Tag: Mysuru

ಗಾಣಿಗರ ಗೆಳೆಯರ ಕ್ಷೇಮಾಭಿವೃದ್ಧಿ ಸಂಘದ ಕ್ಯಾಲೆಂಡರ್ ಬಿಡುಗಡೆ
ಮೈಸೂರು

ಗಾಣಿಗರ ಗೆಳೆಯರ ಕ್ಷೇಮಾಭಿವೃದ್ಧಿ ಸಂಘದ ಕ್ಯಾಲೆಂಡರ್ ಬಿಡುಗಡೆ

January 26, 2020

ಮೈಸೂರು: ಕರ್ನಾಟಕ ರಾಜ್ಯ ಗಾಣಿಗರ ಗೆಳೆಯರ ಕ್ಷೇಮಾಭಿ ವೃದ್ಧಿ ಸಂಘದಿಂದ ಹೊರತಂದಿರುವ ನೂತನ ವರ್ಷದ ದಿನದರ್ಶಿಕೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು. ದಿನದರ್ಶಿಕೆ ಬಿಡುಗಡೆ ಮಾಡಿದ ಮಾಜಿ ಮೇಯರ್ ಅನಂತು ಮಾತನಾಡಿ, ಕಳೆದ ವರ್ಷವೂ ಸಂಘದಿಂದ ಕ್ಯಾಲೆಂಡರ್ ಬಿಡು ಗಡೆ ಮಾಡಲಾಗಿತ್ತು. ಅದನ್ನು ಈ ವರ್ಷವೂ ಮುಂದುವರೆಸಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು. ಕಳೆದ 5 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂಘವು ಸಮುದಾಯದ ಶ್ರೇಯೋಭಿ ವೃದ್ಧಿಗೆ ಶ್ರಮಿಸುತ್ತಿದೆ. ಅದರಲ್ಲೂ ವಿದ್ಯಾರ್ಥಿ…

ಪ್ರಾದೇಶಿಕ ಉದ್ಯೋಗ ಮೇಳ ಪೂರ್ವಭಾವಿ ಸಭೆ
ಮೈಸೂರು

ಪ್ರಾದೇಶಿಕ ಉದ್ಯೋಗ ಮೇಳ ಪೂರ್ವಭಾವಿ ಸಭೆ

January 25, 2020

ಮೈಸೂರು: ಮಂಡ್ಯ, ಮಡಿ ಕೇರಿ ಸೇರಿದಂತೆ ಮೈಸೂರಿನಲ್ಲಿ ಆಯೋ ಜಿಸಿರುವ ಪ್ರಾದೇಶಿಕ ಮಟ್ಟದಉದ್ಯೋಗ ಮೇಳ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮ ಅವರ ಅಧ್ಯಕ್ಷತೆ ಯಲ್ಲಿ ಶುಕ್ರವಾರ ಡಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಈವೇಳೆ ಎಡಿಸಿ ಪೂರ್ಣಿಮ ಮಾತ ನಾಡಿ, ಮಂಡ್ಯ, ಮಡಿಕೇರಿ ಒಳಗೊಂಡಂತೆ ಮೈಸೂರನ್ನು ಕೇಂದ್ರಿಕರಿಸಿ ಪ್ರಾದೇಶಿಕ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಉದ್ಯೋಗ ಮೇಳಕ್ಕೆ ಬರುವ ಅಭ್ಯರ್ಥಿ ಗಳಿಗೆ ಸಾರಿಗೆ ಸೌಲಭ್ಯ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಅಲ್ಲದೆ ಅಭ್ಯರ್ಥಿಗಳು ಹಾಗೂ ಉದ್ಯೋಗ ದಾತರಿಗೆ ಆಹಾರ…

ಬಾಕಿ ವೇತನಕ್ಕೆ ಆಗ್ರಹಿಸಿ ವಸತಿ ನಿಲಯ ನೌಕರರ ಪ್ರತಿಭಟನೆ
ಮೈಸೂರು

ಬಾಕಿ ವೇತನಕ್ಕೆ ಆಗ್ರಹಿಸಿ ವಸತಿ ನಿಲಯ ನೌಕರರ ಪ್ರತಿಭಟನೆ

December 5, 2019

ಮೈಸೂರು: ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೈಸೂರಿನಲ್ಲಿ ಬುಧವಾರ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯದ ನೌಕರರು ಪ್ರತಿಭಟನೆ ನಡೆಸಿದರು. ಮೈಸೂರಿನ ಪಡುವಾರ ಹಳ್ಳಿ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಎಐಯುಟಿಯುಸಿ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯದ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಲಯಗಳ ನೌಕರರು ಸರ್ಕಾ ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಸಂಯುಕ್ತ ವಿದ್ಯಾರ್ಥಿನಿಲಯ ಗಳಲ್ಲಿ ಕೆಲಸ ಮಾಡುವ ನೌಕರರಿಗೆ ಕಳೆದ 6…

