ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಪರಿನಿರ್ವಾಣ ದಿನದ ಅಂಗವಾಗಿ ಮೈಸೂರಿನಲ್ಲಿ ಗುರುವಾರ ಜಿಲ್ಲಾಡಳಿತ ಸೇರಿ ದಂತೆ ವಿವಿಧ ಸಂಘಟನೆಗಳು ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ಅವರ ಬದುಕು ಮತ್ತು ಹೋರಾಟವನ್ನು ಸ್ಮರಿಸಿದರು.
ಸಚಿವ ಜಿ.ಟಿ.ದೇವೇಗೌಡರಿಂದ ಮಾಲಾರ್ಪಣೆ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಮೈಸೂರು ಪುರ ಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭ ದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ಸಂಸದ ಆರ್.ಧ್ರುವನಾರಾಯಣ್, ಶಾಸಕ ರಾದ ತನ್ವೀರ್‍ಸೇಠ್, ಅನಿಲ್ ಚಿಕ್ಕಮಾದು, ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನಾ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿಪಂ ಸಿಇಓ ಕೆ.ಜ್ಯೋತಿ, ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಇನ್ನಿತರರು ಉಪಸ್ಥಿತರಿದ್ದರು.
ಬೌದ್ಧ ಬಿಕ್ಕುಗಳಿಂದ ಪ್ರಾರ್ಥನೆ, ಪ್ರತಿಜ್ಞಾ ಸ್ವೀಕಾರ: ಬಾಬಾ ಸಾಹೇಬ್ ಅಂಬೇಡ್ಕರ್ ಸಂಸ್ಮರಣಾ ಸಮಿತಿ ವತಿಯಿಂದ ಮೈಸೂ ರಿನ ಪುರಭವನ ಆವರಣದಲ್ಲಿ ಆಯೋ ಜಿಸಿದ್ದ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಶಾಸಕ ತನ್ವೀರ್‍ಸೇಠ್ ಇನ್ನಿತ ರರು ಪಾಲ್ಗೊಂಡು ಡಾ.ಬಿ.ಆರ್.ಅಂಬೇ ಡ್ಕರ್ ಭಾವಚಿತ್ರ ಮತ್ತು ಭಗವಾನ್ ಬುದ್ಧನ ಕಂಚಿನ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ಬೌದ್ಧ ಬಿಕ್ಕು ಗಳು ಬುದ್ಧ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಂವಿಧಾನದ ಆಶಯಗಳು ಮತ್ತು ಪ್ರಸ್ತುತ ಭಾರತ, ಸಂವಿಧಾನ ರಚನೆಯಲ್ಲಿ ಅಂಬೇ ಡ್ಕರ್‍ರ ಪಾತ್ರ, ರಾಜಕೀಯ ರಹಿತ ಬಹು ಜನರ ಬದುಕು, ನಿಮ್ಮ ಬೆವರಿನ ಋಣ ತೀರಿಸಲು ನಮ್ಮ ಕರ್ತವ್ಯದ ಪ್ರಜ್ಞೆ ಕುರಿತ ಉಪನ್ಯಾಸ ನಡೆಯಿತು. ಗಾಯಕ ಲಕ್ಷ್ಮಿ ರಾಮ್ ಮತ್ತು ತಂಡದಿಂದ ದÀಮ್ಮ ಸಂಗೀತ ನೆರವೇರಿತು. ಜ್ಞಾನಪ್ರಕಾಶ್ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್ ಇನ್ನಿತರರು ಉಪಸ್ಥಿತರಿದ್ದರು.
ಬುದ್ಧ ಧಮ್ಮ- ಅಂಬೇಡ್ಕರ್ ಕಂಡಂತೆ- ಉಪನ್ಯಾಸ: ಪುರಭವನ ಸಭಾಂಗಣದಲ್ಲಿ ವಿಷುವಲ್ ಆಂಥ್ರೊಪಾಲಜಿ ರಿಸರ್ಚ್ ಫೌಂಡೇ ಷನ್ ಮತ್ತು ನವಯಾನ ಬುದ್ದ ದÀಮ್ಮ ಒಕ್ಕೂಟ ಜಂಟಿಯಾಗಿ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಚೆನ್ನೈನ ತೌಸಂಡ್ ಸನ್‍ಶೈನ್‍ನ ಬುದ್ಧ ಮಹಾ ಉಪಾಸಕ ಮಹಾಯೋಗಿ ಅವರು `ನವಯಾನ ಬುದ್ಧ ದÀಮ್ಮ – ಅಂಬೇ ಡ್ಕರ್ ಕಂಡಂತೆ’ ವಿಷಯದ ಬಗ್ಗೆ ಉಪ ನ್ಯಾಸ ನೀಡಿದರು. ನಾನಾ ದೇಶದಲ್ಲಿ ಬೌದ್ಧ ಧರ್ಮ ನಿರಂತರವಾಗಿ ಬೆಳೆಯುತ್ತಿದೆ. ಅಮೆ ರಿಕಾದ ಕೊಲಂಬಿಯಾ ವಿವಿಯಲ್ಲಿ ಬುದ್ಧನ ಕುರಿತ ಕೋರ್ಸ್ ಇದೆ ಎಂದರು.
