಿಷ್ಯದ ಮಾರ್ಗಸೂಚಿ ಅಗತ್ಯ

March 30, 2021

ಮೈಸೂರು, ಮಾ.29(ಎಂಕೆ)- ವಿದ್ಯಾರ್ಥಿಗಳಿಗೆ ಭವಿಷ್ಯದ ಮಾರ್ಗಸೂಚಿ ಅಗತ್ಯ. ಪಠ್ಯದ ಜೊತೆಗೆ ಕೌಶಲಗಳ ತರಬೇತಿ ನೀಡುವ ಮೂಲಕ ಅವರು ಉದ್ಯೋಗ ಪಡೆದುಕೊಳ್ಳಲು ಸಿದ್ಧಗೊಳಿಸಬೇಕು ಎಂದು ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್.ರಂಗಪ್ಪ ಸಲಹೆ ನೀಡಿದರು.

ಮೈಸೂರಿನ ಮಾನಸಗಂಗೋತ್ರಿ ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ `ರಾಸಾಯನಿಕ ಸಮಾಜ 2020-21’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ಶೈಕ್ಷಣಿಕ ಉತ್ಸವ ವಾಗಿರುವ `ರಾಸಾಯನಿಕ ಸಮಾಜ’ದಲ್ಲಿ ವಿದ್ಯಾರ್ಥಿ ಗಳು, ಸಂಶೋಧಕರು, ಪ್ರಾಧ್ಯಾಪಕರು ಭಾಗವಹಿಸ ಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ, ಪೆÇ್ರೀತ್ಸಾಹಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಜೊತೆಗೆ ವರ್ಷದಲ್ಲಿ ದೇಶ, ವಿದೇಶಗಳ 10 ಮಂದಿ ಪರಿಣಿತರನ್ನು ಕರೆಸಿ, ವಿದ್ಯಾರ್ಥಿಗಳಿಗೆ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷವಾದ ಮಾಹಿತಿ ತಿಳಿಸಿಕೊಡುವ ಕಾರ್ಯವೂ ಆಗಬೇಕು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿ, ಹೊಸ ಆಲೋಚನೆ, ವಿಚಾರಗಳ ಮೂಲಕ ಗುರುತಿಸಿಕೊಳ್ಳ ಬೇಕು. ವಿಪುಲವಾದ ಅವಕಾಶಗಳನ್ನು ಸೂಕ್ತ ರೀತಿ ಯಲ್ಲಿ ಬಳಸಿಕೊಳ್ಳುವುದನ್ನು ಕಲಿಯಬೇಕು ಎಂದರು. ನನ್ನ ಹೃದಯ ಭಾಗದಂತಿರುವ ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಪಾರ ಸಮಯವನ್ನು ಕಳೆ ದಿರುವುದಾಗಿ ಹೇಳಿದ ಅವರು, ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕನಾಗಿ, ಕುಲಪತಿಯಾಗಿದುದನ್ನು ಸ್ಮರಿಸಿದರು. ಇದೇ ವೇಳೆ ರಸಾಯನ ಶಾಸ್ತ್ರ ಅಧ್ಯಯನ ವಿಭಾಗದ ಪೆÇ್ರ.ಕೆ.ಎನ್.ಮೋಹನ್ ರಚಿತ ‘ಸುಧಾರಿತ ಭೌತಿಕ ರಸಾಯನಶಾಸ್ತ್ರ’ ಪುಸ್ತಕವನ್ನು ಬಿಡುಗಡೆ ಮಾಡಿದರು.

ಮೈಸೂರು ವಿವಿ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಮಾತನಾಡಿ, ವಿಶ್ವವಿದ್ಯಾನಿಲಯದ ಹಳೆಯ ವಿಭಾಗವಾಗಿರುವ ರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅಧ್ಯಯನ ಮಾಡಿದವರು ದೇಶ, ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದುವರೆಗೆ ವಿಭಾಗದ ಮುಖ್ಯಸ್ಥ ರಾಗಿ ಸಲ್ಲಿಸಿದ ಉತ್ತಮ ಸೇವೆಯಿಂದಾಗಿ ವಿಭಾಗವು ವಿವಿಯಲ್ಲಿ ವಿಶೇಷವಾಗಿ ಗುರ್ತಿಸಿಕೊಂಡಿದೆ. ವಿವಿಧ ಕಾರ್ಯಕ್ರಮಗಳ ಮೂಲಕ ಇತರೆ ವಿಭಾಗಗಳಿಗೂ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮೈಸೂರು ವಿವಿ ಕುಲಸಚಿವ ಪೆÇ್ರ.ಆರ್.ಶಿವಪ್ಪ, ಪೆÇ್ರ.ಕೆ.ಎನ್.ಮೋಹನ್, ರಸಾಯನ ಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪೆÇ್ರ.ನಾಗ ರಾಜ ನಾಯಕ್ ಇನ್ನಿತರರು ಉಪಸ್ಥಿತರಿದ್ದರು.

Translate »