ಡಿ.12, ಶ್ರೀ ದಕ್ಷಿಣಾಮೂರ್ತಿ ಪೀಠಂನಲ್ಲಿ ದತ್ತ ಜಯಂತಿ ಆಚರಣೆ
ಮೈಸೂರು

ಡಿ.12, ಶ್ರೀ ದಕ್ಷಿಣಾಮೂರ್ತಿ ಪೀಠಂನಲ್ಲಿ ದತ್ತ ಜಯಂತಿ ಆಚರಣೆ

December 5, 2019

ಮೈಸೂರು: ಮೈಸೂರು ಜಯನಗರದಲ್ಲಿರುವ ಶ್ರೀ ದಕ್ಷಿಣಾಮೂರ್ತಿ ಪೀಠಂನಲ್ಲಿ ಡಿ.12ರಂದು ದತ್ತ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೀಠಾಧ್ಯಕ್ಷರಾದ ಶ್ರೀ ಚಿನ್ಮಯಾನಂದ ಸರಸ್ವತಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಡಿ.11ರಂದು ಪ್ರಾತಃಕಾಲ ಕಾಕಡಾರತಿ, ಅಭಿಷೇಕ, ಪೂಜೆ ನಡೆಯಲಿದ್ದು, ಸಂಜೆ ಸಾಗರ್ ಚಕ್ರವರ್ತಿ ಅವರಿಂದ ಸಂಗೀತ ಕಾರ್ಯಕ್ರಮವಿದೆ. ಡಿ.12ರಂದು ಪ್ರಾತಃಕಾಲ 3.30ಕ್ಕೆ ಕಾಕಡಾರತಿ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಷೋಡಶೋ ಪಚಾರ ಪೂಜೆ ಮತ್ತು ದತ್ತ ಪಾದುಕೆಗೆ ಕೇಸರಿ ಲೇಪನ, ದತ್ತ ನಾಮಸ್ಮರಣೆ ನಡೆಯಲಿದೆ. ನಂತರ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ವಿನಿಯೋಗವಿದ್ದು,…

ಮೈಸೂರು ನೆರೆ ಹಾನಿ ತುರ್ತು ಕಾಮಗಾರಿಗೆ 27 ಕೋಟಿ ಬಿಡುಗಡೆ
ಮೈಸೂರು

ಮೈಸೂರು ನೆರೆ ಹಾನಿ ತುರ್ತು ಕಾಮಗಾರಿಗೆ 27 ಕೋಟಿ ಬಿಡುಗಡೆ

September 4, 2019

ಮೈಸೂರು, ಸೆ.3(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾಗಿರುವ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಒಟ್ಟು 82 ಕೋಟಿ ರೂ. ಅಗತ್ಯವಿದ್ದು, ತುರ್ತು ಕಾರ್ಯಕ್ಕೆ ಈಗಾಗಲೇ 27 ಕೋಟಿ ರೂ. ಬಿಡು ಗಡೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರ್ಜೋಳ ತಿಳಿಸಿದರು. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಂಗಳ ವಾರ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆ ಸಿದ ಅವರು, ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆ, ಸೇತುವೆ ಹಾಗೂ ಸಾರ್ವಜನಿಕ…

