ಮೈಸೂರು: ಮೈಸೂರಿನ 49ನೇ ವಾರ್ಡ್‍ನ ಲಕ್ಷ್ಮೀಪುರಂ ಪೊಲೀಸ್ ಠಾಣೆ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಆರ್‍ಟಿಓ ಕಚೇರಿ ಸೇರಿದಂತೆ ಹೆಚ್ಚು ಜನಸಂದಣಿ ಇರುವ ಈ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯದ ಅಗತ್ಯತೆ ಬಗ್ಗೆ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಈ ಶೌಚಾಲಯ ನಿರ್ಮಾಣಗೊಂಡಿದೆ. ಶೌಚಾಲಯಕ್ಕೆ ಅಗತ್ಯ ನೀರಿನ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿತ್ತು. ಈ ಭಾಗದ ಪಾಲಿಕೆ ಸದಸ್ಯೆ ಸೌಮ್ಯ ಉಮೇಶ್ ಅವರ ಆಸಕ್ತಿಯಿಂದ ಕಾಮಗಾರಿ ತ್ವರಿತವಾಗಿ ನಡೆದಿದೆ ಎಂದು ಹೇಳಿದರು.
ನಗರಪಾಲಿಕೆ ಸದಸ್ಯೆ ಸೌಮ್ಯ ಉಮೇಶ್, ಕಿರಿಯ ಸಹಾಯಕ ಇಂಜಿನಿಯರ್ ಮೋಹನ್‍ಕುಮಾರ್, ಕಾರ್ಯ ನಿರೀಕ್ಷಕ ಅಂಜನಪ್ಪ, ಆರೋಗ್ಯಾಧಿಕಾರಿ ಮಂಜು ನಾಥ್, ಇಂಜಿನಿಯರ್ ಕೃಷ್ಣೇಗೌಡ, ನಾಗಶಂಕರ್, ಗುರು ರಾಘವೇಂದ್ರ, ರಮೇಶ್, ಅನ್ನಪೂರ್ಣ, ಕೀರ್ತಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.