ಅಂದು ಅಂಬೇಡ್ಕರ್ ಅವರು 5 ಲಕ್ಷ ಜನರನ್ನು ಬೌದ್ಧ ಧರ್ಮಕ್ಕೆ ಮತಾಂತರ ಮಾಡಿದ ವಿಚಾರವನ್ನು ಇಂದು ಮುಚ್ಚಿಡ ಲಾಗುತ್ತಿದೆ. ಯಾರೂ ಬರೆಯುತ್ತಿಲ್ಲ. ಹೇಳು ತ್ತಿಲ್ಲ. ಅದನ್ನು ಬೆಳಕಿಗೆ ತರದೇ ಮರೆ ಮಾಚಲಾಗುತ್ತಿದೆ. ಅಂಬೇಡ್ಕರ್ ಅವರ ಬದುಕಿನಲ್ಲಿ ಅದು ಮಹತ್ವದ ದಿನವಾಗಿದೆ ಎಂದರು. ನವಯಾನ ಬುದ್ಧ ದÀಮ್ಮ ಒಕ್ಕೂ ಟದ ಪ್ರಧಾನ ಸಂಚಾಲಕ ಬಿ.ಎಂ.ಲಿಂಗ ರಾಜು ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟ: ಪುರ ಭವನ ಆವರಣದಲ್ಲಿ ಪ್ರಗತಿಪರ ಸಂಘಟನೆ ಗಳ ಒಕ್ಕೂಟ ಏರ್ಪಡಿಸಿದ್ದ ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಜೀವನ ಮತ್ತು ಹೋರಾಟ ಕುರಿತು ಉಪನ್ಯಾಸ ನೀಡಲಾಯಿತು. ಉರಿ ಲಿಂಗಿಪೆದ್ದಿಮಠದ ಜಾÐನಪ್ರಕಾಶ್ ಸ್ವಾಮೀಜಿ, ಬುದ್ಧ ಪ್ರಕಾಶ್ ಸ್ವಾಮೀಜಿ, ಮುಡುಕು ತೊರೆ ಉರಿಲಿಂಗಿಪೆದ್ದಿಮಠದ ಸಿದ್ದರಾಮ ಶಿವಯೋಗಿ ಸ್ವಾಮೀಜಿ, ಬಸವ ಧ್ಯಾನ ಮಂದಿರದ ಬಸವಲಿಂಗಮೂರ್ತಿ ಶರಣರು, ಸೂಫಿ ಸಂತ ಅಜೀಂ ಆಲಿಶಾ, ದಸಂಸ ಮುಖಂಡ ಹರಿಹರ ಆನಂದಸ್ವಾಮಿ ಇನ್ನಿ ತರರು ಉಪಸ್ಥಿತರಿದ್ದರು.
ಮೈಸೂರು ಜಿಲ್ಲಾ ಕಾಂಗ್ರೆಸ್: ಮೈಸೂರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರ ನಾಥ್ ಪುಷ್ಪಾರ್ಚನೆ ಮಾಡಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ಕೆಪಿಸಿಸಿ ಕಾರ್ಯದರ್ಶಿ ವೀಣಾ, ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಲತಾ ಮೋಹನ್, ಮೈಸೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಂದಿನಿ ಚಂದ್ರಶೇಖರ್, ಶೌಕತ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಈಶ್ವರ ಚಕ್ಕಡಿ ಇನ್ನಿತರ ಪದಾಧಿಕಾರಿಗಳು, ಮುಖಂ ಡರು ಭಾಗವಹಿಸಿದ್ದರು.
ಬಿಜೆಪಿ ಎಸ್‍ಸಿ ಮೋರ್ಚಾ: ಮೈಸೂರು ನಗರ ಬಿಜೆಪಿ ಎಸ್‍ಸಿ ಮೋರ್ಚಾ ವತಿ ಯಿಂದ ಅಧ್ಯಕ್ಷ ನಾಗರಾಜ್ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಬಿಜೆಪಿ ಮೈಸೂರು ನಗರಾಧ್ಯಕ್ಷ ಡಾ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾಜೀವ್, ಮಾಧ್ಯಮ ಪ್ರಮುಖ್ ಪ್ರಭಾಕರ್ ಸಿಂಧ್ಯಾ, ರಾಜ್ಯ ಎಸ್‍ಸಿ ಮೋರ್ಚಾ ಕಾರ್ಯದರ್ಶಿ ಗಿರಿಧರ್, ಪದಾಧಿಕಾರಿಗಳಾದ ನಂದಕುಮಾರ್, ಕಾರ್ತಿಕ್, ಮಣಿರತ್ನಂ, ಸಂತೋಷ್, ಮುರಳಿ ಇನ್ನಿತರರು ಉಪಸ್ಥಿತರಿದ್ದರು.