ಪಡಿತರ ವಿತರಣೆಯಲ್ಲಿ‌ ಒಟಿಪಿ ಗೊಂದಲ
ಮೈಸೂರು

ಪಡಿತರ ವಿತರಣೆಯಲ್ಲಿ‌ ಒಟಿಪಿ ಗೊಂದಲ

March 27, 2020

ಮೈಸೂರು, ಮಾ.27(SPN)-ಮಹಾಮಾರಿ‌ ಕೊರೊನಾ ಹೆಲ್ತ್ ಕರ್ಪೂ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ವಸ್ತಗಳಾದ ಪಡಿತರ ವಿತರಣೆಯಲ್ಲಿ ಗೊಂದಲವಾಗಿದ್ದು, ಇದನ್ನು ಸರಿಪಡಿಸುವಂತೆ ಸಾರ್ವಜನಿಕರು ಜಿಲ್ಲಾಡಳಿತ ಒತ್ತಾಯಿದ್ದಾರೆ.

ಹೌದು, ರಾಮಕೃಷ್ಣ ನಗರ ಪಡಿತರ ಅಂಗಡಿಯಲ್ಲಿ‌ ರೇಷನ್‌ ವಿತರಣೆಗೆ ಒಟಿಪಿ ಇದ್ದರೆ ವಿತರಣೆ ಮಾಡುತ್ತೇವೆ ಎಂದು ನ್ಯಾಯಬೆಲೆ ಅಂಗಡಿಯವರು ತಿಳಿಸಿದ್ದು, ಸಾಮಾನ್ಯ ಜನರಿಗೆ ಆಹಾರ ಇಲಾಖೆಯ ನೂತನ ಸುತ್ತೊಲೆ ಪ್ರಕಾರ ಆಧಾರಗೆ ಜೋಡಣೆ ಮಾಡಿರುವ ಮೊಬೈಲ್ ನಂಬರಗೆ ಒಟಿಪಿ ಬರುತ್ತದೆ. ಈ ಬದಲಾವಣೆ ಮಾಂಡಿಕೊಂಡಿರುವವರಿಗೂ ಈ ಗೊಂದಲವಾಗುತ್ತಿದೆ. ಇದನ್ನು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೈಸೂರು ಮಿತ್ರನೊಂದಿಗೆ ಮಾತನಾಡಿದ ಆಹಾರ ಇಲಾಖೆ ಜೆಡಿ ಶಿವಣ್ಣ, ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆ‌ ಕೇಂದ್ರ ಸರ್ಕಾರ ಹೆಲ್ತ್ ಕರ್ಪೂ‌ ಅನುಷ್ಠಾನ ಗೊಳಿಸಿದೆ. ಇದಕ್ಕಾಗಿ ಹೊಸ ಮಾರ್ಗಸೂಚಿ ಸಿದ್ಧಪಡಿಸಿದ್ದು, ಇದನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ‌ ರವಾನೆ ಮಾಡಲಾಗುವುದು ಎಂದರು.

ಅಗತ್ಯ‌ ಮೆಡಿಸಿನ್, ದಿನಸಿಯಲ್ಲಿ‌ ವ್ಯತ್ಯಯ- ಇನ್ನೆರಡು ಮೂರು ದಿನಗಳಲ್ಲಿ ದಿನಸಿ,‌ ಮೆಡಿಸಿನ್‌‌ಗಳ‌ ಅಭಾವ ಸೃಷ್ಟಿ ಯಾಗಲಿದೆ ಎಂದು ವ್ಯಾಪಾರಿಗಳು‌ ಅಭಿಪ್ರಾಯ ಪಟ್ಟಿದ್ದಾರೆ. ಈಗಿರುವ ದಿನಸಿ, ಮೆಡಿಸಿನ್ಗಳು ನಾಲ್ಕೈದು ದಿನಗಳಲ್ಲಿ ಖಾಲಿಯಾಗುತ್ತಿವೆ. ಆದ್ದರಿಂದ‌ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Translate »