ಮುರಿದು ಬಿದ್ದ ಮರ, ರೆಂಬೆ-ಕೊಂಬೆಗಳ ತೆರವು
ಮೈಸೂರು

ಮುರಿದು ಬಿದ್ದ ಮರ, ರೆಂಬೆ-ಕೊಂಬೆಗಳ ತೆರವು

May 25, 2019

ಮೈಸೂರು: ಗುರುವಾರ ಸಂಜೆ ಬಿದ್ದ ಬಿರುಗಾಳಿ ಸಹಿತ ಬಿರುಮಳೆಗೆ ನಗರದಲ್ಲಿ ವ್ಯಾಪಕವಾಗಿ ಧರೆಗುರುಳಿದ ಮರ, ರೆಂಬೆ -ಕೊಂಬೆಗಳನ್ನು ನಗರಪಾಲಿಕೆಯ ತೋಟ ಗಾರಿಕಾ ವಿಭಾಗದ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ತೆರವು ಕಾರ್ಯ ಆರಂಭಿಸಿದರು. ಆದರೆ ಇನ್ನು ಹಲವು ಕಡೆ ಮರದ ರೆಂಬೆ ಗಳ ತುಂಡರಿಸಿ ಗುಡ್ಡೆ ಹಾಕಲಾಗಿದ್ದು, ಅದನ್ನು ಯಾವಾಗ ಸಾಗಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಆಲಿಕಲ್ಲು ಸಹಿತ ಬಿರುಗಾಳಿ ಸಹಿತ ಸುರಿದ ಮಳೆಯ ರಭಸಕ್ಕೆ ಮೈಸೂರಿನ ಹಲವು ಕಡೆಗಳಲ್ಲಿ ದೊಡ್ಡ ಮರಗಳು, ಅಲ್ಲದೆ ವಿವಿಧ ರಸ್ತೆ, ವೃತ್ತಗಳಲ್ಲಿ…

ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಪುಡಿ ಪುಡಿಯಾದ ಇಟ್ಟಿಗೆಗೂಡಿನ ಪಶು ಆಸ್ಪತ್ರೆಯ ಶೀಟುಗಳು
ಮೈಸೂರು

ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಪುಡಿ ಪುಡಿಯಾದ ಇಟ್ಟಿಗೆಗೂಡಿನ ಪಶು ಆಸ್ಪತ್ರೆಯ ಶೀಟುಗಳು

May 25, 2019

ಮೈಸೂರು: ಗುರುವಾರ ಸಂಜೆ ಬಿದ್ದ ಆಲಿಕಲ್ಲು ಸಹಿತ ಭಾರೀ ಬಿರುಗಾಳಿ ಮಳೆಗೆ ಮೈಸೂರಿನ ಇಟ್ಟಿಗೆಗೂಡಿನ ಸರ್ಕಾರಿ ಪಶು ಚಿಕಿತ್ಸಾಲಯದ ಕಲ್ನಾರ್ ಶೀಟು ಗಳು ಒಡೆದು ಪುಡಿ ಪುಡಿಯಾಗಿವೆ. ಗಾಳಿಯ ರಭಸಕ್ಕೆ ಮೇಲೆದ್ದ ಶೀಟುಗಳು ಆಸ್ಪತ್ರೆಯ ಒಳಗೆ ಬಿದ್ದು ಪುಡಿಯಾದವು. ಮಳೆಯ ನೀರಿನಿಂದ ಆಸ್ಪತ್ರೆಯೊಳಗಿನ ಕುರ್ಚಿ, ಮೇಜು, ಬೀರು ತೋಯ್ದು ಹೋಗಿವೆ. ಟೇಬಲ್ ಮೇಲಿನ ಹಾಸು ಗಾಜು ಒಡೆದಿದೆ. ಮಳೆಯಿಂದ ತೊಯ್ದು ಔಷಧಿಗಳು ಹಾಳಾಗಿವೆ. ಈ ವೇಳೆ ಆಸ್ಪತ್ರೆ ಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಪ್ರಾಣಾಪಾಯವಾಗಿಲ್ಲ. ಒಟ್ಟಾರೆ 50,000ಕ್ಕೂ ಹೆಚ್ಚಿನ…

ಒಣರೆಂಬೆ ತೆರವುಗೊಳಿಸದಿದ್ದರೆ ಅನಾಹುತಕ್ಕೆ ಆಹ್ವಾನ ನೀಡಿದಂತೆ…!
ಮೈಸೂರು

ಒಣರೆಂಬೆ ತೆರವುಗೊಳಿಸದಿದ್ದರೆ ಅನಾಹುತಕ್ಕೆ ಆಹ್ವಾನ ನೀಡಿದಂತೆ…!

