ಮೈಸೂರು: ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಬುಧವಾರ ತಮ್ಮ ಕ್ಷೇತ್ರ ವ್ಯಾಪ್ತಿಯ ಮೂರು ವಾರ್ಡ್‍ಗಳಲ್ಲಿ ಒಟ್ಟು 95 ಲಕ್ಷ ರೂ. ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
52ನೇ ವಾರ್ಡ್‍ನಲ್ಲಿ ಜೆ.ಸಿ.ನಗರದ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದ ರಸ್ತೆಗಳಿಗೆ 45 ಲಕ್ಷ ರೂ. ವೆಚ್ಚದ ಡಾಂಬರೀಕರಣ ಕಾಮಗಾರಿ, 51ನೇ ವಾರ್ಡ್ ಎಂ.ಜಿ.ರಸ್ತೆಯಲ್ಲಿ 5.5 ಲಕ್ಷ ರೂ. ವೆಚ್ಚದಲ್ಲಿ ಜೆಎಸ್‍ಎಸ್ ಆಸ್ಪತ್ರೆ ಬಳಿ ಎಲೆತೋಟದ ಹತ್ತಿರ ಚರಂಡಿ ನಿರ್ಮಾಣ ಮತ್ತು 62ನೇ ವಾರ್ಡ್‍ನಲ್ಲಿ ಜೆ.ಪಿ.ನಗರ ಕಂದಾಯ ಕಾಲೋನಿಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ಕಾಮ ಗಾರಿಯನ್ನು ಗುಣಮಟ್ಟದಿಂದ ಶೀಘ್ರ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
51ನೇ ವಾರ್ಡ್‍ನಲ್ಲಿ ಅಗ್ರಹಾರ ಮತ್ತು ಸುತ್ತಮುತ್ತ ಲಿಂದ ಮಳೆ ನೀರು ಬಂದರೆ ಜೆಎಸ್‍ಎಸ್ ಆಸ್ಪತ್ರೆ ಎಲೆತೋಟದ ಹತ್ತಿರ ತಡೆಯಾಗುತ್ತಿತ್ತು. ಇದರಿಂದ ಅಲ್ಲಿನ ನಿವಾಸಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿತ್ತು. ಇದನ್ನು ಮನಗಂಡು ಇಲ್ಲಿ ಸಂಪರ್ಕ ಚರಂಡಿಯನ್ನು ನಿರ್ಮಿಸಿ ಮಳೆ ನೀರು ಸರಾಗವಾಗಿ ಹೋಗುವಂತೆ ಮಾಡಲು ನಗರಪಾಲಿಕೆ ಅನುದಾನದ ವತಿಯಿಂದ 5.50 ಲಕ್ಷ ರೂ ವೆಚ್ಚದಲ್ಲಿ ಬಾಕ್ಸ್ ಮಾದರಿ ಚರಂಡಿ ನಿರ್ಮಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಬಿಜೆಪಿ ಮುಖಂಡ ರಾದ ಬಾಲಕೃಷ್ಣ, ರಾಜ್‍ಕುಮಾರ್, ಭಾಸ್ಕರ್, ವೆಂಕ ಟೇಶ್, ಗುರು, ರಾಮಪ್ರಸಾದ್, ಮಧು, ಧರ್ಮೇಂದ್ರ, ರೇಖಾ, ಶಿವಕುಮಾರಿ, ಮಂಜುಳಾ, ಪಾಲಿಕೆ ವಲ ಯಾಧಿಕಾರಿಗಳಾದ ಸುನಿಲ್‍ಬಾಬು, ಸೋಮ ಶೇಖರಪ್ಪ ಇನ್ನಿತರರು ಉಪಸ್ಥಿತರಿದ್ದರು.
52ನೇ ವಾರ್ಡ್‍ನಲ್ಲಿ ಮುಡಾ ಅನುದಾನದಲ್ಲಿ ಜೆ.ಸಿ.ನಗರದ ಚಾಮುಂಡೇಶ್ವರಿ ದೇವಸ್ಥಾನದಿಂದ ಎಲ್ಲಾ ರಸ್ತೆಗಳ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ವೇಳೆ ಸ್ಥಳೀಯ ನಗರಪಾಲಿಕೆ ಸದಸ್ಯೆ ಛಾಯಾದೇವಿ, ಬಿಜೆಪಿ ಮುಖಂಡರಾದ ಪ್ರಸನ್ನ, ಹರೀಶ್, ನವೀನ್, ಸಂತೋಷ್ ಇತರರು ಭಾಗವಹಿಸಿದ್ದರು.
62ನೇ ವಾರ್ಡ್‍ನಲ್ಲಿ ನಗರಪಾಲಿಕೆ ಅನುದಾನ 45 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಜೆ.ಪಿ.ನಗರದ ಕಂದಾಯ ನಗರದಲ್ಲಿರುವ ವಿಠಲಧಾಮ ದೇವಸ್ಥಾನದಿಂದ ಹಲವು ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡ ಲಾಯಿತು. ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯೆ ಶಾಂತಮ್ಮ ವಡಿವೇಲು, ಬಿಜೆಪಿ ಮುಖಂಡರಾದ ದೇವರಾಜೇಗೌಡ, ನಾಗೇಂದ್ರ, ಸುರೇಶ್, ಪ್ರಸನ್ನ, ಲಕ್ಷ್ಮಿನಾರಾಯಣ ಇನ್ನಿತರರು ಉಪಸ್ಥಿತರಿದ್ದರು.
ವಿವಿಧ ಕಾಮಗಾರಿಗಳ ಚಾಲನೆಗೆ ತೆರಳಿದ್ದ ಶಾಸಕ ರಿಗೆ ಬಹುತೇಕ ಕಡೆಗಳಲ್ಲಿ ಬೀದಿ ದೀಪಗಳ ಬಗ್ಗೆ ದೂರು ಗಳು ಕೇಳಿಬಂದವು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಮದಾಸ್, ಆದಷ್ಟು ಬೇಗ ಎಲ್‍ಇಡಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜೆ.ಪಿ.ನಗರದ ಕಂದಾಯನಗರ ಬಡಾವಣೆಯಲ್ಲಿ 20 ವರ್ಷದಿಂದ ರಸ್ತೆಗಳ ಮೆಟಲಿಂಗ್, ಡಾಂಬರೀಕರಣ ಆಗಿರಲಿಲ್ಲ. ಈ ಬಗ್ಗೆ ನಿವಾಸಿಗಳಿಂದ ದೂರು ಬಂದಿತ್ತು. ಹೀಗಾಗಿ ಅಲ್ಲಿನ 10 ಅಡ್ಡರಸ್ತೆಗಳು ಹಾಗೂ ಒಂದು ಮುಖ್ಯ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾ ಗಿದೆ. ಶೀಘ್ರದಲ್ಲಿ ಕಾಮಗಾರಿ ಮುಗಿಯಲಿದೆ ಎಂದರು.