ತಂತಿ ಮೇಲಿನ ನಡಿಗೆ: ಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ: ಎಸ್.ಎ.ರಾಮದಾಸ್
ಮೈಸೂರು

ತಂತಿ ಮೇಲಿನ ನಡಿಗೆ: ಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ: ಎಸ್.ಎ.ರಾಮದಾಸ್

October 1, 2019

ಮೈಸೂರು, ಸೆ.30 (ಆರ್‍ಕೆಬಿ)- ನನ್ನದು ತಂತಿ ಮೇಲಿನ ನಡಿಗೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಪ್ರತಿಕ್ರಿಯಿಸಿದ್ದು, ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಮಾತನಾಡಲು ನಾನಿನ್ನು ಚಿಕ್ಕವನು. ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಅವರಿಗೆ ಒತ್ತಡ ಇದ್ದೇ ಇರುತ್ತದೆ. ಅವರು ನಮ್ಮ ನಾಯಕರು. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ತಿಳಿಸಿದ್ದಾರೆ.

ಅನರ್ಹರ ಕುರಿತ ಶಾಸಕ ಉಮೇಶ್ ಕತ್ತಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ದಂತೆ, ಮೊದಲು ಮನೆಗೆ ಬಂದವರಿಗೆ ಊಟ ಹಾಕಬೇಕು. ನಾವು ಹಸಿದು ಕೊಂಡಿದ್ದರೂ ಪರವಾಗಿಲ್ಲ. ಅವರಿಗೆ ಊಟ ಹಾಕುತ್ತೇವೆ. ಅರ್ಹತೆ ವಿಚಾರ ದಲ್ಲಿ ಈ ಭಾಗದಲ್ಲಿ ನಾನೊಬ್ಬನೇ ಬಿಜೆಪಿಯಲ್ಲಿ ಹಳಬ ಎಂದರು. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ. ಸಂಘ ನನಗೆ ಒಂದು ಶಿಸ್ತು ಕಲಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಹೇಗೆ ವರ್ತಿಸಬೇಕು ಎಂಬುದನ್ನು ಕಲಿತಿದ್ದೇನೆ. ಹಾಗಾಗಿ ಉಮೇಶ್ ಕತ್ತಿ ಹೇಳಿಕೆ ಅವರಿಗೆ, ನನ್ನ ಅಭಿಪ್ರಾಯ ನನಗೆ ಎಂದರು.

Translate »