May 25, 2019

ಮೈಸೂರು: ಗಾಳಿ-ಮಳೆ ವೇಳೆ ಮರಗಳ ಒಣ ಕೊಂಬೆಗಳು ಧರೆಗುರುಳುವುದು ಸಾಮಾನ್ಯ. ಹಾಗೆಂದು ತಿಳಿದೂ ತಿಳಿದೂ ಎಚ್ಚರ ವಹಿಸದಿದ್ದರೆ, ಅನಾಹುತಕ್ಕೆ ಎಡೆ ಮಾಡಿದಂತೆಯೇ ಸರಿ. ಮಳೆ-ಗಾಳಿ ವೇಳೆ ಮರಗಳ ಒಣ ಕೊಂಬೆಗಳು ಬೀಳುವುದಿರಲಿ, ಬುಡ ಭದ್ರ ಇಲ್ಲವಾದರೆ ಮರಗಳೇ ನೆಲಕ್ಕುರುಳುತ್ತವೆ. ಮೈಸೂರಿನ ವಾಲ್ಮೀಕಿ ರಸ್ತೆಯ ಉದ್ದಕ್ಕೂ ಸೊಂಪಾಗಿ ಮರಗಳು ಬೆಳೆದು ನಿಂತಿವೆ. ಆ ಮೂಲಕ ಪ್ರಾಕೃತಿಕ ಸೌಂದರ್ಯ ಈ ರಸ್ತೆಗೆ ಒಲಿದು ಬಂದಿದೆ. ಉರಿಯುವ ಬಿಸಿಲಿನಲ್ಲೂ ಈ ರಸ್ತೆಯಲ್ಲಿ ತಂಪಾದ ವಾತಾವರಣ ಇರುತ್ತದೆ. ಹೌದು, ಇದು ನಿಜಕ್ಕೂ ಖುಷಿಯಾಗುವ…

ರಾಜ್ಯ ಮಟ್ಟದ `ಶಂಕರ ಕಪ್’ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಮೈಸೂರು

ರಾಜ್ಯ ಮಟ್ಟದ `ಶಂಕರ ಕಪ್’ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

May 25, 2019

ಮೈಸೂರು: ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಜಂಟಿ ಆಶ್ರಯದಲ್ಲಿ ವಿಪ್ರ ಯುವ ಕರ ಸಂಘಟನೆಗಾಗಿ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯ ಮಟ್ಟದ ಬ್ರಾಹ್ಮಣ ಸಮುದಾಯದ `ಶಂಕರ ಕಪ್’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ದೊರೆಯಿತು. ಮೈಸೂರಿನ ಬೋಗಾದಿ ರಸ್ತೆಯಲ್ಲಿ ರುವ ಮಾನಸ ಗಂಗೋತ್ರಿಯ ಕಾಫಿ ಬೋರ್ಡ್ ಮೈದಾನದಲ್ಲಿ ಏರ್ಪಡಿಸಿರುವ ಪಂದ್ಯಾವಳಿಗೆ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಬ್ಯಾಟ್ ಮಾಡುವ ಮೂಲಕ…

ಮಹಿಳೆಗೆ ವಂಚಿಸಲೆತ್ನಿಸಿದ ಗುಡ್ಡಪ್ಪನಿಗೆ ಗೂಸಾ
ಮೈಸೂರು

ಮಹಿಳೆಗೆ ವಂಚಿಸಲೆತ್ನಿಸಿದ ಗುಡ್ಡಪ್ಪನಿಗೆ ಗೂಸಾ

May 21, 2019

ಮೈಸೂರು: ಮಕ್ಕಳಾಗುವಂತೆ ಮಂತ್ರ ಮಾಡುತ್ತೇನೆಂದು ನಂಬಿಸಿ ಮಹಿಳೆಯೊಬ್ಬರನ್ನು ವಂಚಿಸಲೆತ್ನಿಸಿದ ಶನಿದೇವರ ಗುಡ್ಡಪ್ಪನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಂಜನಗೂಡು ತಾಲೂಕು, ನಲ್ಲಿನಾಥ ಪುರ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ವೆಂಕಟೇಶ್ ನಾಯಕ(23) ಎಂಬುವರೇ ಮಹಿಳೆಗೆ ವಂಚಿಸಲೆತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದು ಜಯಪುರ ಪೊಲೀಸರ ಅತಿಥಿಯಾಗಿ ರುವ ಯುವಕ. ಪಿಯುಸಿ ಫೇಲಾಗಿ ರುವ ಈತ, ಶನಿದೇವರ ಗುಡ್ಡಪ್ಪನ ವೇಷ ಧರಿಸಿ ಅವತಾರ ತಾಳಿದ್ದ. ತನ್ನ ಮೇಲೆ ದೇವರು ಬರುತ್ತದೆ ಎಂಬಂತೆ ನಟಿಸಿ ಅಮಾಯಕರಿಂದ ದೇಣಿಗೆ ಸಂಗ್ರಹಿಸುತ್ತಿದ್ದ. ಆತನ ವರ್ತನೆಯಿಂದ ಮಾರುಹೋದ…

1 2 3 193