ಮೈಸೂರು ಸಂಚಾರ ಠಾಣೆ ಪೊಲೀಸರಿಂದ ಆಟೋರಿಕ್ಷಾ ತಪಾಸಣೆ ಅಭಿಯಾನ
ಮೈಸೂರು

ಮೈಸೂರು ಸಂಚಾರ ಠಾಣೆ ಪೊಲೀಸರಿಂದ ಆಟೋರಿಕ್ಷಾ ತಪಾಸಣೆ ಅಭಿಯಾನ

January 23, 2019

ಮೈಸೂರು: ಅನುಚಿತ ವರ್ತನೆ, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ, ಕರೆದಲ್ಲಿಗೆ ಬರದಿರುವ ಹಾಗೂ ಸಂಚಾರ ನಿಯಮ ಉಲ್ಲಂಘಿಸುವ ಆಟೋ ರಿಕ್ಷಾ ಚಾಲಕರಿಗೆ ಪಾಠ ಕಲಿಸಲು ಮುಂದಾಗಿರುವ ನಗರ ಸಂಚಾರ ಪೊಲೀಸರು ಬುಧವಾರ ಮೈಸೂರಿನಲ್ಲಿ ವಿಶೇಷ ಅಭಿಯಾನ ಕೈಗೊಂಡು ನೂರಾರು ಆಟೋರಿಕ್ಷಾಗಳ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದ ಚಾಲಕರಿಂದ ದಂಡ ವಸೂಲಿ ಮಾಡಿದರು.

ಸಾರ್ವಜನಿಕ ವಲಯದಿಂದ ಹಲವಾರು ದೂರು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಎಲ್ಲೆಡೆ ಸಂಚಾರ ಪೊಲೀಸರು ಏಕಕಾಲಕ್ಕೆ ಅಭಿಯಾನ ಆರಂಭಿಸಿ, ಆಟೋ ರಿಕ್ಷಾಗಳನ್ನು ತಪಾಸಣೆ ಮಾಡಿದರು. ಈ ವೇಳೆ ಚಾಲನಾ ಪರವಾನಗಿ, ಪರ್ಮಿಟ್, ವಿಮೆ, ಆರ್‍ಸಿ ಪುಸ್ತಕ, ದಾಖಲೆಗಳನ್ನು ರಿಕ್ಷಾ ದಲ್ಲಿ ಪ್ರದರ್ಶಿಸಿರದ, ಸಮವಸ್ತ್ರ ಧರಿಸದಿ ರುವ, ಸಂಚಾರ ನಿಯಮ ಉಲ್ಲಂಘನೆ ಪ್ರಕ ರಣಗಳ ಬಗೆಗೂ ಪರಿಶೀಲನೆ ನಡೆಸಿದರು.

ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸ್ಥಳ ದಲ್ಲಿ ನಿಲುಗಡೆ ಮಾಡಿರುವುದೂ ಸೇರಿ ದಂತೆ ಸಂಚಾರ ನಿಯಮ ಉಲ್ಲಂಘಿಸಿ ರುವ ವಿವಿಧ ಪ್ರಕರಣದಲ್ಲಿ ದಂಡ ವಿಧಿಸಿ ದ್ದರೂ ಪೊಲೀಸರ ಕೈಗೆ ಸಿಕ್ಕದೆ ಓಡಾಡು ತ್ತಿದ್ದ ರಿಕ್ಷಾಗಳು ಇಂದು ಸಿಕ್ಕಿಬಿದ್ದವು. ಈ ಎಲ್ಲಾ ರಿಕ್ಷಾ ಚಾಲಕರಿಂದಲೂ ದಂಡದ ಮೊತ್ತ ಸಂಗ್ರಹಿಸಲಾಯಿತು.

ದೇವರಾಜ, ಕೆ.ಆರ್.ಸಂಚಾರ, ವಿವಿ ಪುರಂ, ಎನ್.ಆರ್, ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀಸರು ತಮ್ಮ ಕ್ಷೇತ್ರ ವ್ಯಾಪ್ತಿ ಯಲ್ಲಿ ಏಕಕಾಲಕ್ಕೆ ಬೆಳಿಗ್ಗೆ 10.30ರಿಂದ ಸಂಜೆವರೆಗೂ ವಿಶೇಷ ಅಭಿಯಾನ ನಡೆಸಿ ನೂರಾರು ಆಟೋರಿಕ್ಷಾಗಳ ತಪಾಸಣೆ ನಡೆಸಿದರು. ಜೆಎಲ್‍ಬಿ ರಸ್ತೆಯ ಇನ್ಸ್‍ಸ್ಟಿ ಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆ ಬಳಿ ಕೆ.ಆರ್.ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಆರ್.ಜಗದೀಶ್ ನಡೆಸುತ್ತಿದ್ದ ಆಟೋರಿಕ್ಷಾ ತಪಾಸಣಾ ಅಭಿಯಾನದಲ್ಲಿ ಸಂಚಾರ ವಿಭಾಗದ ಎಸಿಪಿ ಜಿ.ಎ.ಮೋಹನ್ ಪಾಲ್ಗೊಂಡು ಖುದ್ದಾಗಿ ಆಟೋರಿಕ್ಷಾಗಳ ದಾಖಲೆ ಪರಿಶೀಲಿಸಿ ನಿಯಮ ಉಲ್ಲಂಘಿ ಸಿದವರಿಗೆ ದಂಡ ವಿಧಿಸುವಂತೆ ಸೂಚಿಸಿದರು.

ಪೊಲೀಸ್ ಆಯುಕ್ತ ಡಾ.ಎ. ಸುಬ್ರ ಹ್ಮಣ್ಯೇಶ್ವರರಾವ್ ಅವರ ಸೂಚನೆ ಮೇರೆಗೆ ಈ ಅಭಿಯಾನ ಮುಂದುವರೆಸುತ್ತೇವೆ. ಸಂಚಾರ ನಿಯಮ ಉಲ್ಲಂಘಿಸುವ ಆಟೋ ರಿಕ್ಷಾ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕೇವಲ ಒಂದು ದಿನ ಮಾತ್ರ ತಪಾಸಣೆ ನಡೆಸಿ ಸುಮ್ಮನಾಗುತ್ತಾರೆಂದು ಭಾವಿಸ ಬೇಡಿ ಎಂದು ಎಸಿಪಿ ಎಚ್ಚರಿಸಿದರು.

Translate »